Advertisement
ಕೈಕಟ್ಟಿ ಕುಳಿತಿದ್ದ ನನ್ನ ಕೈ ಬಿಡಿಸಿ ಕೈ ಕುಲುಕಿದ. ಡೈನಿಂಗ್ ಟೇಬಲ್ ಕಡೆ ನೋಡಿ ಅಲ್ಲಿದ್ದ ಮೂರ್‍ನಾಲ್ಕು ಸೇಬು ಕೈಗೆತ್ತಿಕೊಂಡು ತಿನ್ನತೊಡಗಿದ. ಅಭಿನಂದನೆ ದುಬಾರಿಯಾಯ್ತು ಅಂತ ನನಗೆ ಮನಸ್ಸಿನಲ್ಲಿ ಅನಿಸತೊಡಗಿತು. ಆದರೆ ಹೇಳಿಕೊಳ್ಳಲಾಗಲಿಲ್ಲ. ನಾನು ಟೇಬಲ್ ಮೇಲೆ ಸುಂದರವಾಗಿ ಕಾಣಲೆಂದು ನಿನ್ನೆ ಕೆ.ಜಿ.ಗೆ ಮೂನ್ನೂರು ರೂಪಾಯಿ ಕೊಟ್ಟು ತಂದಿಟ್ಟು ಖುಷಿ ಪಡುತ್ತಿದ್ದೆ. ಅದರಲ್ಲಿನ ಒಂದನ್ನು ತಿನ್ನುವ ಮನಸ್ಸು ಕೂಡ ಮಾಡಿರಲಿಲ್ಲ. ಇದಾದ ಮೇಲೆ ಮತ್ತೆರಡು ಬಾಳೆಹಣ್ಣು ಬಿಡಿಸಿ ತಿನ್ನತೊಡಗಿದ. ಆ ನಂತರ ಪಕ್ಕಕ್ಕೇ ಬಂದು ಕುಳಿತು ಪುಸ್ತಕದ ವಿವರಣೆ ಕೇಳತೊಡಗಿದ. ನನಗೆ ಸ್ವಲ್ಪ ಸಮಾಧಾನ ವೆನಿಸತೊಡಗಿತು. ಯಾಕೆಂದರೆ, ಇವನು ನನ್ನ ಪ್ರೀತಿಯ ಶಿಷ್ಯನಾಗಿದ್ದರಿಂದ ನನಗೆ ಕೋಪ ಜಾಸ್ತಿ ಬರಲಿಲ್ಲ. ನಾನು ಇಷ್ಟಪಟ್ಟು ಬರೆಯಲಿ, ಕಷ್ಟಪಟ್ಟು ಬರೆಯಲಿ ಬರೆದದ್ದನ್ನು ವಿಮರ್ಶೆ ಮಾಡದೆ ಒಂದೇ ಧಾಟಿಯಲ್ಲಿ ಓದಿ ಪ್ರಶಂಸೆ ಮಳೆಗೆರೆಯುತ್ತಿದ್ದ ಮುಖದ ತುಂಬ ವಿಮರ್ಶಕನ ಗಾಂಭೀರ್ಯ ಹೊತ್ತು ಪ್ರಶ್ನೆಗಳನ್ನು ಕೇಳತೊಡಗಿದ.
“”ಹಳ್ಳಿಹೈದರು”
“”ಇದನ್ನು ಯಾವಾಗ ಬರೆದಿರಿ ಸರ್?”
“”ಕಳೆದ ವರ್ಷ ಅಷ್ಟೇ”
“”ಓಹೊ! ಹಳೇ ಪುಸ್ತಕಾನಾ? ಸರ್, ಹಳೆ ಪುಸ್ತಕಕ್ಕೆ ಯಾಕೆ ಸರ್ ಬಹುಮಾನ ಕೊಡತಾರೆ?”
“”ಹಾಗಲ್ಲಪ್ಪಾ, ಪುಸ್ತಕವೊಂದನ್ನು ಬಹುಮಾನಕ್ಕೆ ಆಯ್ಕೆ ಮಾಡುವಲ್ಲಿ ಕೆಲವು ಮಾನದಂಡಗಳಿರುತ್ತವೆ. ಅದರಲ್ಲಿ ಇದು ಕೂಡ ಒಂದು”
“”ಇಲ್ಲಿಯವರೆಗೆ ನನಗೆ ಇದನ್ನು ತೋರಿಸಲೇ ಇಲ್ಲವಲ್ಲ ಸಾರ್”
“”ಹೌದು, ಬಹಳ ಮಹಣ್ತೀದ ಕೃತಿ ಅದು. ಅದಕ್ಕೆ ತೋರಿಸಲಾಗಿಲ್ಲ”
“”ಸಾರ್ ಹೇಗೆ ಬರೆದಿರಿ?”
“”ಹೀಗೆ ಒಂದಿಷ್ಟು ಪೇಪರು-ಪೆನ್ನು ತಗೊಂದು ಸಮಯಾವಕಾಶ ಮಾಡಿಕೊಂಡು ಬರೆದೆ. ಕೊನೆಗೆ ಒಂದು ಪುಸ್ತಕ್ಕಗುವಷ್ಟಾಯಿತು. ಪ್ರಿಂಟ್ ಮಾಡಿಸಿದೆ. ಸುಮ್ಮನೆ ಮನೇಲಿ ಯಾಕೆ ಇಟ್ಟುಕೋಬೇಕು ಅನ್ಕೋತಿದ್ದೆ. ಅಷ್ಟರಲ್ಲಿ ಈ ಸ್ಪರ್ಧೆ ಏರ್ಪಡಿಸಿದ ಸುದ್ದಿ ಪತ್ರಿಕೇಲಿ ಬಂದಿತ್ತಲ್ಲ, ಅವರು ಕೇಳಿದ ವಿಳಾಸಕ್ಕೆ ಕಳಿಸಿದೆ. ಪ್ರಶಸ್ತಿ ಬಂತು” ಅಂದೆ. ನಾ ಹೇಳುತ್ತಿದ್ದುದನ್ನು ಕಿವಿಯಗಲಿಸಿ ಕೇಳುತ್ತಿದ್ದವ ಮತ್ತೂಂದು ಸೇಬು ಹಣ್ಣನ್ನು ತಿನ್ನುತ್ತ, “”ಈ ಪ್ರಶಸ್ತಿಗಳೇ ಹೀಗೆ ಸರ್, ಯಾರ ಯಾರಿಗೋ ಯಾವಾಗಂದ್ರ ಆವಾಗ ದೊಬಕ್ಕನೆ ಬಂದು ಬೀಳತಾವೆ. ಈಗೀಗ ನೊಬೆಲ್ ಬಹುಮಾನ ಕೂಡಾ ದುಡ್ಡು ಕೊಟ್ರೆ ಕರೆದು ಕೊಡತಾರಂತೆ” ಅಂದ. ನನಗೆ ಗಾಬರಿಯಾಯ್ತು ಅವನ ಮಾತ ಕೇಳಿ. ಅವಾಕ್ಕಾದೆ. ಮತ್ತೂಮ್ಮೆ ಕಂಗ್ರಾಟ್ಸ್ ಹೇಳಿ, “”ನಿಮ್ಮಿಂದ ಕನ್ನಡ ಸಾಹಿತ್ಯಕ್ಕೆ ಇನ್ನಷ್ಟು ಕೃತಿಗಳು ಬರಬೇಕು ಸಾರ್. ನೀವು ಕೂಡ ಮುಂದೆ ಬರಬೇಕು” ಅಂದ. ಮತ್ತೂಂದು ಸೇಬುಹಣ್ಣು ಕೈಯಲ್ಲಿ ಹಿಡಿದುಕೊಂಡು, “”ಮತ್ತೆ ನಾಳೆ ಬರಿ¤àನಿ ಸಾರ್” ಎಂದು ಹೇಳಿ ಹೊರಟು ಹೋದ. ಮಧ್ಯಾಹ್ನ ನನ್ನ ತಂದೆಯ ಗೆಳೆಯರಿಬ್ಬರು ಬಂದರು. ಹೇಳಿಕೇಳಿ ಎಪ್ಪತ್ತೆçದರ ಆಸುಪಾಸಿನಲ್ಲಿದ್ದವರು. ಅವರಿಗೆ ಸರಿಯಾಗಿ ಕಣ್ಣು ಕಾಣಿಸದು, ಕಿವಿನೂ ಕೇಳದು. ನಾನು ನನ್ನ ರೂಮಿನಲ್ಲಿ ಯಾವುದೋ ಪುಸ್ತಕವೊಂದನ್ನು ಓದುತ್ತ ಕುಳಿತಿದ್ದೆ. ಬಂದವರೇ ನನ್ನ ಬಗೆಗೆ ಮಾತುಕತೆ ಶುರುಮಾಡಿದರು. ನಾನು ಅವರಿದ್ದಲ್ಲಿಯೇ ಹೋಗಬೇಕಾಗಿ ಬಂತು. ನಮ್ಮ ತಂದೆಗಿಂತ ಹಿರಿಯರಾದ ನಿಜಗುಣಿ ಸರ್, “”ನನ್ನ ನೋಡಿ ಏನಪಾ… ಪುಸ್ತಕ ಬರದ ಪ್ರಶಸ್ತಿ ತಗೊಂದ ಸುದ್ದಿ ಪೇಪರದಾಗ ನೋಡಿದ್ವಿ ಖರೇ ಏನ?” ಕೇಳಿದರು. ನಾನು ಅಭಿಮಾನದಿಂದ ಅಂಗಿಯ ಕಾಲರ್ ಸರಿಮಾಡಿಕೊಳ್ಳುತ್ತ, “”ಹೌದ್ರಿ” ಅಂದೆ.
Related Articles
Advertisement
ಮರುದಿನ ಬೆಳಿಗ್ಗೆ ಪೇಪರ ತರಲು ಮನೆ ಪಕ್ಕದ ಸರ್ಕಲಿನ ಬುಕ್ ಸ್ಟಾಲಿಗೆ ಹೋದೆ. ನನ್ನ ವಿದ್ಯಾ ಗುರುಗಳಾದ ಗುರಸಿದ್ದಪ್ಪನವರು ಸಾರ್ವಜನಿಕ ಹಾಗೂ ಅತ್ಯಂತ ಜನ ನಿಬಿಡವಾದ ಆ ಸ್ಥಳದಲ್ಲಿ ನಿಂತು ನಿರಾತಂಕವಾಗಿ ಬೀಡಿ ಸೇದಿ ಹೊಗೆಯುಗುಳತ ನಿಂತಿದ್ದರು.ಪಕ್ಕಾ ಇತಿಹಾಸಕರರಾದ ಅವರು ಅಂದಿನ ಇತಿಹಾಸಕ್ಕೂ ಇಂದಿನ ವರ್ತಮಾನಕ್ಕೂ ತುಲನೆಮಾಡಿ ಮಾತಾಡುವ ಕೆಟ್ಟ ಚಾಳಿ ಅವರದು. ಪ್ರತಿ ಮಾತಿಗೂ ಉದಾಹರಣೆ ಕೊಡುತ್ತಿದ್ದರು. ನಾನು ಅವರನ್ನು ಕಂಡು ಹೈಸ್ಕೂಲ್ ಹುಡುಗನಂತೆ ನಮ್ರವಾಗಿ “ನಮಸ್ತೇ ಸರಾ’ ಅಂದೆ. ಮೂಗಿನ ಮೇಲಿನ ಕನ್ನಡಕವನ್ನು ಮೇಲೇರಿಸಿಕೊಳ್ಳುತ ನನ್ನ ನೋಡಿ ಗುರುತು ಹಿಡಿದು ಕರೆದರು. “”ಪಾಂಡುರಂಗನೇನೋ?”
“”ಹೌದು ಸರ್!”
“”ಪೇಪರಿನ್ಯಾಗ ನಿನ್ನ ಹೆಸರ ಬಂದಿತ್ತಂತ ಖರೇ ಏನೋ?”
“”ಹೌದು ಸರ್, ನಿನ್ನೆ ಬಂದಿತ್ತು”
“”ಕಳ್ಳತನ ಮಾಡಿದಿಯಾ ಬದ್ಮಾಶ್?”
“”ಅಯ್ಯೋ! ಇಲ್ಲ ಸಾರ್”
“”ಮತಾöಕೆ ನಿನ್ನ ಹೆಸರು ಪೇಪರಿನ್ಯಾಗ ಬಂತೋ?”
“”ನಾನೊಂದು ಪುಸ್ತಕ ಬರೆದಿದ್ದೆ ಸಾರ್, ಅದಕ್ಕೆ ಪ್ರಶಸ್ತಿ ಬಂತು. ಅದನ್ನು ಪೇಪರಿನಲ್ಲಿ ಹಾಕಿದ್ದಾರೆ ಸಾರ್”
“”ಓಹೊ ಇಷ್ಟೇನಾ… ನಾ ಬೇರೆನೇ ಅಂದಕೊಂಡಿದ್ದೆ
ಬಿಡು. ಸದ್ಯಾ ಅದಲ್ಲವಲ್ಲ” ಅಂದರು ಬೇಸರದಿಂದ.
“”ಸಾರ್, ನೀವೆನ ಅಂದುಕೊಂಡಿದ್ದೀರಿ?” ಗಾಬರಿಯಿಂದ ಕೇಳಿದೆ. “”ಅದೇ ಶ್ರೀನಿವಾಸನಗರದಲ್ಲಿ ಬ್ಯಾಂಕ್ ದರೋಡೆ ಆಗಿತ್ತಲ್ಲ ಆ ಕಳ್ಳರೆಲ್ಲ ಸಿಕ್ಕಿಬಿದ್ದಿದ್ದಾರಂತೆ ಅವರ ಹೆಸರು ಮತ್ತು ಪೊಟೊ ಪೇಪರಿನಲ್ಲಿ ಹಾಕಿದಾರಂತೆ- ಅಂದರು. ಅದಕ್ಕೆ ಅವರ ಜೊತೆ ನಿನ್ನದು ಬಂದಿದೆಯೆನೊ- ಅಂತ ಕೇಳಿದೆ. ಅಲ್ವೋ ಈ ಹಿಂದೆ ಸರಿಯಾಗಿ ಪುಸ್ತಕ ಓದಕ್ಕಾಗದೆ ಫೇಲಾಗಿದ್ದವ ನೀನು, ನೀ ಯಾಕೋ ಪುಸ್ತಕ ಬರೆದು ಇತಿಹಾಸ ನಿರ್ಮಾಣ ಮಾಡಕ್ಕೋದೆ? ಇತಿಹಾಸ ಬಲ್ಲವರು ಮಾತ್ರ ಇತಿಹಾಸ ನಿರ್ಮಿಸೋಕೆ ಸಾಧ್ಯ ಗೊತ್ತಾ ನಿನಗೆ?” ಅಂತಂದು ಮೂಗೇರಿಸಿಕೊಂಡರು. ನನಗೆ ಕೆಟ್ಟ ಕೋಪ ಬಂತು. ವಯಸ್ಸಾದ ಮೇಲೂ ಈ ಮೇಷ್ಟ್ರಿಗೆ ಬುದ್ಧಿ ಬಂದಿಲ್ಲವಲ್ಲ ಅಂತ ಮೈ-ಮನಸು ಕುದಿಯಿತು. ಕಲಿಸಿದ ಗುರುಗಳಲ್ಲವಾ ಅನ್ನುವ ಅನುಕಂಪಕ್ಕೆ ಸುಮ್ನೆ ಬಿಡಬೇಕಾಗಿದೆ, ಅಷ್ಟೆ. ಪೇಪರ ತೆಗೆದುಕೊಂಡು ಬಿರಬಿರನೆ ಮನೇಗೆ ಹೊರಟು ಬಂದೆ.ಇದಾದ ಮರುದಿನ ಬೆಳಿಗ್ಗೆ ಕಾಲೇಜಿಗೆ ಹೊರಟೆ. ದಿನಂಪ್ರತಿ ನನ್ನ ತರಗತಿಯಲಿ ಕಲಿಯುವ ವಿದ್ಯಾರ್ಥಿಗಳ ಗುಂಪು ನನ್ನ ಕಂಡು ಕೂಡಲೇ ಧಾವಿಸಿ ಬಳಿಬಂದರು. “”ಕಂಗ್ರಾಟ್ಸ್ ಸರ್” ಅಂತ ಕೈ ಕುಲುಕಿದರು. “”ತುಂಬ ತಡವಾಗಿಯಾದರೂ ಸರಿ ನಿಮ್ಮನ್ನು ನಿಮ್ಮ ಸಾಹಿತ್ಯವನ್ನು ಗುರುತಿಸಿದರಲ್ಲ ಸರ್” ಅಂತ ಒಬ್ಬ ವಿದ್ಯಾರ್ಥಿ ಹೆಮ್ಮೆಯಿಂದ ನುಡಿದ. “”ಹೌದಪ್ಪ ” ಅಂತ ನಾನು ತುಸು ಭಾವುಕನಾಗಿಯೆ ನುಡಿದೆ. ಮತ್ತೂಬ್ಬ , “”ಸರ್‌ಗೆ ಇದೇನ ಮಹಾ ಬಿಡ್ರೊ, ಅವರ ಪ್ರತಿಭೆಗೆ ಇದಕ್ಕಿಂತಲೂ ದೊಡ್ಡ ಪ್ರಶಸ್ತಿ ಬರಬೇಕಿತ್ತು” “”ಹಾಗಲ್ಲ… ಬಂದುದನ್ನು…” “”ಬಿಡಿ ಸಾರ್, ನಿಮ್ಮದು ದೊಡ್ಡ ಗುಣ. ನೀವು ಯಾವುದನ್ನೂ ಬಯಸದ ಸಾಧು ಜನ. ಈಗಿನ ಕಾಲದಲ್ಲಿ ನಿಷ್ಠಾವಂತರಿಗೆ ಬೆಲೆಯಿಲ್ಲ ಸಾರ್”””ಯಾಕಪ್ಪಾ ಏನಾಯ್ತು?” ಆತಂಕದಿಂದ ಕೇಳಿದೆ. “”ನಿಮ್ಮನ್ನು ಇಲ್ಲಿಯವರೆಗೆ ಗುರುತಿಸದೇ ಇರೋದು ಅನ್ಯಾಯ ಅಲ್ವಾ ಸರ್?” “”ಹೋಗ್ಲಿ ಬಿಡಿ, ಇವಾಗಲಾದ್ರು ಗುರುತಿಸಿ ನೀಡಿದರಲ್ಲ” ಅಂತ ನಾನೇ ಸಮಾಧಾನ ಹೇಳಹೊರಟೆ. ಹುಡುಗರಿಗೆ ನನ್ನ ಮೇಲಿರುವ ಅಭಿಮಾನ, ಭಕ್ತಿ, ಸಾತ್ತಿ$Ìಕ ಮಮತೆ ಕಾಳಜಿ ಕಂಡು ಬೆರಗಾಗಿ ಒಳಗೊಳಗೆ ಪುಳಕಿತನಾದೆ. ನನಗೆ ಆ ಪ್ರಶಸ್ತಿಗಿಂತಲೂ ಈ ಮಾತುಗಳೇ ತುಂಬಾ ಆಪ್ತವೆನಿಸಿದವು. ದೊಡ್ಡದಾಗಿ ಕಂಡವು. ಒಬ್ಬ ಹುಡುಗ ಮುಂದೆ ಬಂದು, “”ಸಾರ್, ನಮ್ಮ ಬೀದಿಲಿ ಗಣಪತಿ ಕೂಡ್ರಸತಿದಿ. ಒಂದ ಸಾವಿರ ರೂಪಾಯಿ ದೇಣಿಗೆ ಕೊಡಿ ಸಾರ್” ಅಂದ. ಆವಾಗಿನಿಂದ ರಂಜಿತವಾಗಿ ಹೊಗಳಿ ನನ್ನನು ಬಲೂನ ಮಾಡಿದ್ದು ಇದಕ್ಕೆ ಇರಬಹುದಾ, ಅನಿಸಿತು. “”ಅಷ್ಟೊಂದು ಯಾಕೆ, ನೂರು ರೂಪಾಯಿ ತಗೊಳ್ಳಿ?” ಅಂದೆ. “”ನೂರ ರೂಪಾಯಿಗೆ ಒಂದ ಪಾಕೇಟ್ ಸಿಗರೇಟ ಬರಲ್ಲ ಸರ್” ಅಂದ. ನನಗೆ ರೇಗಿತು. “”ಅಲ್ಲಯ್ಯ, ನೀವೇನು ತರೆಲà ಕೇಳತಿದಿರಿ ಅಂತ ಗೊತ್ತ ನಿಮಗೆ? ನಿಮ್ಮ ಬೀದಿಲಿ ಗಣಪತಿ ಕೂಡ್ರಿಸುವುದಕ್ಕೆ ನಾನು ಒಬ್ನೇ ಸಾವಿರ ರೂಪಾಯಿ ಕೊಡಬೇಕಾ? ನಿಮ್ಮ ಬೀದಿಯಲ್ಲೂ ಹಣ ಸಂಗ್ರಹಿಸಿ” ಅಂದೆ. “”ಸಾರ್, ನಿಮಗೆ ಪ್ರಶಸ್ತಿ ಬಂದಿದೆ. ನಮ್ಮ ಬೀದಿಲಿ ಯಾರಿಗೂ ಬಂದಿಲ್ಲ”. “”ಅದಕ್ಕೆ?” “”ಪ್ರಶಸ್ತಿ ಜೊತೆ ನಿಮಗೆ ದುಡ್ಡು ಕೊಡತಾರಲ್ವಾ… ನೀವು ನಮಗೆ ಕೊಡಿ. ಅದರಲ್ಲಿನ ಒಂದ ಸಾವಿರ ರೂಪಾಯಿ ದೇವರಿಗೆ ಕೊಡಿ ಸಾರ್. ಮತ್ತೆ ಇಂತಹ ಪ್ರಶಸ್ತಿಗಳು ತುಂಬಾನೆ ಬರತಾವೇ ಮುಂದೆ” “”ಬಾಯಿ ಮುಚಗೊಂಡ ಸುಮ್ನೆ ಹೋಗ್ರೊ ತರೆಲ ಮಾಡಬೇಡಿ, ಅಯೋಗ್ಯರಾ” ಅಂತ ದಬಾಯಿಸಿದೆ. ಅವರೊಳಗಿನ ಒಬ್ಬನಿಗೆ ರೇಗಿತು. “”ಏನ್ಸಾರ್? ಹಿಂಗೆ ದಬಾಯಿಸ್ತಿರಾ? ಏನೋ ಪ್ರಶಸ್ತಿ ಬಂದಿದೆಯಲ್ಲ, ನಮ್ಮ ಮೇಷ್ಟ್ರು ಅಂತ ವಿಶ್ ಮಾಡೊಕೆ ಬಂದ್ರೆ ಹೀಗೆ ದಬಾಯಿಸೋದಾ? ನೊಬೆಲ್ ತಗೊಂಡವೆÅ, ಗಲ್ಲಿ ಗಲ್ಲಿ ತಿರಗಾಡತವೆÅ ಇನ್ನು ನಿಮಗೆ ಬಂದಿರೋ ಪುಟಗೋಸಿ ಪ್ರಶಸ್ತಿಗೆ ಈ ಜಂಬಾ ಬೇರೆ ಕೇಡು”- ಹೀಗೆ ನನಗೂ ಅವರಿಗೂ ತಲೆಬಿಸಿಯಾಗುವಂತೆ ಚರ್ಚೆ- ವಾಗ್ವಾದ ನಡೆದು ಕೊನೆಗೆ ಅವರೊಳಗಿನವ ಒಬ್ಬ ಮುಂದೆ ಬಂದು, “”ಇತ್ತೀಚೆಗೆ ಪ್ರಶಸ್ತಿಗಳ ಆಯ್ಕೆಯಲ್ಲಿ ಸರಿಯಾದ ಮಾನದಂಡವನ್ನು ಅನುಸರಿಸುತ್ತಿಲ್ಲ . ಪ್ರಶಸ್ತಿ ಬೆಲೆ ಗೊತ್ತಿಲ್ಲದವರೆಲ್ಲ ಪ್ರಶಸ್ತಿ ತಗೊತಿದಾರೆ. ಪಾಪ, ಒಳ್ಳೆ ಬರಹಗಾರರಿಗೆ ತುಂಬಾ ಅನ್ಯಾಯವಾಗುತ್ತಿದೆ. ಈ ವ್ಯವಸ್ಥೆ ವಿರುದ್ಧ ಹೋರಾಟ ಮಾಡಬೇಕು” ಎಂದ. “”ಹೌದು ಹೋರಾಟ ಮಾಡಬೇಕು” ಅಂತ ಉಳಿದವರು ಕೂಗತೊಡಗಿದರು.
ನಾನು ಬೆಪ್ಪನಾದೆ. – ಬಸವಣ್ಣೆಪ್ಪ ಕಂಬಾರ