Advertisement

RCBvsLSG ಚಿನ್ನಸ್ವಾಮಿ ಹೈವೋಲ್ಟೇಜ್ ಪಂದ್ಯದಲ್ಲಿ ಫಾಫ್- ಆವೇಶ್ ಖಾನ್ ಗೆ ಭಾರಿ ದಂಡ

10:59 AM Apr 11, 2023 | Team Udayavani |

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಭರ್ಜರಿ ಜಯ ಸಾಧಿಸಿದೆ. ಕೊನೆಯ ಎಸೆತದವರೆಗೆ ಸಾಗಿದ ಪಂದ್ಯದಲ್ಲಿ ರಾಹುಲ್ ಪಡೆಯು ಒಂದು ವಿಕೆಟ್ ಅಂತರದ ಗೆಲುವು ಪಡೆಯಿತು.

Advertisement

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ಷರಃ ರನ್ ಮಳೆಯೇ ಹರಿಯಿತು. ಉಭಯ ತಂಡಗಳು ಸೇರಿ 425 ರನ್ ಪೇರಿಸಿತು. ಡುಪ್ಲೆಸಿಸ್ ಅವರ 115 ಮೀಟರ್ ಸಿಕ್ಸರ್ ಸೇರಿ ಒಟ್ಟು 27 ಸಿಕ್ಸರ್ ಗಳು ಸಿಡಿದವು.

ಕೊನೆಯ ಎಸೆತದಲ್ಲಿ ಒಂದು ರನ್ ಬೇಕಿದ್ದಾಗ ಬ್ಯಾಟ್ ಗೆ ಚೆಂಡು ತಾಗದಿದ್ದರೂ ಆವೇಶ್ ಖಾನ್ ಒಂದು ರನ್ ಕದ್ದರು. ಈ ವೇಳೆ ಸಂಭ್ರಮಾಚರಣೆ ಮಾಡಿದ ಆವೇಶ್ ಖಾನ್ ತನ್ನ ಹೆಲ್ಮೆಟ್ ಬಿಸಾಕಿದ್ದರು, ಇದು ಈಗ ಅವರಿಗೆ ಮುಳುವಾಗಿದೆ.

ಇದನ್ನೂ ಓದಿ:Viral Video: ತನ್ನ ಪತ್ನಿಯೆಂದು ಮಲೈಕಾ ಕೈ ಹಿಡಿದ ನಿರ್ಮಾಪಕ: ಮುಜುಗರಕ್ಕೊಳಗಾದ ಮುನ್ನಿ

“ಲಕ್ನೋ ಸೂಪರ್ ಜೈಂಟ್ಸ್‌ ನ ಅವೇಶ್ ಖಾನ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಅವೇಶ್ ಅವರು ಐಪಿಎಲ್ ನ ನೀತಿ ಸಂಹಿತೆಯ 2.2 ಹಂತ 1 ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಮಂಜೂರಾತಿಯನ್ನು ಸ್ವೀಕರಿಸಿದ್ದಾರೆ. ನೀತಿ ಸಂಹಿತೆಯ ಹಂತ 1 ಉಲ್ಲಂಘನೆಗಾಗಿ, ಪಂದ್ಯದ ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ”ಎಂದು ಐಪಿಎಲ್ ಪ್ರಕಟಿಸಿದೆ.

Advertisement

ಇದೇ ವಳೆ ಆರ್ ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಅವರಿಗೂ ದಂಡ ವಿಧಿಸಲಾಗಿದೆ. ಸ್ಲೋ ಓವರ್ ರೇಟ್ ಗಾಗಿ ಆರ್ ಸಿಬಿ ನಾಯಕನಿಗೆ 12 ಲಕ್ಷ ರೂ ದಂಡ ಹಾಕಲಾಗಿದೆ. ಕೊನೆಯ ಓವರ್ ವೇಳೆ ಆರ್ ಸಿಬಿ ನಿಗದಿಯ ಸಮಯಕ್ಕಿಂತ ಎರಡು ಓವರ್ ಹಿಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next