Advertisement
ಈ ಮೂಲಕ ನಮ್ಮ ಸಮಗ್ರ ಇತಿಹಾಸದ ನೆರವಿಗೆ ಅದು ಪೂರಕ ಮತ್ತು ಪ್ರೇರಕವಾಗಿರುತ್ತದೆ. ಇಂತಹ ಮಾಹಿತಿಗಳು ಸ್ಥಳೀಯ ಶಾಸನಗಳು, ವೀರಗಲ್ಲುಗಳು, ಮಾಸ್ತಿಗಲ್ಲುಗಳು, ತುರುಗೋಳ್ ಕಾಳಗ, ಪೆಣ್ ಬುಯಿಲ್ ಮುಂತಾದ ಹಲವಾರು ಸಾಕ್ಷಿ ಪ್ರಜ್ಞೆಗಳ ಮೂಲಕ ಇತಿಹಾಸ ರಚನೆಗೆ ಪ್ರೇರಕವಾಗಿದೆ ಎಂದರು.
Related Articles
Advertisement
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಾಜಕುಮಾರ್ ಮಾತನಾಡುತ್ತಾ, ಇಂದಿನ ಆಧುನಿಕ ಜಗತ್ತಿನಲ್ಲಿ ಕೂಡ ಇತಿಹಾಸದ ಅಂಶಗಳು ಪ್ರತಿನಿತ್ಯ ದಾಖಲಾಗುತ್ತವೆ. ಈ ದಾಖಲು ನಮ್ಮ ಮುಂದಿನ ಹೆಜ್ಜೆಯನ್ನು ನಿರ್ಧಾರ ಮಾಡಲು ತುಂಬಾ ಅವಶ್ಯಕ ಮತ್ತು ಅನಿವಾರ್ಯವೂ ಕೂಡ ಆಗಿದೆ. ಈ ನೆಲೆಯಲ್ಲಿ ಸ್ಥಳೀಯ ಇತಿಹಾಸದ ಕುರಿತು ತಿಳಿದುಕೊಳ್ಳಬೇಕಿರುವುದು ನಮ್ಮೆಲ್ಲರ ಅವಶ್ಯಕತೆ ಎಂದು ಹೇಳಿದರು.
ಮುಂದುವರೆದು ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ನಮ್ಮ ನಡುವೆ ಇರುವ ಪೂರ್ವಜರ ಇತಿಹಾಸ, ಭೌಗೋಳಿಕ ಇತಿಹಾಸ, ಆರ್ಥಿಕ ಇತಿಹಾಸ, ಸಾಮಾಜಿಕ ಇತಿಹಾಸ, ಸಾಂಸ್ಕೃತಿಕ ಇತಿಹಾಸ.. ಎಲ್ಲಾ ನೆಲೆಗಟ್ಟು ಕೂಡ ನಮಗೆ ತೀರ ಅಗತ್ಯ. ವಿದ್ಯಾರ್ಥಿಗಳು ಇದರ ಮಹತ್ವ ಅರಿಯಬೇಕು. ಆಗ ನಮ್ಮ ಆಲೋಚನಾ ಸಾಮರ್ಥ್ಯ, ವಿವೇಚನಾ ಕೌಶಲ್ಯ, ವ್ಯಕ್ತಿತ್ವ ವಿಕಸನಕ್ಕೆ ಸಹಾಯಕವಾಗುತ್ತದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಪುಟ್ಟಲಕ್ಷ್ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ದೇವರಾಜ್ ಸ್ವಾಗತಿಸಿ, ಜಗದೀಶ್ ಜೆ. ವಂದಿಸಿದರು.
ಪ್ರಾಧ್ಯಾಪಕರಾದ ರಾಘವೇಂದ್ರ, ಶಿವರಾಜ್, ತ್ಯಾಗರಾಜ್, ಕೃಷ್ಣವೇಣಿ ಮತ್ತು ಡಾ. ಮುರಳಿ ಕೂಡ್ಲೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.