ಮೈಸೂರು: ಸ್ವತ್ಛ ಭಾರತ್ ಕಾರ್ಯಕ್ರಮದ ಕಾಯಕಲ್ಪ ಯೋಜನೆಯಡಿ (2019-20) ಜಯನಗರಸಮುದಾಯ ಆರೋಗ್ಯ ಕೇಂದ್ರವು ರಾಜ್ಯಕ್ಕೆಮೊದಲನೇ ಪ್ರಶಸ್ತಿಯ ಪಡೆಯುವ ಮೂಲಕರಾಜ್ಯಕ್ಕೆ ಹಾಗೂ ದೇಶಕ್ಕೆ ಮಾದರಿಯಾಗಿದೆ.
ಜಯನಗರ ಸಮುದಾಯ ಆರೋಗ್ಯಕೇಂದ್ರದಆವರಣದಲ್ಲಿ ಪ್ರಶಸ್ತಿ ಪಡೆಯಲು ಶ್ರಮಿಸಿದಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಘುಕುಮಾರ್,ಡಾ.ಬಿ.ಎಸ್.ವೀಣಾ, ಡಾ.ಜಯಮಾಲ,ಡಾ.ಎಂ.ಜಿ.ಶಿವಪ್ರಸಾದ್, ಡಾ.ತೇಜಸ್ ಕುಮಾರ್‌ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಒಂದು ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸಲು ಅಟೆಂಡರ್, ಡಿ ದರ್ಜೆನೌಕರ, ಸ್ವತ್ಛತಾ ಸಿಬ್ಬಂದಿ, ವೈದ್ಯಾಧಿಕಾರಿ ಎಲ್ಲರಸಹಕಾರ ಅಗತ್ಯ. ಜಯನಗರ ಆಸ್ಪತ್ರೆಯ ಎಲ್ಲರಸಾಂ ಕ ಶ್ರಮದ ಫಲವಾಗಿ ಮಾದರಿ ಆಸ್ಪತ್ರೆಗೌರವಕ್ಕೆ ಪಾತ್ರವಾಗಿದೆ ಎಂದರು.
ಇಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ 15 ಲಕ್ಷರೂ. ಪೈಕಿ ಶೇ. 25 ಸಿಬ್ಬಂದಿಗೆ ಇನ್ಸೆನ್‌ಟೀವ್ ಆಗಿನೀಡಿದರೆ ಶೇ. 75 ಹಣವನ್ನು ಮೂಲಭೂತ ಸೌಕರ್ಯಕ್ಕೆ ನೀಡಲಾಗುವುದು. ಜಯನಗರ ಆಸ್ಪತ್ರೆಸಿಬ್ಬಂದಿಯ ಕಾರ್ಯ ಬೇರೆ ಸಮುದಾಯಆರೋಗ್ಯ ಕೇಂದ್ರದ ಸಿಬ್ಬಂದಿಗೂ ಮಾದರಿಯಾಗಬೇಕಾಗಿದೆ. ಪ್ರಕರಣ ನಿಯಂತ್ರಣದ ಬಳಿಕಆರೋಗ್ಯ ಸಚಿವರ ಆಹ್ವಾನಿಸಿ ಬೃಹತ್ ಕಾರ್ಯಕ್ರಮ ಮಾಡಲಿದ್ದೇವೆ ಎಂದರು.
1996 ರಲ್ಲಿ ಈಭೂಮಿಗೆ 2 ಕೋಟಿ ಬೆಲೆ ಇತ್ತು. ಅಂದು ಭೂಮಿಯನ್ನ ಖರೀದಿಸಲು ಆರೋಗ್ಯ ಇಲಾಖೆಯಲ್ಲಿಹಣದ ಕೊರತೆ ಇತ್ತು. 2 ಕೋಟಿ ಹಣ ನೀಡಿಖರೀದಿಸಲು ಅಮೆರಿಕದ ವೈದ್ಯರೊಬ್ಬರುಸಿದ್ಧರಿದ್ದರು. ತಕ್ಷಣ ಸರ್ಕಾರದ ಗಮನಕ್ಕೆ ತಂದುಟೋಕನ್ ಅಡ್ವಾನ್ಸ್ ಆಗಿ ಕೇವಲ 1 ರೂ. ಅನ್ನುಮುಡಾಗೆ ಪಾವತಿಸಿ ಆರೋಗ್ಯ ಇಲಾಖೆಗೆ ದಾಖಲೆನಿರ್ಮಾಣ ಮಾಡಿಸಲಾಯಿತು ಎಂದು ಆಸ್ಪತ್ರೆನಿರ್ಮಾಣದ ವಿಚಾರವನ್ನು ಸ್ಮರಿಸಿದರು.
ಈ ವೇಳೆ ನಗರಪಾಲಿಕಾ ಸದಸ್ಯರಾದ ಶೋಭಾ,ಸುಜಾತ ರಾಮಪ್ರಸಾದ್, ಬಿ.ಕೆ ಮಂಜುನಾಥ್,ಶಾಂತವೀರಪ್ಪ,ನಾಗರಾಜ್,ಲೋಕೇಶ್,ಪ್ರದೀಪ್,ಕೃಷ್ಣ, ಸ್ಥಳೀಯ ಬಿಜೆಪಿ ಮುಖಂಡರು ಇದ್ದರು.