Advertisement

Diamond League: ಸ್ಟೀಪಲ್‌ ಚೇಸರ್‌ ಸಾಬ್ಲೆಗೆ 9ನೇ ಸ್ಥಾನ

10:01 PM Sep 14, 2024 | Team Udayavani |

ಬ್ರಸೆಲ್ಸ್‌ (ಬೆಲ್ಜಿಯಂ): ಬ್ರಸೆಲ್ಸ್‌ ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ಭಾರತದ ಅವಿನಾಶ್‌ ಸಾಬಲೆ ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಫ‌ಲರಾಗಿದ್ದಾರೆ. ಅವರು 3,000 ಮೀ. ಸ್ಟೀಪಲ್‌ಚೇಸ್‌ನ 10 ಮಂದಿ ಸ್ಪರ್ಧಿಗಳ ಫೈನಲ್‌ನಲ್ಲಿ 9ನೇ ಸ್ಥಾನಿಯಾದರು.

Advertisement

ಶುಕ್ರವಾರವಷ್ಟೇ 30ನೇ ವರ್ಷಕ್ಕೆ ಕಾಲಿಟ್ಟ, ರಾಷ್ಟ್ರೀಯ ದಾಖಲೆ ಹೊಂದಿರುವ ಅವಿನಾಶ್‌ ಸಾಬಲೆ 8 ನಿಮಿಷ, 17.09 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿದರು. ಕೀನ್ಯಾದ ಅಮೋಸ್‌ ಸೆರೆಮ್‌ (8:06.90), ಮೊರೊಕ್ಕೋದ ಸೌಫಿಯಾನ್‌ ಎಲ್‌ ಬಕ್ಕಲಿ (8:08.60), ಕೀನ್ಯಾದ ಅಮಿನ್‌ ಜಿನೂಯಿ ಮೊಹಮ್ಮದ್‌ (8:09.68) ಮೊದಲ 3 ಸ್ಥಾನ ಅಲಂಕರಿಸಿದರು.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅವಿನಾಶ್‌ ಸಾಬಲೆ 8:14.18 ಸೆಕೆಂಡ್‌ಗಳೊಂದಿಗೆ 11ನೇ ಸ್ಥಾನ ಪಡೆದಿದ್ದರು. ನಿಧಾನ ಗತಿಯಿಂದ ಸ್ಪರ್ಧೆ ಆರಂಭಿಸಿದ ಅವರು ಕೊನೆಗೂ ನಿಗದಿತ ವೇಗವನ್ನು ಪಡೆಯದೇ ಹೋದರು. ಇನ್ನೊಂದೆಡೆ ಅಮೋಸ್‌ ಸೆರೆಮ್‌ ಕೊನೆಯ 400 ಮೀ.ಗಳಲ್ಲಿ ಒಲಿಂಪಿಕ್‌ ಚಾಂಪಿಯನ್‌ ಸೌಫಿಯಾನ್‌ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರು.

 

Advertisement

Udayavani is now on Telegram. Click here to join our channel and stay updated with the latest news.

Next