Advertisement
ನಗರದ ಸಂತ ಅಲೋಶಿಯಸ್ ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ ಜಿಲ್ಲಾ ಎನ್‌ಎಸ್‌ಯುಐ ವತಿಯಿಂದ ಜರಗಿದ ‘ಮಾದಕ ದ್ರವ್ಯ ವಿರೋಧಿ ಅಭಿಯಾನ’ದ ಉದ್ಘಾಟನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ಪರಿಸರದಲ್ಲಿ ಅಥವಾ ಸ್ನೇಹಿತ ವರ್ಗದಲ್ಲಿ ಮಾದಕ ದ್ರವ್ಯ ಜಾಲಕ್ಕೆ ಒಳಗಾದವರು ಕಂಡು ಬಂದಲ್ಲಿ ಕಾಲೇಜಿನ ಮುಖ್ಯಸ್ಥರು ಅಥವಾ ಅವರ ಮನೆಯವರಿಗೆ ತಿಳಿಸುವ ಮೂಲಕ ತಮ್ಮ ಸ್ನೇಹಿತರನ್ನು ಸರಿಪಡಿಸಲು ಸಹಕರಿಸುವ
ಕಾರ್ಯ ಮಾಡಬೇಕು ಎಂದು ಸಚಿವ ಖಾದರ್ ಸಲಹೆ ನೀಡಿದರು.
Related Articles
ಉದ್ಘಾಟಿಸಿದ ಶಾಸಕ ಜೆ. ಆರ್. ಲೋಬೋ ಮಾತನಾಡಿ, ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಕಾಲೇಜಿಗೆ ಕಳುಹಿಸುತ್ತಾರೆ. ಅವರ ವಿಶ್ವಾಸ, ಅಭಿಲಾಷೆಗೆ ಚ್ಯುತಿ ಬಾರದಂತೆ ವಿದ್ಯಾರ್ಥಿಗಳು ಕಲಿಕೆಗೆ ಒತ್ತು ನೀಡುವ ಮೂಲಕ ಮಾದಕ ವ್ಯಸನಗಳಂತಹ ದುಶ್ಚಟಗಳಿಂದ ದೂರವಿರಬೇಕು ಎಂದವರು ಹೇಳಿದರು.
Advertisement
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಬಿನ್ನು ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕ ಬಿ. ಇಬ್ರಾಹಿಂ, ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ವಿಶೇಷ ಪೊಲೀಸ್ ಅಧಿಕಾರಿ ಗುರು ಕಾಮತ್, ಸಂತ ಅಲೋಶಿಯಸ್ ಕಾಲೇಜಿನ ಫಾ| ಮೆಲ್ವಿನ್ ಮೆಂಡೋನ್ಸಾ, ಎನ್‌ಎಸ್‌ಯುಐನ ಪದಾಧಿಕಾರಿಗಳಾದ ಅಬ್ದುಲ್ ರೆಹಮಾನ್ ರವೂಫ್, ರೂಪೇಶ್ ರೈ, ಕಾರ್ತಿಕ್ ಕುಮಾರ್, ಮಹಮ್ಮದ್ ಸವಾದ್, ಆಸ್ಟಿನ್ ಸಿಕ್ವೇರಾ ಮತ್ತಿತರರು ಉಪಸ್ಥಿತರಿದ್ದರು.
ಅಭಿಯಾನಎನ್ಎಸ್ಯುಐನಿಂದ ಶಾಲಾ ಕಾಲೇಜುಗಳಲ್ಲಿ ನ. 10ರವರೆಗೆ ಅಭಿಯಾನ ನಡೆಯಲಿದ್ದು, ಇದರ ಅಂಗವಾಗಿ ಉಪನ್ಯಾಸ, ಬೀದಿ ನಾಟಕ, ಕಿರುಚಿತ್ರ ಪ್ರದರ್ಶನ, ಕರಪತ್ರ ವಿತರಣೆ ಮೂಲಕ ಜಾಗೃತಿ ಕಾರ್ಯ ನಡೆಯಲಿದೆ.