Advertisement

ಶೋಷಿತರ ಜಾಗೃತಿ ಅನಿವಾರ್ಯ: ಬಾಳಿ

07:14 AM Jan 14, 2019 | Team Udayavani |

ಅಫಜಲಪುರ: ಬಹಳ ವರ್ಷಗಳಿಂದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿರುವ ಶೋಷಿತ ಸಮುದಾಯಗಳ ಜಾಗೃತಿ ಅನಿವಾರ್ಯವಾಗಿದೆ ಎಂದ‌ು ವೈಚಾರಿಕ ಚಿಂತಕಿ ಮೀನಾಕ್ಷಿ ಬಾಳಿ ಹೇಳಿದರು. ಪಟ್ಟಣದ ಅಂಬಿಗರ ಚೌಡಯ್ಯ ನಗರದಲ್ಲಿ ಆಯೋಜಿಸಿದ್ದ ಕೋಲಿ ಸಮಾಜದ ಸರ್ಕಾರಿ ನೌಕರರ ಸಮಾವೇಶ, ವಿಠ್ಠಲ ಹೇರೂರ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

Advertisement

ಕೋಲಿ ಸಮುದಾಯದ ಜನತೆ ಮೌಡ್ಯ ಆಚರಣೆಯಿಂದ ಹೊರಕ್ಕೆ ಬರಬೇಕು. ಇದಕ್ಕಾಗಿ ಆಯಾ ಸಮುದಾಯದ ಜನರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು. ಸರಕಾರಿ ನೌಕರರ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪುರಸ್ಕೃತ ನೌಕರರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.

ಪ್ರಜ್ಞಾವಂತ ಸಮುದಾಯದ ಜನ ಮೌಡ್ಯತೆಗೊಳಗಾದ ಜನರನ್ನು ವೈಚಾರಿಕತೆಯತ್ತ ಕರೆದೊಯ್ಯುವಲ್ಲಿ ನೌಕರ ವರ್ಗ ಶ್ರಮಿಸಬೇಕು ಎಂದು ಕರೆ ನೀಡಿದರು.

ವಿಠ್ಠಲ ಹೇರೂರವರ ಭಾವಚಿತ್ರವಿರುವ ಕ್ಯಾಲೆಂಡರ್‌ ಬಿಡುಗಡೆ ಮಾಡಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಸರಕಾರಿ ನೌಕರರ ಸಂಘದ ವತಿಯಿಂದ ಗುರುತರ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾದುದು ಎಂದರು.

ಜಿಲ್ಲಾ ಕೋಲಿ ನೌಕರ ಸಂಘದ ಅಧ್ಯಕ್ಷ ನೀಲಕಂಠ ಜಮಾದಾರ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಅಣ್ಣರಾವ್‌ ಅಜಗೊಂಡ, ಬಸವರಾಜ ಚಾಂದಕವಟೆ, ನೌಕರ ಸಂಘದ ಜಿಲ್ಲಾ ಕಾರ್ಯದರ್ಶಿ ಸಿದ್ದರಾಮ ಗುಣಾರಿ, ಕರ್ನಾಟಕ ರಾಜ್ಯ ನೌಕರ ಸಂಘದ ಅಧ್ಯಕ್ಷ ಬಾಬುರಾವ್‌, ಜಮಾದಾರ ತಾಲೂಕಾ ಕೋಲಿ ಸಮಾಜದ ಅಧ್ಯಕ್ಷ ಶಂಕು ಮ್ಯಾಕೇರಿ, ತಾಲೂಕಾ ಕೋಲಿ ನೌಕರ ಸಂಘದ ಅಧ್ಯಕ್ಷ ಬಸಣ್ಣ ಹನ್ನೂರ ಮಾತನಾಡಿದರು.

Advertisement

ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಸಿಂದಗಿ ತಾಲೂಕಿನ ಕುಮಸಗಿ ಕಲ್ಲಾಲಿಂಗೇಶ್ವರ ಮಠದ ಶಿವಾನಂದ ಮಹಾಸ್ವಾಮೀಜಿ, ಸಂಘದ ಗೌರವಾಧ್ಯಕ್ಷ ದೇವಣ್ಣ ಕಿರಸಾವಳಗಿ, ಬಸವರಾಜ ನಿಂಬರ್ಗಿ, ಸಾಧೀಕ ಅಹ್ಮದ ನಾಗೂರ, ಪರಮೇಶ್ವರ ದೇಸಾಯಿ, ದಾದಾಸಾಹೇಬ ಹೊಸೂರಕರ್‌, ದೇವೇಂದ್ರ ಆನೆಗುಂದಿ, ಪಾರ್ವತಿ ಹನ್ನೂರ, ಮಲ್ಲೇಶಪ್ಪ ಬಿಂಜಗೇರಿ, ಚಂದ್ರಶೇಖರ ನಾಯಿಕೊಡಿ, ವಿಶ್ವನಾಥ ಗಂಟೆ, ನಾಗಪ್ಪ ನಾಯಿಕೊಡಿ, ಹಿರೋಜರಾವ್‌ ಪಾಟೀಲ, ಲಕ್ಷ್ಮಣ ಜೋಗೂರ, ಮಹಾದೇವ ವಡಗೇರಿ ಇದ್ದರು. ಭೀಮಾಶಂಕರ ಜಮಾದಾರ ಮಾತನಾಡಿದರು. ಭೀಮಶಾ ತೆಲ್ಲೂಣಗಿ ಸ್ವಾಗತಿಸಿದರು, ಶಿವಾನಂದ ಚಿಂಚೋಳಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next