Advertisement

ವಿಶೇಷ ಚೇತನರಿಗೆ ಪ್ರಶಸ್ತಿ ಪ್ರದಾನ

01:43 PM May 17, 2019 | Suhan S |

ಬಾದಾಮಿ: ವಿಕಲಚೇತನರಲ್ಲಿ ವಿಶೇಷ ವಾದ ಪ್ರತಿಭೆಯಿರುತ್ತದೆ. ಅವರಿಗೆ ಅನುಕಂಪ ನೀಡುವ ಬದಲಾಗಿ ಅವಕಾಶ ನೀಡಬೇಕು. ಯಾವುದೇ ವ್ಯಕ್ತಿ ಸಂಕಷ್ಟ ಎದುರಿಸಿ ಮುನ್ನಡೆದಾಗ ಮಾತ್ರ ಸಾಧಕರಾಗಲು ಸಾಧ್ಯ ಎಂದು ಕಸಾಪ ಅಧ್ಯಕ್ಷ ರವಿ ಕಂಗಳ ಹೇಳಿದರು.

Advertisement

ಗುರುವಾರ ಪಟ್ಟಣದ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಚೇತನ ಪ್ರಶಸ್ತಿ ಪ್ರದಾನ ಸಮಾರಂಭ, ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಕಲಚೇತನ ಮಕ್ಕಳು ಇತರ ಮಕ್ಕಳಂತೆ ಮುಂದುವರೆದಿದ್ದಾರೆ. ಅವರಿಗೆ ತಂದೆ, ತಾಯಿ, ಸುತ್ತಮುತ್ತಲು ಸಮಾಜ ಅವರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು. ಅವರಲ್ಲಿರುವ ಪ್ರತಿಭೆ ಹೊರಹಾಕಲು ಎಲ್ಲರೂ ವೇದಿಕೆ ಒದಗಿಸಬೇಕು. ಅನೇಕ ವಿಶೇಷ ಚೇತನರು ಅಗಾಧ ಸಾಧನೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಬಯಲಾಟ ಅಕಾಡೆಮಿ ಸದಸ್ಯ ಬಸವರಾಜ ಶಿಗ್ಗಾಂವಿ ಮಾತನಾಡಿ, ವಿಕಲಚೇತನರಿಗೆ ಸಹಕಾರ ನೀಡಿದರೆ ಎಲ್ಲ ರಂಗಗಳಲ್ಲಿ ಮುಂದೆ ಬರುತ್ತಾರೆ ಎಂದರು.

ತಾಪಂ ಕಚೇರಿಯ ವ್ಯವಸ್ಥಾಪಕ ಆರ್‌.ವೈ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿಡಿಪಿಒ ಕಚೇರಿಯ ಮೇಲ್ವಿಚಾರಕಿ ಎಸ್‌.ಎಲ್ ಜಾಧವ, ಅಂತರಾಷ್ಟ್ರೀಯ ಅಂಗವಿಕಲ ಕ್ರೀಡಾಪಟು ಸಿದ್ದಾರೂಢ ಕೊಪ್ಪದ, ಕಾನಿಪ ಸಂಘದ ಅಧ್ಯಕ್ಷ ಲಿಂಗರಾಜ ಚಿನವಾಲರ, ಅಂಗವಿಕಲರ ಸಂಘದ ಅಧ್ಯಕ್ಷ ಎ.ಎಂ.ಮುಲ್ಲಾ, ಜಾನಪದ ವಿದ್ವಾಂಸ ವಿರೇಶ ಬಡಿಗೇರ, ಎಂ.ಬಿ.ಪಾಟೀಲ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿವಿದ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವಿಕಲಚೇತನರಾದ ಶಂಕ್ರಪ್ಪ ಮಹಾರಾಜನವರ (ಕ್ರೀಡೆ), ಹುಚ್ಚೇಶ ಯಂಡಿಗೇರಿ (ಸಮಾಜ ಸೇವೆ), ಕವಿತಾ ಲಮಾಣಿ (ಕ್ರೀಡೆ), ಸುರೇಶ ಕೋಟಿ (ಕ್ರೀಡೆ), ರಾಜು ಕಕರಡ್ಡಿ (ಸಮಾಜ ಸೇವೆ), ವಿಕಲಚೇತನ ವಿದ್ಯಾರ್ಥಿಗಳಾದ ಪೂಜಾ ಉಳಾಗಡ್ಡಿಮಠ, ಆನಂದ ಗಾಣಿಗೇರ, ಶಾಹೀನಾ ಬಡೇಖಾನ, ಈರಣ್ಣ ಉಳ್ಳಾಗಡ್ಡಿ, ಕೃಷ್ಣಾ ಬನ್ನಿದಿನ್ನಿ, ಹನಮಂತ ಮಾದರ, ಭೀಮಪ್ಪ ಬರಗಿ ಸೇರಿದಂತೆ 12 ಜನ ವಿಶೇಷ ಚೇತನರನ್ನು ಸನ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next