Advertisement

ಆಟೋಮೋಟಿವ್‌ ಡಿಸೈನರ್‌ ಆದರೆ ಲೈಫ್ ಡಿಸೈನೂ ಸುಲಭ!

10:57 AM Oct 31, 2017 | |

ಒಂದು ವಾಹನವನ್ನು ನೋಡಿದ ತಕ್ಷಣ ಅದರ ಮೇಲೆ ಆಕರ್ಷಣೆ ಉಂಟಾಗಬೇಕೆಂದರೆ, ಅದರ ಹೊರಾಂಗಣ ವಿನ್ಯಾಸ ಚೆನ್ನಾಗಿರಬೇಕು. ವಾಹನಗಳಿಗೆ ಆಕರ್ಷಕ ವಿನ್ಯಾಸದ ಸ್ಪೆಷಲ್‌ ಟಚ್‌ ಕೊಡುವವರಿಗೆ “ಆಟೋಮೊಬೈಲ್‌ ಡಿಸೈನರ್’ ಎನ್ನುತ್ತಾರೆ. ವಾಹನಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಿದಂತೆಲ್ಲ, ಈ ಡಿಸೈನರ್‌ಗಳ ಕೆಲಸಕ್ಕೂ ಬೇಡಿಕೆ ಹೆಚ್ಚುತ್ತಿದೆ…

Advertisement

ವಾಹನ ಇಲ್ಲ ಅಂದ್ರೆ ಕೆಲಸ ಸಾಗೋದೇ ಇಲ್ಲ. “ಈ ಬಾರಿಯ ದೀಪಾವಳಿ ಸೇಲ್‌ನಲ್ಲಿ ಒಂದು ಬೈಕ್‌ ತಗೊಂಡಿದ್ರೆ ಚೆನ್ನಾಗಿತ್ತು. ಒಳ್ಳೊಳ್ಳೆ ಡಿಸೈನ್‌ ಬೈಕುಗಳು ಕಡಿಮೆ ಬೆಲೆಯಲ್ಲಿ ಸಿಗ್ತಿದುÌ’, “ಮುಂದಿನ ಬಾರಿ ಒಂದು ಬೆಂಝ್ ಕಾರು ಬುಕ್‌ ಮಾಡ್ಬೇಕು. ನಮ್ಮ ಆಫೀಸಿನಲ್ಲಿ ನನ್ನ ಕೆಳಗಿನವರೆಲ್ಲಾ ಹೈಎಂಡ್‌ ಕಾರಿನಲ್ಲೇ ಬರ್ತಾರೆ!’ ಹೀಗೆಲ್ಲಾ ಲೆಕ್ಕಾಚಾರ ಹಾಕಿ ವಾಹನವನ್ನು ಕೊಳ್ಳುವವರಿದ್ದಾರೆ. ವಿನ್ಯಾಸಕ್ಕೆ ಮನಸೋತು ಇಂಥದ್ದೇ ಬೈಕು, ಕಾರನ್ನು ಕೊಡಿಸಿರೆಂದು ಪೋಷಕರಿಗೆ ದುಂಬಾಲು ಬೀಳುವ ಮಕ್ಕಳೂ ಇದ್ದಾರೆ. ಖರೀದಿದಾರರು ಆಕರ್ಷಿತರಾಗುವಂತೆ ಎಂಜಿನ್‌, ಸೀಟ್‌, ಡೋರ್‌ಗಳ, ಇಂಟೀರಿಯರ್ಅನ್ನು ವಿನ್ಯಾಸಗೊಳಿಸುವ ಕೆಲಸ ಆಟೋಮೊಟೀವ್‌ ಡಿಸೈನರ್‌ಗಳದು. ಕೆಲಸ ಮಾಡುವಾಗ ಟಚ್‌ಸ್ಕ್ರೀನ್‌ ಮಾನಿಟರ್‌ ಮೇಲೆ ಇವರುಗಳು ತೋರುವ ಪ್ರತಿಭೆ ನೋಡಲೂ ಆಕರ್ಷಕ. ಹೊಸದಾಗಿ ಸಿದ್ಧವಾಗುವ ಕಾರ್‌ಗಳು ಹೇಗಿರುತ್ತವೆ ಎಂದು ತಿಳಿಸುವ ನೀಲನಕ್ಷೆ ತಯಾರು ಮಾಡುವವರೂ ಇವರೇ. ಹೀಗಾಗಿ ವಾಹನ ಯಾವ ರೀತಿ ಇರಬೇಕು? ಅದು ಹೇಗಿದ್ದರೆ ಗ್ರಾಹಕರಿಗೆ ಇಷ್ಟವಾಗುತ್ತದೆ ಎಂಬುದನ್ನೆಲ್ಲಾ ಅಂದಾಜು ಮಾಡುವವರೇ ಇವರು. ಅಂದಹಾಗೆ, ಒಂದು ಕಾರ್‌ನ ಮಾದರಿ ನೋಡಲು ಚೆನ್ನಾಗಿದ್ದರಷ್ಟೇ ಸಾಲದು, ವೈಜ್ಞಾನಿಕವಾಗಿಯೂ ಪಫೆìಕ್ಟ್ ಆಗಿರಬೇಕು. ಹೀಗಾಗಿ ಅಟೊಮೋಟಿವ್‌ ಡಿಸೈನರ್‌ಗಳಿಗೆ ಸವಾಲುಗಳು ತುಂಬಾ ಎದುರಾಗುತ್ತವೆ. 

ವಿದ್ಯಾಭ್ಯಾಸ ಹೀಗಿರಲಿ
ಪಿಯುಸಿ ಮುಗಿದ ಬಳಿಕ ಎನ್‌ಐಡಿ ಎಕ್ಸಾಮಿನೇಷನ್‌ ತೆಗೆದುಕೊಳ್ಳಬೇಕು. ಜೊತೆಗೆ ಡಿಸೈನ್‌ ಆಪ್ಟಿಟ್ಯೂಡ್‌ ಟೆಸ್ಟಿನಲ್ಲಿ ಉತ್ತೀರ್ಣರಾಗಬೇಕು. ಮುಂದಿನ ಹಂತದಲ್ಲಿ ಬ್ಯಾಚುಲರ್‌ ಆಫ್ ಡಿಸೈನ್‌(ಬಿ.ಡಿಸ್‌) ಕೋರ್ಸನ್ನು ಮಾಡಿ. ನಂತರ ಎಂ.ಡಿಸ್‌ ಕೋರ್ಸ್‌ ಪೂರೈಸಿದರೆ ಅಟೋಮೋಟಿವ್‌ ಡಿಸೈನರ್‌ ಕೆಲಸದ ಬಗ್ಗೆ ಪರಿಪೂರ್ಣವಾಗಿ ತಿಳಿದುಕೊಳ್ಳಬಹುದು. ಇದೇ ಮಾದರಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮಾಡಿ ಎಂ.ಡಿಸ್‌ ಪದವಿ ಪಡೆದರೂ ಅಟೋಮೊಬೈಲ್‌ ಉದ್ಯಮದಲ್ಲಿ ನೌಕರಿ ಹಿಡಿಯಲು ಅನುಕೂಲ. ಮತ್ತೂಂದು ಮಾರ್ಗದಲ್ಲಿ ಪಿಯುಸಿ ಬಳಿಕ ಯು.ಸಿ.ಇ.ಇ.ಡಿ ಮುಗಿಸಿ, ಐಐಟಿ, ಬಿ.ಡಿಸ್‌, ಎಂ.ಡಿಸ್‌ ಪೂರೈಸಬಹುದು.

ಕೌಶಲಗಳು
ಎಲ್ಲ ವಾಹನಗಳ ಒಳಾಂಗಣ, ಹೊರಾಂಗಣ ವಿನ್ಯಾಸಗಳ ಬಗ್ಗೆ ಅರಿವು
ವಿನ್ಯಾಸ ರೂಪಿಸುವ ಮುಂಚೆ ಸ್ಕೆಚ್‌, ನೀಲ ನಕ್ಷೆ, ವಿವಿಧ ಮಾದರಿಗಳನ್ನು ಸೃಜಿಸುವ ತಂತ್ರಗಾರಿಕೆ
ಮೊಬೈಲಿಗೆ ಸಂಬಂಧಿಸಿದಂತೆ ನಾನಾ ವಿಶೇಷ ತಂಡಗಳೊಂದಿಗೆ ಚರ್ಚೆ, ಸಮಾಲೋಚನೆ, ಸಂವಹನ ನಡೆಸುವ ಚಾಣಾಕ್ಷತೆ
ಆಟೋಮೊಬೈಲ್‌ ಡಿಸೈನಿಗೆ ಸಂಬಂಧಿಸಿದ ಅನೇಕ ತಂತ್ರಾಂಶ ಬಳಸುವ ಅನುಭವ. 
ಹೊಸ ತಂತ್ರಜ್ಞಾನವನ್ನು ತಿಳಿಯುವ ಉತ್ಸಾಹ. 
ಮೊಬೈಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ನಿರ್ವಹಿಸುವ ಎದೆಗಾರಿಕೆ.

ಗಳಿಕೆ
ಈ ದಿನಮಾನದಲ್ಲಿ ವಾಹನಗಳನ್ನು ಬಳಸುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಇದಕ್ಕನುಗುಣವಾಗಿ ವಾಹನಗಳ ವಿನ್ಯಾಸ ಸೇರಿದಂತೆ ಹೊಸ ಮಾದರಿಯ ವಾಹನಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಲೇ ಇರುತ್ತವೆ. ಹೀಗಾಗಿ ಆಟೋಮೋಟೀವ… ವಿನ್ಯಾಸಕಾರರಿಗೆ ಬೇಡಿಕೆ ಯಾವತ್ತಿಗೂ ಇದ್ದೇ ಇದೆ. ವಾರ್ಷಿಕವಾಗಿ 4ಲಕ್ಷ ರೂ.ನಿಂದ 13 ಲಕ್ಷದ ವರೆಗೂ ದುಡಿಯಬಹುದು. ಅಲ್ಲದೆ ಅನುಭವಿ ವಿನ್ಯಾಸಕಾರರಿಗೆ ಅವಕಾಶಗಳೂ ಹೆಚ್ಚು.

Advertisement

ಅವಕಾಶಗಳು
ಕಾರು ತಯಾರಿಕಾ ಘಟಕ 
ವಾಹನಗಳ ಟೂಲ್‌ ವಿನ್ಯಾಸ ಘಟಕ
ಭಾರೀ ಗಾತ್ರದ ವಾಹನಗಳ ತಯಾರಿಕೆ
ಆಟೋ ಮೊಬೈಲ್‌ ಎಂಜಿನಿಯರಿಂಗ್‌ ವರ್ಕ್ಸ್ 
ದ್ವಿಚಕ್ರ, ತ್ರಿಚಕ್ರ ವಾಹನ ಬಿಡಿ ಭಾಗ ತಯಾರಿಕಾ ಘಟಕ

ಕಾಲೇಜುಗಳು
ಮಂತ್ರಾ ಅಕಾಡೆಮಿ, ಬೆಂಗಳೂರು 
ಡಿವೈಪಿಡಿಸಿ ಸ್ಕೂಲ್‌ ಆಫ್ ಡಿಸೈನ್‌, ಪುಣೆ
ಅಜಿಂಕ್ಯಾ ಡಿವೈ ಪಾಟೀಲ್‌ ಯೂನಿವರ್ಸಿಟಿ, ಪುಣೆ
ಡಿ.ಎಸ್‌.ಕೆ ಇಂಟರ್‌ನ್ಯಾಷನಲ್‌ ಸ್ಕೂಲ್‌ ಆಫ್ ಡಿಸೈನ್‌,ಪುಣೆ
ಐಐಟಿ, ಇನ್ಸ್‌ಟ್ರಾಮೆಂಟ್ ಡಿಸೈನ್‌ ಅಂಡ್‌ ಡೆವೆಲಪ್‌ಮೆಂಟ್ ಸೆಂಟರ್‌, ನವದೆಹಲಿ 
ಇಂಡಸ್ಟ್ರಿಯಲ್‌ ಡಿಸೈನ್‌ ಸೆಂಟರ್‌, ಐಐಟಿ ಮುಂಬೈ
ನ್ಯಾಷನಲ್‌ ಇಸ್ಟಿಟಿಟ್ಯೂಟ್ ಆಫ್ ಡಿಸೈನ್‌, ಅಹಮದಾಬಾದ್‌

ಅನಂತನಾಗ್‌

Advertisement

Udayavani is now on Telegram. Click here to join our channel and stay updated with the latest news.

Next