Advertisement

ಖಾಸಗಿ ಮಸೂದೆ ಅನುಮೋದನೆಗೆ ನಕಾರ

11:10 PM Mar 06, 2020 | Team Udayavani |

ವಿಧಾನಪರಿಷತ್‌: ಕರ್ನಾಟಕ ಅಸಲು ಹಣಕ್ಕಿಂತ ಹೆಚ್ಚು ಬಡ್ಡಿ ವಿಧಿಸುವಿಕೆ ನಿಷೇಧ ವಿಧೇಯಕ-2018ರ (ಖಾಸಗಿ ಮಸೂದೆ)ಅನುಮೋದನೆಗೆ ರಾಜ್ಯ ಸರ್ಕಾರ ನಿರಾಕರಿಸಿದೆ. ಕಾಂಗ್ರೆಸ್‌ ಸದಸ್ಯ ಶರಣಪ್ಪ ಮಟ್ಟೂರ ಮಂಡಿಸಿರುವ ಕರ್ನಾಟಕ ಅಸಲು ಹಣಕ್ಕಿಂತ ಹೆಚ್ಚು ಬಡ್ಡಿ ವಿಧಿಸುವಿಕೆ ನಿಷೇಧ ಖಾಸಗಿ ಮಸೂದೆಯನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅನುಮೋದಿಸಲು ನಿರಾಕರಿಸಿದರು.

Advertisement

ಕೃಷಿಗಾಗಿ ರೈತರು ಮಾಡಿಕೊಂಡಿರುವ ಸಾಲದ ಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಹಿತ ಕಾಪಾಡಿಕೊಳ್ಳಲು ಈ ಮಸೂದೆ ಅತಿ ಅಗತ್ಯ. ಅಲ್ಲದೆ, ರೈತರಿಗೆ ನೆಮ್ಮದಿ ಬದುಕನ್ನು ಈ ಮೂಲಕ ನೀಡಲು ಸಾಧ್ಯವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಇದನ್ನು ಅನು ಮೋದಿಸುವ ಮೂಲಕ ಜಾರಿಗೆ ತರಬೇಕು ಎಂದು ಶರಣಪ್ಪ ಮಟ್ಟೂರ ಕೋರಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಇಂತಹ ಮಸೂದೆಯನ್ನು ಕಾನೂನಾ ತ್ಮಕವಾಗಿ ಜಾರಿಗೆ ತರಲು ಅವಕಾಶ ಕಡಿಮೆ.

ಈಗಾಗಲೇ ಖಾಸಗಿ ಲೇವಾದೇವಿ ಕಾಯ್ದೆ ಇರುವುದರಿಂದ ರೈತರು ಮತ್ತು ಇತರೆ ವರ್ಗದವರು ಇದರ ಅನುಕೂಲ ಪಡೆಯ ಬಹುದಾಗಿದೆ. ಕೇವಲ ರೈತರಿಗೆ ಮಾತ್ರ ಪ್ರತ್ಯೇಕ ವಿಧೇಯಕ ತರುವ ಅವಶ್ಯಕತೆ ಇಲ್ಲ. ಈಗಾಗಲೇ ಅಸ್ತಿತ್ವದಲ್ಲಿ ಇರುವ ಕಾಯ್ದೆಯಲ್ಲೇ ನಿಯಮ ಮೀರಿ ಬಡ್ಡಿ ವಿಧಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅವಕಾಶ ಇದೆ. ಹೀಗಾಗಿ ಈ ಮಸೂದೆ ಅವಶ್ಯಕತೆಯಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next