Advertisement

ಮನರೂಪ ಚಿತ್ರಕ್ಕೆಪ್ರಶಸ್ತಿ ಖುಷಿ

09:07 AM Apr 04, 2020 | Suhan S |

ಕಿರಣ್‌ ಹೆಗಡೆ ನಿರ್ದೇಶನದ “ಮನರೂಪ’ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದ್ದು ಗೊತ್ತೇ ಇದೆ. ಈಗ ಹೊಸ ಸುದ್ದಿಯೆಂದರೆ, ಆ ಚಿತ್ರಕ್ಕೆ ಟರ್ಕಿಯ ಇಸ್ತಾನ್‌ಬುಲ್‌ ಫಿಲ್ಮ್ ಅವಾರ್ಡ್ಸ್‌ ಚಿತ್ರೋತ್ಸವದಿಂದ ನಾಲ್ಕು ಪ್ರಶಸ್ತಿಗಳು ದೊರೆತಿವೆ.

Advertisement

ಅತ್ಯುತ್ತಮ ದೇಶಿ ಚಲನಚಿತ್ರ ಪ್ರಶಸ್ತಿ, ಅತ್ಯುತ್ತಮ ಥ್ರಿಲ್ಲರ್‌ ಚಲನಚಿತ್ರ ಪ್ರಶಸ್ತಿ, ಅತ್ಯುತ್ತಮ ಕಲ್ಟ್ ಚಲನಚಿತ್ರ ಪ್ರಶಸ್ತಿ ಹಾಗೂ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಸರವಣ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗಳು ಲಭಿಸಿವೆ.

ನಾರ್ಸೀಸಿಸಂ ಮತ್ತು ಒಂಟಿತನದ ಹಿನ್ನೆಲೆ ಇಟ್ಟುಕೊಂಡು ಕಿರಣ್‌ ಹೆಗಡೆ ಅವರು ನಿರ್ಮಾಣದೊಂದಿಗೆ ನಿರ್ದೇಶನ ಮಾಡಿದ್ದರು. ಇತ್ತೀಚೆಗಷ್ಟೇ ಇರಾನಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಿಂದ ಅತ್ಯುತ್ತಮ ಪ್ರಯೋಗಾತ್ಮಕ ಚಲನಚಿತ್ರ ಪ್ರಶಸ್ತಿಯೂ ಲಭಿಸಿತ್ತು. ಇದೀಗ ಟರ್ಕಿ ದೇಶದ ಚಲನಚಿತ್ರೋತ್ಸವದಲ್ಲಿ ನಾಲ್ಕು ಪ್ರಶಸ್ತಿಗಳು ದೊರೆತಿದ್ದು, ಇದು ಸಹಜವಾಗಿಯೇ ಚಿತ್ರತಂಡದ ಸಂತೋಷವನ್ನು ಹೆಚ್ಚಿಸಿದೆ.

ಇಸ್ತಾನ್‌ ಬುಲ್‌ ಫಿಲ್ಮ್ ಅವಾರ್ಡ್ಸ್‌ ಚಿತ್ರೋತ್ಸವದಲ್ಲಿ “ಮನರೂಪ’ ಗಮನ ಸೆಳೆದ ಅಂಶಗಳಿವು. ಹಳ್ಳಿಯ ಪರಿಸರ ಮತ್ತು ಅರಣ್ಯದಲ್ಲಿ ಚಿತ್ರೀಕರಿಸಿರುವುದು. ಕುಟುಂಬ ಹಾಗೂ ಒಂಟಿತನದ ಹಿನ್ನೆಲೆಯಲ್ಲಿ ನಿರೂಪಿಸಲಾಗಿದೆ. ಮೊದಲ ಪ್ರಯತ್ನದಲ್ಲೇ ನಿರ್ದೇಶಕರು ಗಮನ ಸೆಳೆದಿರುವುದು ವಿಶೇಷ ಎಂಬುದನ್ನು ಚಿತ್ರೋತ್ಸವದಲ್ಲಿ ಗುರುತಿಸಲಾಗಿದೆ. ನಿರ್ದೇಶಕ ಕಿರಣ್‌ ಹೆಗಡೆ ಅವರಿಗೆ ಈ ಪ್ರಶಸ್ತಿಗಳು ಲಭಿಸಿರುವುದರಿಂದ ಚಿತ್ರತಂಡಕ್ಕೆ ಹಾಗೂ ತಂತ್ರಜ್ಞರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಚಿತ್ರಕ್ಕೆ ಗೋವಿಂದ್‌ರಾಜ್‌ ಛಾಯಾಗ್ರಹಣ ಮಾಡಿದರೆ, ಸರವಣ ಸಂಗೀತವಿದೆ. ಲೋಕಿ ಹಾಗೂ ಸೂರಿ ಆವರ ಸಂಕಲನವಿದೆ. ನಾಗರಾಜ್‌ ಅವರು ಶಬ್ಧಗ್ರಹಣ ಮಾಡಿದ್ದಾರೆ.

ಚಿತ್ರದ ಹೈಲೈಟ್‌ ಬಗ್ಗೆ ಹೇಳುವುದಾದರೆ, ಗಜಾ ನೀನಾಸಂ ಒಂದೇ ಟೇಕ್‌ನಲ್ಲಿ ಏಳು ನಿಮಿಷದ ನಟನೆ ಮಾಡಿರುವುದು. ಮುಖ್ಯವಾಗಿ ಕಟ್‌ ಇಲ್ಲದ ದೃಶ್ಯವದು. ಕ್ಯಾಮೆರಾ ಓಡಾಡುವ ಬದಲು ನಟ ಇಡೀ ಅರಣ್ಯವನ್ನು ಓಡಾಡಿ ಅಭಿನಯಿಸಿರುವುದು ಮತ್ತು ಎಮೋಷನ್‌ ಗಳನ್ನೂ ಕಟ್ಟಿಕೊಟ್ಟಿರುವುದು. ದಿಲೀಪ್‌ ಕುಮಾರ್‌ ಹಾಗೂ ಅಮೋಘ್ ಸಿದ್ಧಾರ್ಥ್ ಅವರ ಅಭಿನಯ ಮತ್ತು “ಭಯಂಕರ ಕಾಡು ಇದರೊಂದಿಗೆ ಈ ಕಾಲದ ಹುಡುಗರ ಒಂಟಿತನ, ಅಸಹಜತೆ ನೆಮ್ಮದಿಯ ಹುಡುಕಾಟದ ಛಾಯೆ ಮನರೂಪದ ಆಕರ್ಷಣೆ ಎಂಬುದು ಚಿತ್ರತಂಡದ ಮಾತು.­

Advertisement
Advertisement

Udayavani is now on Telegram. Click here to join our channel and stay updated with the latest news.

Next