Advertisement

ಆರ್ಥಿಕ ಹೊರೆ ತಪ್ಪಿಸಿ: ನಾಯಕ

12:35 PM May 18, 2018 | |

ವಿಜಯಪುರ: ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತಾಂತ್ರಿಕ ಮಾಹಿತಿ ಶಿಕ್ಷಣ ಪಡೆದು ಶಿಕ್ಷಣಕ್ಕೆ ಅಗತ್ಯ ಇರುವ
ಆರ್ಥಿಕ ಸಂಪನ್ಮೂಲ ಸಂಗ್ರಹಿಸಿಕೊಳ್ಳಬೇಕು.

Advertisement

ಇದರಿಂದ ನಿಮ್ಮ ಶಿಕ್ಷಣಕ್ಕೆ ಪಾಲಕರ ಮೇಲಿನ ಆರ್ಥಿಕ ಹೊರೆ ತಪ್ಪಿಸುವ ಜೊತೆಗೆ ನಿಮ್ಮ ಸ್ವಾವಲಂಬಿ ಜೀವನ ಮಾದರಿ ಆಗಲಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ|. ಎಲ್‌.ಆರ್‌. ನಾಯಕ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಜ್ಞಾನಶಕ್ತಿ ಆವರಣದ ಪ.ಜಾ-ಪ.ಪಂ. ಘಟಕ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮುದ್ರಣ ವಿನ್ಯಾಸ
ಮತ್ತು ಕಲಾಕೃತಿ ಕಾರ್ಯಾಗಾರದ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಒಳ್ಳೆಯ ಮಾತುಗಾರ,
ಕಲೆಗಾರ, ವಿನ್ಯಾಸಗಾರ, ಛಾಯಾಗ್ರಾಹಕ ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಆದರೆ ಪರಿಶ್ರಮದಿಂದ ಯಶಸ್ಸು
ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು. 

ಹಿರಿಯ ಪತ್ರಕರ್ತ ದಿಲಾವರ ರಾಮದುರ್ಗ ಮಾತನಾಡಿ, ನಮ್ಮೊಳಗೆ ಇರುವ ಶಕ್ತಿ-ಸಾಮರ್ಥ್ಯ ಅರಿತು, ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ನಾವು ವಿಫಲವಾಗುತ್ತೇವೆ. ನಿಮ್ಮಲ್ಲಿರುವ ಪ್ರತಿಭಾ ಶಕ್ತಿಯನ್ನು ಹೊರಹಾಕುವಲ್ಲಿ ಇಂತಹ ಕಾರ್ಯಾಗಾರಗಳು ನೆರವಾಗುತ್ತವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹ ವಿಭಾಗದ ಮುಖ್ಯಸ್ಥ ಪ್ರೊ| ಓಂಕಾರ ಕಾಕಡೆಮಾತನಾಡಿ, ವಿದ್ಯಾರ್ಥಿನಿಯರು ಕೇವಲ ಒಂದು ಕೋರ್ಸ್‌ಗೆ ಮಾತ್ರ ಸೀಮಿತವಾಗದೆ ಎಲ್ಲ ವಿಭಾಗಗಳಲ್ಲಿ ಸಿಗುವ ಜ್ಞಾನ ಸಂಗ್ರಹಕ್ಕೆ ಮುಂದಾಗಬೇಕು. ಇದರಿಂದ ನಿಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸಹಕಾರಿ ಆಗಲಿದೆ ಎಂದರು.

Advertisement

ಪ.ಜಾ.-ಪ.ಪಂ. ಘಟಕದ ನಿರ್ದೇಶಕ ಡಾ| ಸಕ್ಪಾಲ್ ಹೂವಣ್ಣ ಮಾತನಾಡಿದರು. ಜ್ಯೋತಿ ಕಿಂಗಾರ ಪ್ರಾರ್ಥಿಸಿದರು.
ಸುಷ್ಮಲತಾ ಸ್ವಾಗತಿಸಿದರು. ಅಂಬಿಕಾ ಕಟ್ಟಿಮನಿ ವಂದಿಸಿದರು. ವಿದ್ಯಾರ್ಥಿನಿ ಸೌಮ್ಯಶ್ರೀ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next