ದೇವನಹಳ್ಳಿ: 2020ರ ವಿಶ್ವ ವಿಮಾನ ನಿಲ್ದಾಣ ಪ್ರಶಸ್ತಿ ಗಳಲ್ಲಿ ಭಾರತ ಮತ್ತು ಕೇಂದ್ರ ಏಷ್ಯಾದಲ್ಲಿ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಗೌರವಕ್ಕೆ ಕೆಂಪೇ ಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ. ಜತೆಗೆ ಕಳೆದ ನಾಲ್ಕು ವರ್ಷಗಳಲ್ಲಿ 3ನೇ ಬಾರಿಗೆ ಗ್ರಾಹಕರು ಮತ ನೀಡಿ ಆಯ್ಕೆ ಮಾಡಿದ್ದಾರೆ.
ಸ್ಕೈ ಟ್ರ್ಯಾಕ್ಸ್ ಸಿಇಒ ಎಡ್ವರ್ಡ್ ಪ್ಲೇಸ್ಟೆಡ್ ಮಾತನಾಡಿ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮತ್ತು ಸಿಬ್ಬಂದಿಯದ್ದು ಅದ್ಭುತ ಸಾಧನೆ. ಸಿಬ್ಬಂದಿ ಸೇವಾ ಮತ್ತು ಸೌಲಭ್ಯಗಳ ಉತ್ಕೃಷ್ಟತೆ ಗುರುತಿಸಿ ಗೌರವಿಸಲಾಗಿದೆ. ಗ್ರಾಹಕರ ಅಭಿರುಚಿಗುರುತಿಸಿ, ಉತ್ಕೃಷ್ಟ ಸೇವೆ ನೀಡುವಲ್ಲಿ ಯಶಸ್ವಿಯಾಗಿ ದ್ದಾರೆ ಎಂದರು.
ಬಿಐಎಎಲ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಹರಿ ಕೆ. ಮಾರರ್ ಮಾತನಾಡಿ, ಈ ಗೌರವಕ್ಕೆ ಪಾತ್ರವಾಗಿರುವುದು ಕೇಂಪೇಗೌಡ ವಿಮಾನ ನಿಲ್ದಾಣದ ಗಮನಾರ್ಹ ಸಾಧನೆಯಾಗಿದೆ. ನಮ್ಮ ಪ್ರವಾಸಿಗರಿಗೆ ವಿಶ್ವಮಟ್ಟದ ಅನುಭವ ನೀಡಿದ ನಮ್ಮ ಬದತೆಯನ್ನು ಈ ಪ್ರಶಸ್ತಿ ಪುನರ್ ದೃಢೀಕರಿಸಿದೆ. ಅಲ್ಲದೆ ನಮ್ಮ ಪ್ರಯಾ ಣಿಕರು ಹಾಗೂ ಪಾಲುದಾರರ ವಿಶ್ವಾಸ, ಬೆಂಬಲಕ್ಕೆ ನಾವು ಋಣಿಯಾಗಿದ್ದೇವೆ ಎಂದರು.
ವಿಶ್ವ ವಿಮಾನ ನಿಲ್ದಾಣ ಪ್ರಶಸ್ತಿಗಳು: ಇವು ವಿಮಾನ ನಿಲ್ದಾಣ ಉದ್ಯಮದಲ್ಲಿ ಅತ್ಯಂತ ಪ್ರತಿಷ್ಠಿತ ಪುರಸ್ಕಾರ ಗಳಾಗಿವೆ. ಅತ್ಯಂತ ದೊಡ್ಡದಾದ ವಾರ್ಷಿಕ ಜಾಗತಿಕ ವಿಮಾನ ನಿಲ್ದಾಣ ಗ್ರಾಹಕ ತೃಪ್ತಿ ಸಮೀಕ್ಷೆ ಮೂಲಕ ಗ್ರಾಹಕರು ಮತ ನೀಡುತ್ತಾರೆ. ಗುಣಮಟ್ಟದ ಮಾನ ದಂಡವಾಗಿ ಈ ಪ್ರಶಸ್ತಿಗಳನ್ನು ಗುರುತಿಸಲಾಗುತ್ತದೆ.
ಚೆಕ್‌ಇನ್, ಆಗಮನ, ವರ್ಗಾವಣೆಗಳು, ಶಾಪಿಂಗ್, ಭದ್ರತೆ ಮತ್ತು ವಲಸೆಯಿಂದ ನಿರ್ಗಮನದವರೆಗಿನ ವಿಮಾನ ನಿಲ್ದಾಣ ಸೇವೆ ಮತ್ತು ಉತ್ಪನ್ನ ಪ್ರದರ್ಶನ ಸೂಚ್ಯಂಕಗಳನ್ನು ಈ ಸಮೀಕ್ಷೆ ಮೌಲಿಕರಿಸಿದೆ.