Advertisement

ಕರಾವಳಿ ಪ್ರಾಧಿಕಾರಕ್ಕೆ ಸ್ವಾಯತ್ತೆ, ಹೆಚ್ಚು ಅನುದಾನಕ್ಕೆ ಶಿಫಾರಸು

01:37 AM Feb 11, 2020 | Team Udayavani |

ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ಮತ್ತು ಅನುದಾನ ಒದಗಿಸುವ ನಿಟ್ಟಿನಲ್ಲಿ ಸರಕಾರಕ್ಕೆ ರಾಜ್ಯ ಯೋಜನಾ ಮಂಡಳಿ ಶಿಫಾರಸು ಮಾಡಿದೆ ಎಂದು ಮಂಡಳಿ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಹೇಳಿದರು.

Advertisement

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಜ್ಯ ಸರಕಾರದ ಸಹಯೋ ಗದಲ್ಲಿ ಕರಾವಳಿ ಆರ್ಥಿಕಾಭಿವೃದ್ಧಿ ಯೋಜನೆ ಕುರಿತು ನಗರದಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಮಂಡಳಿ, ನಿಗಮ, ಪ್ರಾಧಿಕಾರಗಳಿಗೆ ಇನ್ನೂ ಹೆಚ್ಚು ಶಕ್ತಿ ತುಂಬುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಾರ್ಯಾಗಾರಗಳನ್ನು ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದೆ. ಇದರಂತೆ ಇಂದು ಮಂಗಳೂರಿನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಪಟ್ಟಂತೆ ಕಾರ್ಯಾಗಾರ ನಡೆದಿದೆ ಎಂದರು.

ಹೆಚ್ಚಿನ ಅಧಿಕಾರ, ಅನುದಾನ: ಮಟ್ಟಾರು
ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸರಕಾರದ ಯೋಜನಾ, ಕಾರ್ಯಕ್ರಮ ಸಂಯೋಜನ ಮತ್ತು ಸಾಂಖೀಕ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್‌ ಅವರು ನೂತನ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಮಟ್ಟಾರು ಅವರು ಮಾತನಾಡಿ, ಪ್ರಾಧಿಕಾರ ಪರಿಣಾಮಕಾರಿಯಾಗಿ ಹಾಗೂ ಜನರ ನಿರೀಕ್ಷೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತಾಗಲು ಹೆಚ್ಚಿನ ಅಧಿಕಾರ ಹಾಗೂ ಅನುದಾನವನ್ನು ನೀಡಬೇಕು ಎಂದು ಕೋರಿದರು.

ಡಾ| ಶಾಲಿನಿ ರಜನೀಶ್‌ ಮಾತನಾಡಿ, ಕರಾವಳಿ ಪ್ರದೇಶದಲ್ಲಿ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ  ಈ ಕಾರ್ಯಾಗಾರವನ್ನು ಆಯೋಜಿಸ ಲಾಗಿದೆ. ಡೆಲೊಟ್‌ ಸಂಸ್ಥೆ 3 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿ ಸಾಧ್ಯತೆಗಳ ಬಗ್ಗೆ ವರದಿ ಸಲ್ಲಿಸಿದೆ. ಅವುಗಳನ್ನು ಸರಕಾರ, ಸ್ಥಳೀಯ ಸಂಸ್ಥೆಗಳು, ಸರಕಾರ- ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನ ಗೊಳಿಸುವುದು ಅವಶ್ಯ ಎಂದರು. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಉಡುಪಿ ಜಿ.ಪಂ. ಸಿಇಒ ಪ್ರೀತಿ ಗೆಹಲೋಟ್ ಉಪಸ್ಥಿತರಿದ್ದರು. ಪ್ರದೀಪ್‌ ಡಿ’ಸೋಜಾ ಸ್ವಾಗತಿಸಿದರು. ರಾಘವೇಂದ್ರ ವಂದಿಸಿದರು. ಮಂಜುನಾಥ್‌ ನಿರೂಪಿಸಿದರು.

“ರಾಜ್ಯವನ್ನು ಆರ್ಥಿಕ ದುಃಸ್ಥಿತಿಗೆ ತಳ್ಳಿದ್ದ ಎಚ್‌ಡಿಕೆ, ರೇವಣ್ಣ ‘
ಮಂಗಳೂರು: ಆರ್ಥಿಕ ಇಲಾಖೆ, ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರ ಲಭಿಸದಿದ್ದರೂ ಲೋಕೋಪಯೋಗಿ ಇಲಾಖೆಯ ವಿವಿಧ ಯೋಜನೆಗಳಿಗೆ 55,000 ಕೋ.ರೂ. ಮಂಜೂರು ಮಾಡುವ ಮೂಲಕ ಆಗ ಮುಖ್ಯಮಂತ್ರಿ ಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಚಿವರಾಗಿದ್ದ ಎಚ್‌.ಡಿ. ರೇವಣ್ಣ ಅವರು ರಾಜ್ಯವನ್ನು ಆರ್ಥಿಕ ದುಃಸ್ಥಿತಿಯತ್ತ ತಳ್ಳಿದರು ಎಂದು ಬಿ.ಜೆ. ಪುಟ್ಟಸ್ವಾಮಿ ಅವರು ಟೀಕಿಸಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕುಮಾರ ಸ್ವಾಮಿ ಮುಖ್ಯಮಂತ್ರಿ ಯಾಗಿದ್ದ ವೇಳೆ ಸರಿಯಾಗಿ ಆಡಳಿತ ನಿಭಾಯಿಸಲಾಗದೆ ಹಲವು ಬಾರಿ ಕಣ್ಣೀರು ಹಾಕಿರುವುದು ಜನತೆಗೆ ತಿಳಿದಿದೆ. ದಕ್ಷ ಆಡಳಿತ ನೀಡುತ್ತಿರುವ ಬಿ.ಎಸ್‌. ಯಡಿಯೂರಪ್ಪ ಅವರ ಬಗ್ಗೆ ಇಲ್ಲಸಲ್ಲದ ಟೀಕೆಗಳನ್ನು ಮಾಡುವುದು ಕುಮಾರ ಸ್ವಾಮಿಯ ವರಿಗೆ ಶೋಭೆ ತರುವಂಥದ್ದಲ್ಲ. ಪ್ರಸ್ತುತ ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿದೆ ಎಂದರು.

Advertisement

ಗ್ರಾಮ ಮಟ್ಟದಲ್ಲಿ ಕೌಶಲ ಯೋಜನೆಗಳು
ಜನಸಾಮಾನ್ಯರ ಕೌಶಲ ಅಭಿವೃದ್ಧಿ ನಿಟ್ಟಿನಲ್ಲಿ ಕೌಶಲ ಯೋಜನೆ ರೂಪಿಸಬೇಕು ಎಂದು ಸರಕಾರಕ್ಕೆ ಶಿಫಾರಸು ಮಾಡಲಾಗಿದೆ. ರೈತರಿಗೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಹೊಸ ಕೌಶಲಗಳ ಪರಿಚಯ, ಸ್ಥಳೀಯ ಕಿರು ಉದ್ಯಮಗಳ ಸ್ಥಾಪನೆಗೆ ಪೂರಕವಾಗಿ ಉದ್ಯಮ ಕೌಶಲಗಳನ್ನು ಇದರಲ್ಲಿ ನೀಡಲಾಗುವುದು ಎಂದು ಬಿ.ಜೆ. ಪುಟ್ಟಸ್ವಾಮಿ ತಿಳಿಸಿದರು. ಯೋಜನಾ ಮಂಡಳಿಗೆ ವಿವಿಧ ಕ್ಷೇತ್ರಗಳ ತಜ್ಞರನ್ನು ಸೇರಿಸಿ ಇನ್ನಷ್ಟು ಬಲಪಡಿಸಲಾಗುವುದು ಎಂದರು.

ಪ್ರಮುಖ ಅಂಶಗಳು
 ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 2020-21ನೇ ಸಾಲಿಗೆ ಹೊಸ ಕಾಮಗಾರಿಗಳಿಗೆ 20 ಕೋಟಿ ರೂ. ಗುರಿ ನಿಗದಿ. 15 ಕಾಲುಸಂಕ ನಿರ್ಮಾಣ, 10 ಕಿರುಸೇತುವೆ, 10 ವಾಣಿಜ್ಯ ಸಂಕೀರ್ಣ, 30 ರಸ್ತೆ, 30 ಅಂಗನವಾಡಿ ಕೇಂದ್ರ ನಿರ್ಮಾಣ ಯೋಜನೆ
  ಸಮುದ್ರ ಹಾಗೂ ಜಲ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ವೂಹಾತ್ಮಕ ಕ್ರಮಗಳು ಹಾಗೂ ಕಾರ್ಯ ಯೋಜನೆ
 ಕೈಗಾರಿಕೆ ತ್ಯಾಜ್ಯ ಸಾಗರ ಸೇರುವುದನ್ನು ಶೂನ್ಯಗೊಳಿಸುವುದು.
 ಸುಸ್ಥಿರ ಮೀನುಗಾರಿಕೆ, ಹವಾಮಾನ ವೈಪರೀತ್ಯ ಸಂದರ್ಭಗಳಲ್ಲಿ ಮೀನುಗಾರ ರಿಗೆ ವೃತ್ತಿ ಹಾಗೂ ಸಲಕರಣೆಗಳಿಗೆ ಆಗುವ ಹಾನಿಗೆ ಪರಿಹಾರ
 ಮಂಗಳೂರು-ಗೋವಾ ಟೂರಿಸ್ಟ್‌ ಸರ್ಕ್ನೂಟ್‌
  ಬೇಲೆಕೇರಿ, ಕಾರವಾರ, ತದಡಿ ಬಂದರುಗಳಿಗೆ ಪೂರಕವಾಗಿ ರಸ್ತೆ, ರೈಲು ಹಾಗೂ ವಿಮಾನ ಸಂಪರ್ಕ

Advertisement

Udayavani is now on Telegram. Click here to join our channel and stay updated with the latest news.

Next