Advertisement

Belthangady “ವ್ಯಕ್ತಿತ್ವದ ಸರ್ವತೋಮುಖ ವಿಕಸನವೇ ಶಿಕ್ಷಣ’

11:36 PM Aug 19, 2023 | Team Udayavani |

ಬೆಳ್ತಂಗಡಿ: ವ್ಯಕ್ತಿತ್ವದ ಸರ್ವತೋಮುಖ ವಿಕಸನವೇ ಶಿಕ್ಷಣದ ಗುರಿ. ಇಂದು ಎಲ್ಲರಿಗೂ ಉತ್ತಮಗುಣಮಟ್ಟದ ಶಿಕ್ಷಣ ಪಡೆಯಲು ಮುಕ್ತ ಅವಕಾಶವಿದ್ದು, ಶಿಕ್ಷಣದೊಂದಿಗೆ ಜ್ಞಾನ ಮತ್ತು ಕೌಶಲ ಅಭಿವೃದ್ಧಿ ಮಾಡಿಕೊಳ್ಳಬೇಕು. ಇದನ್ನು ವಿವೇಕದಿಂದ ಲೋಕಕಲ್ಯಾಣಕ್ಕಾಗಿ ಬಳಸಿ ಬದುಕಿನ ಸೊಗಡನ್ನು ಆಸ್ವಾದಿಸಿ ಆನಂದ ಪಡಬೇಕು ಎಂದು ವಾಗ್ಮಿ ಮೈಸೂರಿನ ಪ್ರೊ| ಕೃಷ್ಣೇಗೌಡ ಹೇಳಿದರು.

Advertisement

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್‌, ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಸಹಯೋಗದಲ್ಲಿ ಶನಿವಾರ ಧರ್ಮಸ್ಥಳದಲ್ಲಿ ನಡೆದ 20ನೇ ವರ್ಷದ ರಾಜ್ಯ ಮಟ್ಟದ ಅಂಚೆ ಕುಂಚ ಸ್ಪರ್ಧೆ ವಿಜೇತರ ಪುರಸ್ಕಾರ ಹಾಗೂ 29ನೇ ವರ್ಷದ ಜ್ಞಾನ ಶರಧಿ ಮತ್ತು ಜ್ಞಾನ ವಾರಿಧಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದ ಚಲನಚಿತ್ರ ನಟ ಸಿಹಿಕಹಿ ಚಂದ್ರು ಮಾತನಾಡಿ, ನಿರ್ದಿಷ್ಟ ಗುರಿ,ತ್ಯಾಗ, ದೃಢಸಂಕಲ್ಪ ಮತ್ತು ಶಿಸ್ತಿನ ಮೂಲಕ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಬದುಕಿ
ನಲ್ಲಿ ಹಾಸ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಶುಭಾಶಂಸನೆ ಮಾಡಿದ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕಿ ಸುಮಂಗಲಾ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಧನಾತ್ಮಕ ಚಿಂತನೆಯೊಂದಿಗೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಶಾಂತಿವನ ಟ್ರಸ್ಟ್‌ನ ಕಾರ್ಯಕ್ರಮಗಳಿಗೆ ಶಿಕ್ಷಣ ಇಲಾಖೆಯಿಂದ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳದ ಶ್ರದ್ಧಾ ಅಮಿತ್‌, ಧರ್ಮಸ್ಥಳ ಶಾಂತಿವನ ಟ್ರಸ್ಟ್‌ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.

Advertisement

ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ| ಶಶಿಕಾಂತ ಜೈನ್‌ ಸ್ವಾಗತಿಸಿದರು.
ಕುಂಚ-ಗಾನ-ನೃತ್ಯ ವೈಭವವಿದುಷಿ ಶ್ರೇಯ ಕೊಳತ್ತಾಯ ಮತ್ತು ಬಳಗದವರ ಗಾಯನ, ದಾವಣಗೆರೆಯ ಬಾಬಲೇಶ್ವರರ ಚಿತ್ರ ರಚನೆ ಮತ್ತು ಮಂಗಳೂರಿನ ಶಾರದಾ ಮಣಿಶೇಖರ್‌ ಶಿಷ್ಯೆಯರಿಂದ ನೃತ್ಯ ಪ್ರದರ್ಶನ ನಡೆಯಿತು.

ಅಂಚೆ ಕುಂಚ ಸ್ಪರ್ಧೆ ವಿಜೇತರು
ಪ್ರಾಥಮಿಕ ಶಾಲೆ: ಪ್ರಥಮ-ರವಿರಾಜ ಕಿರಣ ನಾಯ್ಕ, ದಿನಕರ ದೇಸಾಯಿ ಪ್ರಾಥಮಿಕ ಶಾಲೆ, ಅಂಕೋಲಾ, ದ್ವಿತೀಯ: ಕುಶಿತ್‌ ಮಲ್ಲಾರ, ಕುಮಾರಸ್ವಾಮಿ ಹಿ.ಪ್ರಾ. ಶಾಲೆ, ಸುಬ್ರಹ್ಮಣ್ಯ ತೃತೀಯ: ನಿಹಾಲಿ, ಕುಮಾರಸ್ವಾಮಿ ಆಂ.ಮಾ. ಹಿ.ಪ್ರಾ. ಶಾಲೆ ಸುಬ್ರಹ್ಮಣ್ಯ.

ಪ್ರೌಢ ಶಾಲಾ ವಿಭಾಗ: (ಪ್ರ): ಪೂರ್ವಿ ದಯಾನಂದ ಶೇಟ್‌, ಮಾರಿಕಾಂಬಾ ಸರಕಾರಿ ಪ.ಪೂ. ಕಾಲೇಜು, ಶಿರಸಿ (ದ್ವಿ): ಸಾತ್ವಿ ಕಿಣಿ, ಎಸ್‌.ವಿ.ಎಸ್‌. ಟೆಂಪಲ್‌ ಆಂ.ಮಾ, ಶಾಲೆ, ಬಂಟ್ವಾಳ (ತೃ): ಅನ್ವಿತ್‌ ಎಚ್‌, ಕೆನರಾ ಹಿ.ಪ್ರಾ. ಶಾಲೆ, ಉರ್ವ, ಮಂಗಳೂರು.

ಕಾಲೇಜು ವಿಭಾಗ: (ಪ್ರ): ಪ್ರಸಾದ ಶ್ರೀಧರ ಮೇತ್ರಿ, ಟಾಗೋರ್‌ ಸ್ಕೂಲ್‌ ಆಫ್‌ ಆರ್ಟ್‌, ಅಂಕೋಲಾ (ದ್ವಿ): ಅಖೀಲೇಶ ನಾಗೇಶ ನಾಯ್ಕ, ಕಾಮಧೇನು ಕಾಲೇಜು, ಕಾರವಾರ. (ತೃ): ಸಂದೀಪ್‌ ಆರ್‌. ಪೈ, ವಿದ್ಯೋದಯ ಪ.ಪೂ. ಕಾಲೇಜು, ಉಡುಪಿ.

ಸಾರ್ವಜನಿಕ ವಿಭಾಗ: (ಪ್ರ): ಪೂರ್ಣಿಮಾ ಜಿ.ಎಸ್‌., ತಿಣಿವೆ, ನಾಗರಕೊಡಿಗೆ, ಹೊಸನಗರ. (ದ್ವಿ): ಸಿದ್ಧಲಿಂಗಪ್ಪ ಕುರುಬರ, ಗುಡ್ಡದಮತ್ತಿಹಳ್ಳಿ, ಹಾನಗಲ್‌ ತಾಲೂಕು. (ತೃ): ಅಕ್ಷಯ ವಾಸುದೇವ ನಾಯ್ಕ, ಆವರ್ಸಾ ಅಂಚೆ, ಅಂಕೋಲಾ.

Advertisement

Udayavani is now on Telegram. Click here to join our channel and stay updated with the latest news.

Next