Advertisement

ಪ್ರಶಸ್ತಿ ನನಗೆ ಬೇಡ, ಕೋಚ್‌ಗೆ ನೀಡಿ: ಪಂಘಲ್‌

12:08 AM Sep 23, 2019 | Team Udayavani |

ಹೊಸದಿಲ್ಲಿ: “ನಾನು ಯಾವುದೇ ಪ್ರಶಸ್ತಿ ಬಯಸುವುದಿಲ್ಲ. ನನ್ನ ಗುರು ಅನಿಲ್‌ ಧಂಕರ್‌ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಿ’ ಎಂದು ಅಮಿತ್‌ ಪಂಘಲ್‌ ಮನವಿ ಮಾಡಿದ್ದಾರೆ.

Advertisement

ಪಂಘಲ್‌ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ಕೋಚ್‌ ಶ್ರಮ ಅಪಾರ
“ನಾನು ಇಂದು ಎಷ್ಟೇ ದೊಡ್ಡ ಸಾಧನೆ ಮಾಡಿರಬಹುದು, ಇದರ ಹಿಂದೆ ನನ್ನ ತರಬೇತುದಾರರ ಅಪಾರ ಶ್ರಮವಿದೆ. ಒಬ್ಬ ಕ್ರೀಡಾಪಟು ಸಾಧನೆ ಮಾಡಿದಾಗ ಆತನನ್ನು ಪ್ರತಿಯೊಬ್ಬರೂ ಹಾಡಿ ಹೊಗಳಿ ಅನೇಕ ಬಹುಮಾನ ನೀಡಿ, ಸಮ್ಮಾನ ಮಾಡುತ್ತಾರೆ. ಆದರೆ ಅವರ ಯಶಸ್ಸಿಗೆ ಕಾರಣರಾದ ತರಬೇತುದಾರರನ್ನು ಗುರುತಿಸುವುದಿಲ್ಲ. ಅವರಿಗೂ ಪ್ರಶಸ್ತಿ ನೀಡಿ ಸಮ್ಮಾನ ನಡೆಸುವ ಯಾವ ಕಾರ್ಯಗಳೂ ನಡೆಯುವುದಿಲ್ಲ. ಮುಂದಿನ ದಿನಗಳಲ್ಲಿ ಕೋಚ್‌ ಅವರಿಗೂ ಉನ್ನತ ಸ್ಥಾನಮಾನ ದೊರೆಯಲಿ ಎನ್ನುವುದು ನನ್ನ ಆಶಯ’ ಎಂದು ಪಂಘಲ್‌ ಹೇಳಿದರು.

“ಸ್ವಂತ ಮಗನಂತೆ ಕಂಡಿದ್ದಾರೆ’
“ಕೋಚ್‌ ಅನಿಲ್‌ ಧಂಕರ್‌ ಅವರು ನನ್ನನ್ನು ಒಬ್ಬ ವಿದ್ಯಾರ್ಥಿಯಾಗಿ ಯಾವತ್ತೂ ನೋಡಿದವರಲ್ಲ. ತಮ್ಮ ಸ್ವಂತ ಮಗನಂತೆ ಪ್ರೇರಣೆ ನೀಡಿದ್ದಾರೆ. ಕುಟುಂಬ ಕಾರ್ಯಗಳಿಗಿಂತ ಹೆಚ್ಚಾಗಿ ನನಗೆ ಬಾಕ್ಸಿಂಗ್‌ ಅಭ್ಯಾಸ ನೀಡುವುದರಲ್ಲೇ ಹೆಚ್ಚಾಗಿ ತೊಡಗಿ ಕೊಂಡಿದ್ದರು. ಅಂತಹ ಗುರುವನ್ನು ಪಡೆದ ನಾನು ನಿಜಕ್ಕಊ ಅದೃಷ್ಟಶಾಲಿ. ನನ್ನ ಎಲ್ಲ ಸಾಧನೆಯನ್ನೂ ಅವರಿಗೆ ಅರ್ಪಿಸುತ್ತೇನೆ’ ಎಂದು ಪಂಘಲ್‌ ಹೃದಯ ತುಂಬಿ ಹೇಳಿದರು.

“ನಾನು ಎಲ್ಲರಲ್ಲೂ ಕೇಳಿಕೊಳ್ಳು ವುದೇನೆಂದರೆ, ನನಗೆ ಪ್ರಶಸ್ತಿ-ಪದವಿ ನೀಡುವ ಬದಲು ನನ್ನ ಗುರು ಅನೀಲ್‌ ಧಂಕರ್‌ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಿ’ ಎಂದು ಪಂಘಲ್‌ ವಿನಂತಿಸಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next