Advertisement

ನವೆಂಬರ್ ನಲ್ಲಿ ಅವನೇ ಆಪ್ತಮಿತ್ರ

10:24 AM Oct 21, 2017 | |

“ಅವನೇ ಆಪ್ತಮಿತ್ರ’ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ “ಯು/ಎ’ ಪ್ರಮಾಣ ಪತ್ರ ನೀಡಿದೆ. ಒಂದು ಹೆಣ್ಣಿನ ಸುತ್ತ ನಡೆಯುವ ಈ ಕಥೆಯಲ್ಲಿ ಮರ್ಡರ್‌ ಮಿಸ್ಟರಿ, ಸಸ್ಪೆನ್ಸ್‌, ಥ್ರಿಲ್ಲರ್‌ ಹಾಗೂ ಹಾರರ್‌ ಎಳೆಯನ್ನು ಹೊಂದಿದೆ.  ಕಾದಂಬರಿ ಆಧಾರಿತ ಈ ಸಿನಿಮಾ ಮೈಸೂರಿನ ಹನುಮಾ ಕ್ರಿಯೇಷನ್ಸ್‌ ನಿರ್ಮಿಸಿದೆ. ಚಿತ್ರದಲ್ಲಿ ಎರಡು ಹಾಡುಗಳಿವೆ.

Advertisement

ಪ್ರಥಮ್‌ ನಾಯಕನಟನಾಗಿ ಅಭಿನಯಿಸಿದ್ದು, ಪ್ರಸನ್ನಗೌಡ ಸಹ ನಾಯಕ. ಸಾನ್ವಿಯಾ ಹಾಗೂ  ಲಾವಣ್ಯ ಯಾದವ್‌ ನಾಯಕಿಯರು. “ಮಜಾ ಟಾಕೀಸ್‌’ನ ಮುದ್ದೇಶ ಖ್ಯಾತಿಯ ಮಂಡ್ಯ ರಮೇಶ್‌ ಈ ಚಿತ್ರದಲ್ಲೂ ಮುದ್ದೇಶನ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಮಹೇಂದ್ರ ಪ್ರಸಾದ್‌, ಮೈಸೂರು ರಮಾನಂದ್‌, ಉರಗತಜ್ಞ ಸ್ನೇಕ್‌ ಶ್ಯಾಮ್‌ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ.

ಮೈಸೂರು ವೆಂಕಟೇಶ್‌ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಿರ್ಮಾಪಕರು ಶಿವಮ್ಮ ವೆಂಕಟೇಶ್‌. ಚಿತ್ರಕ್ಕೆ ಮಂಡ್ಯ ಬಿ.ರಾಮು ಛಾಯಾಗ್ರಹಣ, ರವಿ ಶಂಕರ್‌ ಸಂಗೀತ, ಶಶಿಭೂಷಣ್‌ ಸಂಕಲನವಿದೆ. ಚಿತ್ರ ನವೆಂಬರ್‌ ವೇಳೆಗೆ ತೆರೆಗೆ ಬರಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next