Advertisement

ಲಡ್ಡಾಕ್‌ನಲ್ಲಿ ಹಿಮ ಬಂಡೆ ಕುಸಿತ: 10 ಮಂದಿ, 3 ವಾಹನ ಸಂಕಷ್ಟದಲ್ಲಿ

06:20 AM Jan 18, 2019 | udayavani editorial |

ಜಮ್ಮು ಕಾಶ್ಮೀರ : ಲಡ್ಡಾಕ್‌ ನ ಖಾರ್ಡುಂಗ್‌ ಲಾ ನಲ್ಲಿ ಭಾರೀ ಹಿಮಬಂಡೆಗಳು ಉರುಳಿ ಬಿದ್ದಿದ್ದು ಕನಿಷ್ಠ 10 ಮಂದಿ ಮತ್ತು ಮೂರು ಮೋಟಾರು ವಾಹನಗಳು ಸಿಲುಕಿರುವುದಾಗಿ ವರದಿಯಾಗಿದೆ.

Advertisement

ಸೇನೆ ಮತ್ತು ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು ಹಿಮಬಂಡೆ ಉರುಳಿರುವಲ್ಲಿ ಸಿಲುಕಿರುವವರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ. 

ಇಂದು ಬೆಳಗ್ಗೆ  ಹಿಮ ತುಂಬಿಕೊಳ್ಳಲು 12 ಜನರಿದ್ದ ಒಂದು ಸ್ಕಾರ್ಪಿಯೋ ಮತ್ತು ಎರಡು ಟಿಪ್ಪರ್‌ಗಳು ಖಾರ್ಡುಂಗ್‌ ಲಾ ಕಡೆಗೆ ಹೋಗಿದ್ದವು. ಒಂದು ಟಿಪ್ಪರ್‌ ನಲ್ಲಿ ಹಿಮ ತುಂಬಲ್ಪಟ್ಟು ಇನ್ನೊಂದರಲ್ಲಿ ತುಂಬುವ ವೇಳೆ ಹಿಮಬಂಡೆಗಳು ಉರುಳಿ ಬೀಳಲಾರಂಭಿಸಿದವು.

ಪರಿಣಾಮವಾಗಿ ಮೂರೂ ವಾಹನಗಳು ಮತ್ತು ಅದರೊಳಗಿದ್ದವರು ಸಿಲುಕಿಕೊಂಡರು ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next