Advertisement

Hindus ಜಾಗೃತಿ ರಾಮಮಂದಿರ ನಿರ್ಮಾಣಕ್ಕೆ ಕಾರಣವಾಯಿತು: ಪ್ರವೀಣ್ ತೊಗಾಡಿಯಾ

08:31 PM Mar 17, 2024 | Team Udayavani |

ಹೊಸದಿಲ್ಲಿ: ಹಿಂದೂಗಳ ಜಾಗೃತಿಯು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾರಣವಾಯಿತು ಎಂದು ವಿಶ್ವ ಹಿಂದೂ ಪರಿಷತ್ತಿನ ಮಾಜಿ ನಾಯಕ ಪ್ರವೀಣ್ ತೊಗಾಡಿಯಾ ಭಾನುವಾರ ಹೇಳಿದ್ದಾರೆ.

Advertisement

ಜನವರಿ 22 ರಂದು ಉದ್ಘಾಟನೆಗೊಂಡ ರಾಮ ಮಂದಿರವು ಹಿಂದೂಗಳಿಗೆ ಶೌರ್ಯದ ಕಾರಣದ ವಿಜಯವನ್ನು ಯಾವಾಗಲೂ ನೆನಪಿಸುತ್ತದೆ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ತೊಗಾಡಿಯಾ ಅವರು ಪಿಟಿಐಗೆ ತಿಳಿಸಿದರು.

ಎಂಟು ಕೋಟಿ ಮಂದಿ ಹಿಂದೂಗಳು ಭವ್ಯ ಮಂದಿರದ ಕಲ್ಲುಗಳನ್ನು ಕೆತ್ತಲು ತಲಾ 1.25 ರೂಪಾಯಿಗಳನ್ನು ದೇಣಿಗೆ ನೀಡಿದ್ದು ಹೇಗೆ ಎಂಬುದನ್ನು ಅವರು ನೆನಪಿಸಿಕೊಂಡರು. ಸುಪ್ರೀಂ ಕೋರ್ಟ್ ತೀರ್ಪು ಬರುವ ವೇಳೆಗೆ ಅಂತಹ ಸುಮಾರು 60,000 ಕಲ್ಲುಗಳು ಸಿದ್ಧವಾಗಿದ್ದವು ಎಂದರು.

”ರಾಮಶಿಲಾ ಪೂಜೆ, ಹನುಮಾನ್ ಚಾಲೀಸಾ, ರಾಮ್ ಜಾನಕಿ ಯಾತ್ರೆ, ಮಣಿಕರ್ ಸೇವೆ, ರಾಮ ಪಾದುಕಾ ಯಾತ್ರೆ, ರಾಮ ಜ್ಯೋತಿ ಯಾತ್ರೆ ಮುಂತಾದ ಕಾರ್ಯಕ್ರಮಗಳ ಮೂಲಕ ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ನಾವು ಶ್ರಮಿಸಿದ್ದೇವೆ ಎಂದರು.

ಹನುಮಾನ್ ಚಾಲೀಸಾ ಕೇಂದ್ರಗಳ ಮೂಲಕ ಹಿಂದೂಗಳ ಮತಾಂತರವನ್ನು ತಡೆಯಲು ತಮ್ಮ ಸಂಘಟನೆ ಕೆಲಸ ಮಾಡುತ್ತದೆ, ಅವುಗಳಲ್ಲಿ 13,000 ಕಾರ್ಯಕಾರಿಯಾಗಿದೆ ಮತ್ತು ಈ ಸಂಖ್ಯೆಯನ್ನು ರಾಷ್ಟ್ರವ್ಯಾಪಿ ಒಂದು ಲಕ್ಷಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

Advertisement

“ಸಂಕಷ್ಟದಲ್ಲಿರುವ ಹಿಂದೂಗಳಿಗಾಗಿ ನಾವು ಸಹಾಯವಾಣಿಯನ್ನು ಸಹ ಪ್ರಾರಂಭಿಸುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಹಿಂದೂಗಳ ಬಗ್ಗೆ ಕಾಳಜಿ ಇರುವ ಸರಕಾರವನ್ನು ಆಯ್ಕೆ ಮಾಡಲಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next