Advertisement

ಬಾದಾಮಿ: ಮಲ್ಲಮ್ಮ ಆದರ್ಶ ಎಲ್ಲರಿಗೂ ದಾರಿದೀಪ

02:27 PM May 29, 2023 | Team Udayavani |

ಬಾದಾಮಿ: ಮಲ್ಲಮ್ಮ ಆದರ್ಶ ಎಲ್ಲರಿಗೂ ದಾರಿದೀಪಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಸಂಸ್ಕಾರ ಎಲ್ಲರ ಮೇಲಿದೆ. ದಾನಗುಣ ರಡ್ಡಿ ಸಮಾಜದ ಉತ್ತಮ ಗುಣವಾಗಿದೆ. ಆದರ್ಶಗಳು ಎಲ್ಲರಿಗೂ ದಾರಿದೀಪವಾಗಿವೆ. ಎಲ್ಲರು ಅವರ ತತ್ವಗಳನ್ನು ಅಳವಡಿಸಕೊಳ್ಳಬೇಕಿದೆ ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.

Advertisement

ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಹೇಮವೇಮ ಚಾರಿಟೇಬಲ್‌ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ರಡ್ಡಿ ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ಇಂದಿನ ದಿನಗಳಲ್ಲಿ ಎಲ್ಲರೂ ಉನ್ನತ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.

ಬಾದಾಮಿ ಶಾಸಕ ಭಿಮಸೇನ ಚಿಮ್ಮನಕಟ್ಟಿ ಮಾತನಾಡಿ, ಮಲ್ಲಮ್ಮನವರ ಆದರ್ಶ ಗುಣ ಅಳವಡಿಕೊಳ್ಳಬೇಕು. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದರು.

ಎರೆಹೊಸಳ್ಳಿ ರಡ್ಡಿ ಗುರುಪೀಠದ ಶ್ರೀ ವೇಮನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಡಿ.ಎಂ. ಪೈಲ್‌ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಚಾರ್ಯ ಡಾ| ಜಿ.ಜಿ.ಹಿರೇಮಠ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ರಡ್ಡಿ ನೌಕರರ ಸಂಘದ ಅಧ್ಯಕ್ಷ ಎಸ್‌.ಬಿ.ಮಾಚಾ, ಶ್ರೀಶೈಲ ಮಲ್ಲಿಕಾರ್ಜುನ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ವಿ.ಎಸ್‌.ದೇಸಾಯಿ, ಸಂಘದ ಉಪಾಧ್ಯಕ್ಷ ಡಿ.ಪಿ.ಅಮಲಝರಿ, ನಾರಾಯಣ ಹೊಸಮನಿ, ಕೃಷ್ಣಗೌಡ ಪಾಟೀಲ ಉಪಸ್ಥಿತರಿದ್ದರು.

Advertisement

ಬೀಳಗಿ ಶಾಸಕ ಜೆ.ಟಿ.ಪಾಟೀಲ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಸೇವೆಯಿಂದ ನಿವೃತ್ತರಾದ ರಡ್ಡಿ ಸಮಾಜದ ನೌಕರರನ್ನು ಮತ್ತು ಎಸ್‌ಎಸ್‌ ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್‌.ಎ.ಭರಮಗೌಡರ ಸ್ವಾಗತಿಸಿದರು. ಶಿಕ್ಷಕಿಯರಾದ ಮಧುಮಾಲಾ ನಾಲತವಾಡ, ಮೇಟಿ ಕಾರ್ಯಕ್ರಮ ನಿರೂಪಿಸಿದರು. ಸಿ.ಎಸ್‌.ಹೊಸಗೌಡ್ರ ವಂದಿಸಿದರು.

ಅದ್ಧೂರಿ ಕುಂಭ ಮೆರವಣಿಗೆ: ಬೆಳಿಗ್ಗೆ 8 ಗಂಟೆಗೆ 501 ಸುಮಂಗಲೆಯರಿಂದ ಆನಂದನಗರದ ಗಣೇಶ ದೇವಸ್ಥಾನದಿಂದ ಮುಖ್ಯರಸ್ತೆಯ ಮೂಲಕ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದವರೆಗೆ ಕುಂಭಮೇಳ ನಡೆಯಿತು. ಮಾಜಿ ಸಚಿವ ಎಸ್‌.ಆರ್‌ .ಪಾಟೀಲ ಕುಂಭ ಮೆರವಣಿಗೆ, ಹೇಮರಡ್ಡಿ ವåಲ್ಲಮ್ಮ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಮಾರಾಟ ಮಂಡಳಿಯ ನಿರ್ದೇಶಕ ಎಸ್‌.ಆರ್‌.ಮೆಳ್ಳಿ, ಡಿ.ಎಂ. ಪೈಲ್‌, ಎಸ್‌.ಎ.ಭರಮಗೌಡರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next