Advertisement

ಸಿವಾಕೋ! : ಅವತಾರ್ 2 ರಿಲೀಸ್ ಡೇಟ್ ಫಿಕ್ಸ್

09:51 AM May 09, 2019 | Hari Prasad |

ಹತ್ತು ವರ್ಷಗಳ ಹಿಂದೆ ಹಾಲಿವುಡ್‍ ಚಿತ್ರವೊಂದು ಜಗತ್ತಿನಾದ್ಯಂತ ಚಿತ್ರಪ್ರೇಮಿಗಳ ಮನಗೆದ್ದಿದ್ದ ವಿಚಾರ ನಿಮಗೆಲ್ಲಾ ತಿಳಿದೇ ಇದೆ. ಅದೇ ಹಾಲಿವುಡ್ ಸ್ಟಾರ್ ನಿರ್ದೇಶಕ ಜೇಮ್ಸ್ ಕೆಮರೂನ್ ಅವರು ನಿರ್ದೇಶಿಸಿದ್ದ ‘ಅವತಾರ್‍’ ಎಂಬ ಚಿತ್ರ.

Advertisement

ಆ ಬಳಿಕ ಅವತಾರ್ ಚಿತ್ರದಲ್ಲಿ ಪಂಡೋರಾ ಗ್ರಹವಾಸಿಗಳ ಗೆಟಪ್, ಅವರು ಬಳಸುತ್ತಿದ್ದ ಸಿವಾಕೋ ಭಾಷೆ, ಇವೆಲ್ಲಾ ಚಿತ್ರಪ್ರೇಮಿಗಳ ನಡುವೆ ಬಹುಸಮಯ ಚರ್ಚೆಯ ವಸ್ತುವಾಗಿತ್ತು.

ಈ ನಡುವೆ ನಿರ್ದೇಶಕ ಜೇಮ್ಸ್ ಕೆಮರೂನ್ ಅವರು ‘ಅವತಾರ್-2’ ಪ್ರಾರಂಭವಾಗುವ ಕುರಿತು ಘೋಷಣೆ ಮಾಡಿದ್ದರು. ಅವತಾರ್‍ ಚಿತ್ರ ಬಿಡುಗಡೆಯಾಗಿ ಇದೀಗ ಹತ್ತು ವರ್ಷಗಳಾಗಿವೆ. ಇತ್ತ ಅವತಾರ್ 2 ಚಿತ್ರೀಕರಣ ಹಂತದಲ್ಲಿದೆ.

ಇದೀಗ ನಿರ್ದೇಶಕ ಜೇಮ್ಸ್ ಕೆಮರೂನ್‍ ಅವರು ಬುಧವಾರದಂದು ಟ್ವೀಟ್ ಒಂದನ್ನು ಮಾಡಿದ್ದು ಅದರಲ್ಲಿ ಅವರು ಬಹುನಿರೀಕ್ಷಿತ ಅವತಾರ್ 2 ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ.


ಅವರೇ ತಿಳಿಸಿರುವ ಹಾಗೆ ಇನ್ನೆರಡು ವರ್ಷಗಳಲ್ಲಿ ಅವತಾರ್ 2 ಚಿತ್ರ ಪ್ರಪಂಚಾದ್ಯಂತ ತೆರೆ ಕಾಣಲಿದೆ. 2021ನೇ ಇಸವಿ ಡಿಸಂಬರ್ 17ಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆಯಂತೆ! ಅಲ್ಲಿಗೆ, ಅವತಾರ್ ಎಂಬ ಹೊಸ ಬಗೆಯ ಚಿತ್ರವನ್ನು ನೋಡಿ ಫಿದಾ ಆಗಿದ್ದ ಚಿತ್ರಪ್ರೇಮಿಗಳು ಇದರ ಎರಡನೇ ಭಾಗದಲ್ಲಿ ಇನ್ನೇನು ವಿಶೇಷ ಇದೆ ಎಂದು ತಿಳಿದುಕೊಳ್ಳಲು ಇನ್ನೆರಡು ವರ್ಷವಂತೂ ಕಾಯಲೇಬೇಕು!

Advertisement
Advertisement

Udayavani is now on Telegram. Click here to join our channel and stay updated with the latest news.