ಮುಂಬಯಿ, ಅ. 1: ದಾನಗಳಲ್ಲಿ ಶ್ರೇಷ್ಠದಾನ ವಿದ್ಯಾದಾನವಾಗಿದೆ. ಸಂಘ-ಸಂಸ್ಥೆ ಗಳು ವಿದ್ಯೆಗೆ ನೀಡುವ ಸಹಾಯ ವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು, ವಿದ್ಯಾವಂತರಾಗಿ ಉತ್ತಮ ಸಮಾಜ ನಿರ್ಮಿಸಲು ಸಹಕಾರಿಯಾಗಿ ಎಂದು ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಎಲ್. ಕುಲಾಲ್ ತಿಳಿಸಿದರು.
ಇತ್ತೀಚೆಗೆ ಕುಳಾಯಿಯ ಶ್ರೀ ವೆಂಕಟ್ರಮಣ ಶಾಲೆಯಲ್ಲಿ ಕುಲಾಲ ಸಂಘ, ಕುಲಾಲ ಮಹಿಳಾ ಮಂಡಲ ಹಾಗೂ ಕುಲಾಲ ರಜತ ಸೇವಾ ಟ್ರಸ್ಟ್ ಆಯೋಜಿಸಿದ ಪ್ರತಿಭಾ ಪುರಸ್ಕಾರಮತ್ತು ದತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಕುಲಾಲ ಸಂಘ ಮುಂಬಯಿ ಇದರ ಮುಖವಾಣಿ ಅಮೂಲ್ಯ ತ್ತೈಮಾಸಿಕ ಪತ್ರಿಕೆ ಸಂಪಾದಕೀಯ ಸದಸ್ಯ ರಘುನಾಥ್ ಎಸ್. ಕರ್ಕೇರ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಸಮ್ಮಾನಿಸುವುದು ಶ್ಲಾಘನಿಯ. ನಮ್ಮ ಸಮುದಾಯದ ಅರ್ಹ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರ ಶಿಕ್ಷಣದ ಸಂಪೂರ್ಣ ವೆಚ್ಚ ಭರಿಸುವ ಕುಲಾಲ ರಜತ ಸೇವಾ ಟ್ರಸ್ಟ್‌ನ ಕಾರ್ಯಕ್ಕೆ ಇನ್ನೂ ಹೆಚ್ಚಿನ ಸಹಕಾರ ಸಿಗಲಿ ಎಂದು ಶುಭ ಹಾರೈಸಿದರು. ಜ್ಞಾನಾಮೃತ ಮಂಗಳೂರು ಇದರ ಅಧ್ಯಕ್ಷ ಲಿಂಗಪ್ಪ ಎಂ. ಶುಭ ಹಾರೈಸಿದರು.
ಕುಲಾಲ ಸಂಘದ ಅಧ್ಯಕ್ಷ ಗಂಗಾಧರ್ ಕೆ. ಅಧ್ಯಕ್ಷತೆ ವಹಿಸಿದರು. ಕುಲಾಲ ಮಹಿಳಾ ಮಂಡಲದ ಅಧ್ಯಕ್ಷೆ ಮೀರಾ ಮೋಹನ್, ಕುಲಾಲ ರಜತ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಐ. ಮೂಲ್ಯ, ಹರೀಶ್ ಕುಲಾಲ್, ಜನಾರ್ದನ ಸಾಲ್ಯಾನ್, ಗಣೇಶ್ ಕುಲಾಲ್, ಕುಮಾರ್ ಕುಲಾಲ್, ರಮೇಶ್ ಆರ್.ಕೆ., ದಿನೇಶ್ ಕುಲಾಲ್, ಗಣೇಶ್ ಎಸ್. ಕುಲಾಲ್, ದೇವದಾಸ್ ಟೈಲರ್, ಶ್ರೀನಾಥ್ ವಂಶಿ, ಪುಷ್ಪ ರಾಜ್ ಕೋಡಿಕೆರೆ, ಮೋಹನ್ ಕಾವಿನಕಲ್ಲು ಜಯಂತಿ ಕೆ., ಭಾರತಿ ಗಂಗಾಧರ್, ಶ್ವೇತ ಪುರುಷೋತ್ತಮ್, ತಾರಾ ಚಂದ್ರಹಾಸ್, ಬೇಬಿ ಟೀಚರ್, ಸುಷ್ಮಾ ಗಣೇವ್, ಉಮಾ ಯಾದವ್ ಮತ್ತಿತರರಿದ್ದರು.
ನಿರೀಕ್ಷಾ ಡಿ. ಬಂಗೇರ ಪ್ರಾರ್ಥಿಸಿದರು. ಜಯೇಶ್ ಜಿ. ಸ್ವಾಗತಿಸಿ, ಕಾರ್ಯದರ್ಶಿ ಗಂಗಾಧರ್ ಬಂಜನ್ ವಂದಿಸಿದರು. ನಾಗೇಶ್ ಕುಲಾಲ್ ನಿರೂಪಿಸಿದರು.
ಪ್ರತಿಭಾ ಪುರಸ್ಕಾರ : ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾದ 16 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಗದು ನೀಡಿ ಗೌರವಿಸಲಾಯಿತು. ದತ್ತು ಪಡೆದ 11 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚದ ಸಲುವಾಗಿ ಒಟ್ಟು 33,000 ರೂ.ಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ಉತ್ತರ ವಲಯ ಬಿಜೆಪಿ ಹಿಂದುಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ವಸಂತ್ ಹೊಸಬೆಟ್ಟು ಅವರನ್ನು ಅಭಿನಂದಿಸಲಾಯಿತು