ಹೊಳಲ್ಕೆರೆ: ಭೂಮಿಯ ಮೇಲೆ ಹೆಚ್ಚುತ್ತಿರುವ ತಾಪಮಾನದ ಪರಿಣಾಮ ಪ್ರಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ನೀರು ಸೇರಿದಂತೆ ಎಲ್ಲ ಆಂಶಗಳು ಕಲುಷಿತಗೊಳ್ಳುತ್ತಿವೆ ಎಂದು ಚಿತ್ರದುರ್ಗದ ನಬಾರ್ಡ್ ಎಲ್‌ಡಿಎಂ ಮಾಲಿನಿ ಹೇಳಿದರು.
ತಾಲೂಕಿನ ಅವಿನಹಟ್ಟಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ಧ ಶುದ್ಧ ಗಂಗಾ ನೀರಿನ ಮಹತ್ವ ಹಾಗೂ ಸೃಜನಶೀಲಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿಯೇ ಆಶುದ್ಧಗೊಳ್ಳುತ್ತಿದೆ. ಹಾಗಾಗಿ ಶುದ್ಧ ನೀರನ್ನು ಪಡೆದುಕೊಳ್ಳಲು ಸಾಧ್ಯವಿಲ್ಲದ ಸ್ಥಿತಿ ಇದೆ. ನೀರಿದ್ದರೂ ಹಲವಾರು ಕಾರಣಗಳಿಂದ ಆಶುದ್ಧಗೊಂಡು ಕುಡಿಯುಲು ಯಾಗ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜನರಿಗೆ ಶುದ್ಧ ನೀರು ಪೂರೈಸಲು ಶುದ್ಧ ಗಂಗಾ ಯೋಜನೆ ಜಾರಿಗೆ ತರಲಾಗಿದೆ. ಜನರು ಸದ್ಭಳಕೆ ಮಾಡಿಕೊಂಡು ಶುದ್ಧ ನೀರು ಸೇವಿಸಬೇಕು ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ಬಿ. ಗಣೇಶ್ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿರುವ ಜನರಿಗೆ ಶುದ್ಧ ನೀರಿನ ಸೌಲಭ್ಯ ಕಲ್ಪಿಸಲು ಶುದ್ಧಗಂಗಾ ಯೋಜನೆಯಡಿ ನೀರಿನ ಘಟಕಗಳನ್ನು ಆಳವಡಿಸಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶ್ರಮಿಸುತ್ತಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿರುವ ಜನರಿಗೆ ಕುಡಿಯುವ ನೀರಿಲ್ಲದೆ ಹಾಹಾಕಾರ ಉಂಟಾಗಿದೆ. ಅಂತಂಹ ಸಮಯದಲ್ಲಿ ಸಿಕ್ಕಸಿಕ್ಕ ನೀರು ಕುಡಿದು ಮಾರಕ ರೋಗಕ್ಕೆ ಹಲವಾರು ಜನರು ಬಲಿಯಾಗಿರುವ ನಿರ್ದಶನಗಳು ಸಾಕಷ್ಟಿವೆ. ಶುದ್ಧ ನೀರಿಲ್ಲದೆ ಜನರು ಆಶುದ್ಧ ನೀರು ಕುಡಿದು ಬದುಕು ಕಟ್ಟಿಕೊಳ್ಳುವ ಸ್ಥಿತಿಯಿಂದ ಮುಕ್ತಿ ನೀಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಶುದ್ಧ ನೀರಿನ ಘಟಕಗಳನ್ನು ಆರಂಭಿಸಲಾಗಿದೆ. ಜನರು ಶುದ್ಧ ನೀರು ಕುಡಿದು ಆರೋಗ್ಯವಂತರಾಗಬೇಕು ಎಂದರು.
ತಾಲೂಕು ಯೋಜನಾ ಧಿಕಾರಿ ಮಾದಪ್ಪ ಮಾತನಾಡಿ, ನೀರಿಲ್ಲದೆ ಹಾಹಾಕಾರ ಅನುಭವಿಸುತ್ತಿದ್ದ ಜನರಿಗೆ ನೀರಿನ ಜತೆ ಆರೋಗ್ಯ ತಪಾಸಣೆ ಶಿಬಿರ, ಪೌಷ್ಟಿಕಾಂಶಯುತ್ತ ಆಹಾರದ ಮಾಹಿತಿ, ಸಾಂಕ್ರಾಮಿಕ ರೋಗಗಳ ವಿರುದ್ಧ ಜಾಗೃತಿ ಶಿಬಿರಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ದ್ಯಾಮಕ್ಕ ಮಾತನಾಡಿ, ಅವಿನಹಟ್ಟಿ ಹಾಗೂ ಎಮ್ಮಿಹಟ್ಟಿಯಲ್ಲಿರುವ ಎಲ್ಲಾ ಕುಟುಂಬಗಳಿಗೂ ಶುದ್ಧ ನೀರಿನ ಮಹತ್ವ ತಿಳಿಸಿದೆ. ಜತೆಗೆ ನೀರು ಸಂಗ್ರಹಿಸಲು ಉಚಿತವಾಗಿ ಕ್ಯಾನ್‌ಗಳನ್ನು ವಿತರಿಸಲಾಗಿದೆ. ಜನರು ಯೋಜನೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರೋಗ್ಯವಂತರಾಗಬೇಕು ಎಂದರು.
ಗ್ರಾಪಂ ಸದಸ್ಯ ಪಿ.ಸಿ. ರಾಮಚಂದ್ರಪ್ಪ, ಸುರ್ವಣಮ್ಮ, ಒಕ್ಕೂಟದ ಅಧ್ಯಕ್ಷ ರಂಗಸ್ವಾಮಿ, ಸೇವಾ ಪ್ರತಿನಿಧಿ ಆಶೋಕ್, ರಂಗಸ್ವಾಮಿ, ಅವಿನಹಟ್ಟಿ ಹಾಗೂ ಎಮ್ಮೆಹಟ್ಟಿನ ಗ್ರಾಮಸ್ಥರು ಇದ್ದರು.