Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕನಾಯ ಕನಹಳ್ಳಿ ತಾಲೂಕು ಶೆಟ್ಟಿಕೆರೆ ಹೋಬಳಿ ಸೊಂಡೇನಹಳ್ಳಿ ಸರ್ವೆ ನಂ 37 ಮತ್ತು 41 ಹಾಗೂಲಕ್ಷ್ಮೀ ನಹಳ್ಳಿ ಸರ್ವೆ ನಂಬರ್ 55ರಲ್ಲಿ ಹಲವು ರೈತ ಕುಟುಂಬಗಳು ಕಳೆದ 35 ರಿಂದ 40 ವರ್ಷಗಳ ಕಾಲದಿಂದಲೂ ಬಗರ್ ಹುಕುಂ ಸಾಗುವಳಿ ಮಾಡುತ್ತಾ ಬಂದಿದ್ದು, ಉಳುಮೆ ಮಾಡಿದ ರೈತರಲ್ಲಿ ಕೆಲವರಿಗೆ ಸಾಗುವಳಿ ಪತ್ರ ದೊರೆತಿದ್ದು, ಅನುಭವದಲ್ಲಿರುವ ರೈತರ ಹೆಸರಿಗೆ ಖಾತೆ, ಪಹಣಿಆಗಿದೆ.ಇನ್ನೂಕೆಲವರಿಗೆ ಮಂಜೂರಾತಿಆಗಿರುವುದು ಬಿಟ್ಟರೆ ಬೇರೆ ದಾಖಲೆಗಳಿಲ್ಲ ಎಂದರು.
Related Articles
Advertisement
ಅರಣ್ಯ ಕಾಯ್ದೆ ಕಲಂ 04 ರ ಪ್ರಕಾರ ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಿರುವ ರೈತರನ್ನು ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿ, ರೈತರು ಬೆಳೆದ ರಾಗಿ ಇನ್ನಿತರ ಫಸಲುಗಳನ್ನು ನಾಶ ಮಾಡಿ, ತೆಂಗಿನ ಗಿಡ ಗಳನ್ನುಕಿತ್ತು ಹಾಕಿ ದೌರ್ಜನ್ಯ ಎಸಗುತ್ತಿದ್ದಾರೆ. ಕೆಡಿಪಿ ಸಭೆಯೊಂದರಲ್ಲಿ ಜಿಲ್ಲಾಧಿಕಾರಿಗಳೇ ಅರಣ್ಯ ಅಧಿಕಾರಿಗಳು ಬಗರ್ ಹುಕ್ಕುಂ ಸಾಗುವಳಿದಾರರಿಗೆ ತೊಂದರೆ ನೀಡದಂತೆ ಎಚ್ಚರಿಕೆ ನೀಡ ಸಹ, ಮೇಲಧಿಕಾರಿಗಳ ಆದೇಶಕ್ಕೂ ಬೆಲೆ ನೀಡದೆ ದುಂಡಾ ವರ್ತನೆ ಮಾಡುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿ ಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ತಿಳಿಸಿದರು.
75 ಸಾವಿರ ಅರ್ಜಿ ತಿರಸ್ಕೃತ: ರೈತ ಮುಖಂಡ ನಂಜುಂಡಪ್ಪ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿರುವ ಬಗರ್ ಹುಕ್ಕುಂ ಸಾಗುವಳಿದಾರರು ಮರು ಮಂಜೂರಾತಿಗಾಗಿ ಸಮಿತಿಯ ಮುಂದೆ ಸಲ್ಲಿಸಿದ್ದ ಸುಮಾರು 75 ಸಾವಿರ ಅರ್ಜಿಗಳನ್ನು, ಅರ್ಜಿಯಲ್ಲಿದ್ದ ಸಣ್ಣ ಪುಟ್ಟ ಲೋಪದೋಷಗಳನ್ನೇ ದೊಡ್ಡದು ಮಾಡಿ ತಿರಸ್ಕರಿಸಲಾಗಿದೆ. ಆದ್ದರಿಂದ ಮತ್ತೂಮ್ಮೆ ರೈತರ 57ಫಾರಂ ಸಲ್ಲಿಸಲು ಅವಕಾಶ ಮಾಡಿಕೊಡಬೇಕು, ಕಾಲ್ಪನಿಕ ಅರಣ್ಯದ ಹೆಸರಿನಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ದೈಹಿಕ ಹಲ್ಲೆ: ರೈತರು ಹತ್ತಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಭೂಮಿಅರಣ್ಯ ಇಲಾಖೆಗೆ ಸೇರಿದ್ದು ಎಂದು ಹೇಳುವ ಅರಣ್ಯ ಇಲಾಖೆಯ ಅಧಿಕಾರಿಗಳಿಂದ, ಈ ಸಂಬಂಧ ದಾಖಲೆ ನೀಡುವಂತೆ ಆರ್‌ಟಿಐ ಅಡಿಯಲ್ಲಿ ಅರ್ಜಿ ನೀಡಿ 9ತಿಂಗಳೇ ಕಳೆದರೂ ಇದುವರೆಗೂ ಮಾಹಿತಿ ನೀಡಿಲ್ಲ. ಈ ಸಂಬಂಧ ವಿಚಾರಿಸಿದರೆ, ಮೇಲ್ಮನವಿ ಹೋಗು ವಂತೆ ದಬಾಯಿಸಿ ಕಳುಹಿಸುತ್ತಾರೆ.
ಕೋವಿಡ್ ಇರುವ ಹಿನ್ನೆಲೆಯಲ್ಲಿ ಮೇಲ್ಮನವಿ ಹೋಗಲು ಸಾಧ್ಯವಾಗುತ್ತಿಲ್ಲ. ಇದನ್ನೇ ನೆಪ ಮಾಡಿಕೊಂಡು ಅರಣ್ಯ ಇಲಾಖೆಯ ಅಧಿಕಾರಿಗಳು ಹೆಂಗಸರು, ಮಕ್ಕಳು ಎನ್ನುವುದನ್ನು ನೋಡದೆ, ದೈಹಿಕ ಹಲ್ಲೆ ನಡೆಸಿ, ತೊಂದರೆ ನೀಡುತಿದ್ದಾರೆ ಎಂದು ನಂಜುಂಡಪ್ಪ ದೂರಿದರು. ರೈತ ಸಂಘದ ಮುಖಂಡರಾದ ಇಂದ್ರಯ್ಯ, ಟಿ.ಸಿ.ರಮೇಶ್, ಶಿವಣ್ಣ ಲಕ್ಕೇನಹಳ್ಳಿ ಉಪಸ್ಥಿತರಿದ್ದರು.