Advertisement

ಜಂಗಮವಾಡಿ ಮಠದಿಂದ ಪ್ರಶಸ್ತಿ ಪ್ರದಾನ

02:46 PM Jun 25, 2019 | Vishnu Das |

ಸೊಲ್ಲಾಪುರ: ತಪಸ್ಸು ಮಾಡದೇ ಯಾವುದೇ ಸಿದ್ಧಿ ಪ್ರಾಪ್ತಿವಾಗುವುದಿಲ್ಲ. ಪ್ರತಿಯೊಬ್ಬರೂ ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ತಮ್ಮ ಜತೆಗೆ ದೇಶವು ಅಭಿವೃದ್ಧಿ ಹೊಂದಲಿದೆ ಎಂದು ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

Advertisement

ನಗರದ ಡಾ| ನಿರ್ಮಲ್‌ ಕುಮಾರ ಫಡಕುಲೆ ಸಭಾಗೃಹದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜ್ಞಾನಸಿಂಹಾಸನ ಜಂಗಮವಾಡಿ ಮಠ ವಾರಣಾಸಿ ಕಾಶಿಪೀಠದ ವತಿಯಿಂದ ಹಮ್ಮಿಕೊಂಡಿದ್ದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿ, ಸಮಾಜದಲ್ಲಿ ಒಳ್ಳೆಯ ಕಾರ್ಯ ನಿರ್ವಹಿಸಿದಾಗ ಮಾತ್ರ ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ. ಜೀವನದ ನಿಯಮಗಳು ಗೊತ್ತಿಲ್ಲದಿರುವುದರಿಂದ ಅನೇಕ ಜನರು ಸರಿಯಾದ ಮಾರ್ಗದಿಂದ ದೇಹ ಬಿಡುವುದಕ್ಕಿಂತಲೂ ರೋಗದ ಮಾರ್ಗದ ಮೂಲಕ ದೇಹ ಬಿಡುತ್ತಿದ್ದಾರೆ. ಅಲ್ಲದೆ ಅನೇಕ ಜನರು ಅನಾರೋಗ್ಯದಿಂದ ಬದುಕುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಮನಸ್ಸು ಶುದ್ಧಿಗಾಗಿ ತಪಸ್ಸು ಮಾಡುವ ಮೂಲಕ ತಮ್ಮ ಜೀವನದಲ್ಲಿ ರಾಷ್ಟ್ರ ಮತ್ತು ಸಮಾಜಕ್ಕಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಜಗದ್ಗುರು ವಿಶ್ವಾರಾಧ್ಯ ಜ್ಞಾನಸಿಂಹಾಸನ ಜಂಗಮವಾಡಿ ಮಠ ವಾರಣಾಸಿ ಕಾಶಿಪೀಠದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವೇಕ್‌ ಘಳಸಾಸಿ ಅವರಿಗೆ ಪರಂಡಕರ್‌ ಮಹಾರಾಜ ಪತ್ರಿಕೋದ್ಯಮ ಪಶಸ್ತಿ, ಫೈಯ್ನಾಜ್‌ ಶೇಖ್‌ ಅವರಿಗೆ ಸಿದ್ರಾಮಪ್ಪಾ ಭೋಗಡೆ ರಂಗಭೂಮಿ ಪ್ರಶಸ್ತಿ, ವಿಠuಲ್‌ ರಾವ್‌ ವಾಸಕರ ಗವರಿಗೆ ಶಾಂತಾಬಾಯಿ ಹಾಗೂ ನಿವೃತ್ತಿ ಗಾಯಕ್ವಾಡ್‌ ಅವರಿಗೆ ಕಿರ್ತನಕಾರ ಪ್ರಶಸ್ತಿ, ಡಾ| ಸಂಧ್ಯಾ ತೋಡಕರ್‌ ಅವರಿಗೆ ಡಾ| ಚಂದ್ರಶೇಖರ್‌ ಕಪಾಳೆ ಸಾಹಿತ್ಯ ಪ್ರಶಸ್ತಿ, ಪರಮೇಶ್ವರ ಕಾಳೆ ಅವರಿಗೆ ಬಂಡಯ್ನಾ ಮಠಪತಿ ಸಮಾಜ ಸೇವಾ ಪ್ರಶಸ್ತಿ, ಡಾ| ನಾಗನಾಥ ಯೆವಲೆ ಅವರಿಗೆ ವೀರಸಂಗಯ್ನಾ ಸ್ವಾಮಿ ಆದರ್ಶ ಶಿಕ್ಷಕ ಪ್ರಶಸ್ತಿ, ಪ್ರಭಾಕರ ಝಳಕೆ ಅವರಿಗೆ ವಿಠಾಬಾಯಿ ದೆವಪ್ಪಾ ಪಸಾರಕರ ಕೃತಜ್ಞತಾ ಪ್ರಶಸ್ತಿ ಹಾಗೂ ಸ್ವಾತಿ ಪವಾರ್‌ ಅವರಿಗೆ ಸದಾಶೀವ ಸ್ವಾಮಿ ಪ್ರಜ್ಞಾ ಪ್ರಶಸ್ತಿಯನ್ನು ಪ್ರದಾನಿಸಿ ಗಣ್ಯರು ಗೌರವಿಸಿದರು.

ಸ್ವಾತಿ ಸಾಖರಕರ್‌ ರಚಿಸಿದ ಕಥಾ ಶ್ರೀ ರಮತೆರಾಮಾಂಚಿ (ಸಂತಚರಿತ್ರ) ಹಾಗೂ ದೀವೆಲಾಗಣ ಮರಾಠಿ ಕವನ ಸಂಕಲನ ಕಾಶೀ ಜಗದ್ಗುರುಗಳು ಲೋಕಾರ್ಪಣೆಗೊಳಿಸಿದರು. ಅಲ್ಲದೆ ಶ್ರೀ ಕಾಶೀ ಜಗದ್ಗುರುಗಳು ರಚಿಸಿದ ಶ್ರೀ ಸಿದ್ಧಾಂತ ಶಿಖಾಮಣಿ ಸಮೀûಾ ಹಾಗೂ ವೀರಶೈವ ತತ್ವದರ್ಶನ ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು. ಅಲ್ಲದೆ ಇತ್ತೀಚೆಗೆ ಪಿಎಚ್‌ಡಿ ಪದವಿ ಪಡೆದ ಜಿತೇಂದ್ರ ಬಿರಾಜದಾರ ಅವರನ್ನು ಗೌರವಿಸಲಾಯಿತು. ಡಾ| ಅನೀಲ್‌ ಸಜೇì ಕಾರ್ಯಕ್ರಮ ನಿರೂಪಿಸಿದರು. ರಾಜಶೇಖರ ಬುರಕುಲೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next