Advertisement

Marriage;ನವೆಂಬರ್‌-ಡಿಸೆಂಬರ್‌ನಲ್ಲಿ ದೇಶದಲ್ಲಿ 35 ಲಕ್ಷ ಮದುವೆ

11:08 PM Sep 22, 2024 | Team Udayavani |

ನವದೆಹಲಿ: ಮುಂಬರಲಿರುವ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಮದುವೆಗಳಿಗಾಗಿ ಬರೋಬ್ಬರಿ 4.55 ಲಕ್ಷ ಕೋಟಿ ರೂ.ಖರ್ಚಾಗಲಿದೆ ಎಂದು ಪ್ರಭುದಾಸ್‌ ಲಿಲ್ಲದೇರ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಅಲ್ಲದೇ, ಈ 2 ತಿಂಗಳಲ್ಲಿ ಬರೋಬ್ಬರಿ 35 ಲಕ್ಷ ಮದುವೆಗಳು ನಡೆಯಲಿದ್ದು, 2023ರ ಇದೇ ತಿಂಗಳುಗಳಲ್ಲಿ 32 ಲಕ್ಷ ಮದುವೆ ದೇಶಾದ್ಯಂತ ನಡೆದಿತ್ತು ಎಂದೂ ತಿಳಿಸಿದೆ.

Advertisement

“ಬ್ಯಾಂಡ್‌, ಬಾಜಾ, ಭಾರತ್‌ ಆ್ಯಂಡ್‌ ಮಾರ್ಕೆಟ್ಸ್‌’ ಶೀರ್ಷಿಕೆ ಅನ್ವಯ ಸಂಸ್ಥೆ ಈ ವರದಿಯನ್ನು ಬಿಡುಗಡೆ ಗೊಳಿಸಿದೆ. ಹೀಗಾಗಿ, ಭಾರತ ಜಗತ್ತಿನ 2ನೇ ಅತ್ಯಂತ ದೊಡ್ಡ ಮದುವೆ ಮಾರುಕಟ್ಟೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅಲ್ಲದೇ, ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಿಂದ 15ರಿಂದ ಜುಲೈ 15ರ ವರಗೆ ದೇಶದಲ್ಲಿ 42 ಲಕ್ಷ ಮದುವೆಗಳು ನಡೆದಿದ್ದು, ಇದಕ್ಕಾಗಿ 5.5 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದೂ ಸಂಸ್ಥೆ ತಿಳಿಸಿದೆ. ಜತೆಗೆ ಮದುವೆ ಸೀಸನ್‌ ನಡುವೆಯೇ ಚಿನ್ನದ ಮೇಲಿನ ಆಮದು ಸುಂಕ ಶೇ.15ರಿಂದ ಶೇ.6ಕ್ಕೆ ಇಳಿಕೆಯಾಗುವ ಮೂಲಕ ಚಿನ್ನದ ಬೇಡಿಕೆಯೂ ಹೆಚ್ಚಳವಾಗಿದೆ ಎಂದೂ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next