Advertisement

40 ದಿನದ‌ ಪಯಣ ಮುಗಿಸಿದ “ಮೇ ಫ್ಲವರ್‌’; ಕೆನಡಾದ ಹಾಲಿಫಾಕ್ಸ್‌ ಬಂದರಿನಲ್ಲಿ ಪ್ರಯಾಣ ಅಂತ್ಯ

07:26 PM Jun 10, 2022 | Team Udayavani |

ಒಟ್ಟಾವಾ: ವಿಶ್ವದ ಮೊದಲ ಸ್ವಯಂಚಾಲಿತ ಹಡಗು ಜೂ. 5ರಂದು ಒಟ್ಟು 40 ದಿನಗಳ ಪ್ರಯಾಣ ಮುಗಿಸಿ, ಭೂ ಪ್ರದೇಶಕ್ಕೆ ವಾಪಸಾಗಿದೆ. ಈ ಹಡಗು ಒಟ್ಟು 5,632 ಕಿ.ಮೀ ಪ್ರಯಣ ಮಾಡಿದೆ.

Advertisement

ಪ್ರಸಿದ್ಧ ಐಟಿ ಸಂಸ್ಥೆಯಾಗಿರುವ ಐಬಿಎಂ ಇತರೆ ಕೆಲವು ಸಂಸ್ಥೆಗಳೊಂದಿಗೆ ಸೇರಿಕೊಂಡು ಈ “ಮೇಫ್ಲವರ್‌ ಆಟೋನೊಮಸ್‌ ಶಿಪ್‌'(ಎಂಎಎಸ್‌) ತಯಾರಿಸಿದೆ. ಯುನೈಡೆಡ್‌ ಕಿಂಗ್‌ಡಂನ ಪೇಮೌತ್‌ ಕಡಲ ತೀರದಿಂದ ಪ್ರಯಾಣ ಆರಂಭಿಸಿದ್ದ ಹಡಗು ಕೆನಡಾದ ಹ್ಯಾಲಿಫ್ಯಾಕ್ಸ್‌ ಕಡಲ ತೀರದಲ್ಲಿ ಪ್ರಯಾಣ ಮುಗಿಸಿದೆ. ವಿಶೇಷವೆಂದರೆ ಈ ಹಡಗಿನಲ್ಲಿ ಒಬ್ಬ ಸಿಬ್ಬಂದಿಯೂ ಇರಲಿಲ್ಲ.

ಈ ಹಡಗು 50ಗಿ20 ಅಡಿ ಅಳತೆಯದ್ದಾಗಿದೆ. ಹಡಗಿನ ಮೇಲ್ಭಾಗದಲ್ಲಿ ಸೌರಫ‌ಲಕಗಳನ್ನು ಹಾಕಲಾಗಿದ್ದು, ಅದರ ಶಕ್ತಿಯಿಂದಾಗಿ ಹಡಗಿನ ಕಂಪ್ಯೂಟರ್‌ ಸಿಸ್ಟಂ ಮತ್ತು ಮೋಟಾರುಗಳು ಚಾಲ್ತಿಯಲ್ಲಿದ್ದವು. ಹಡಗು ಗಂಟೆಗೆ 18.52 ಕಿ.ಮೀ ವೇಗದಲ್ಲಿ ಚಲಿಸಿದೆ ಎಂದು ಸಂಸ್ಥೆ ತಿಳಿಸಿದೆ.

“ಈ ಎಂಎಎಸ್‌ ಹಡಗಿನಲ್ಲಿ ಒಟ್ಟು 6 ಕ್ಯಾಮರಾಗಳು ಹಾಗೂ 30 ಸೆನ್ಸರ್‌ಗಳನ್ನು ಅಳವಡಿಸಲಾಗಿದೆ.

ಹಡಗಿಗೆ ಸಮುದ್ರದಲ್ಲಿ ಎದುರಾಗಬಲ್ಲ ಎಲ್ಲ ಗಾತ್ರದ ಹಡಗುಗಳು, ಮಂಜುಗಡ್ಡೆಗಳನ್ನು ಎದುರಿಸುವುದಕ್ಕೂ ತರಬೇತಿ ಕೊಡಲಾಗಿತ್ತು. ಆದರೆ 40 ದಿನಗಳ ಪ್ರಯಾಣದಲ್ಲಿ ಯಾವೊಂದು ಹಡಗು, ಮಂಜುಗಡ್ಡೆಯೂ ಈ ಹಡಗಿಗೆ ಎದುರಾಗಲೇ ಇಲ್ಲ’ ಎಂದಿದ್ದಾರೆ ಐಬಿಎಂನ ಪ್ರಮುಖ ತಂತ್ರಜ್ಞ ಆ್ಯಂಡಿ ಸ್ಟಾನ್‌ಫೋರ್ಡ್‌.

Advertisement

ಅಂಕಿ-ಅಂಶ
40 ದಿನ
– ಹಡಗು ಸಂಚರಿಸಿದ ಒಟ್ಟು ದಿನಗಳು

5,632 ಕಿ.ಮೀ.
– ಸಮುದ್ರದಲ್ಲಿ ಹಡಗು ಕ್ರಮಿಸಿದ ಒಟ್ಟು ದೂರ

– 6
ಹಡಗಿನಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳು

30
– ಮೇ ಫ್ಲವರ್‌ನಲ್ಲಿ ಅಳವಡಿಸಲಾಗಿರುವ ಸೆನ್ಸರ್‌ಗಳ ಸಂಖ್ಯೆ

 

Advertisement

Udayavani is now on Telegram. Click here to join our channel and stay updated with the latest news.

Next