Advertisement

2022ರೊಳಗೆ ಐಟಿ, ಬಿಪಿಓದಲ್ಲಿ 7 ಲಕ್ಷ ಉದ್ಯೋಗ ನಷ್ಟ: ವರದಿ

07:48 PM Sep 07, 2017 | udayavani editorial |

ಹೊಸದಿಲ್ಲಿ : ಯಾಂತ್ರೀಕರಣ ಮತ್ತು ಕೃತಕ ಜ್ಞಾನದ ಪರಿಣಾಮವಾಗಿ ಭಾರತೀಯ ಐಟಿ ಮತ್ತು ಬಿಪಿಓ ಕ್ಷೇತ್ರದಲ್ಲಿ 2022ರೊಳಗೆ ಸುಮಾರು 7 ಲಕ್ಷ  ಕುಶಲ ಉದ್ಯೋಗಿಗಳು ತಮ್ಮ ನೌಕರಿಯನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಅಮೆರಿಕದಲ್ಲಿನ ಸಂಶೋಧನ ಸಂಸ್ಥೆ ಎಚ್‌ಎಫ್ಎಸ್‌ ರಿಸರ್ಚ್‌ ವರದಿ ಮಾಡಿದೆ 

Advertisement

ಆದರೆ ಹಾಗೆಂದು ಇದು ಎಲ್ಲರಿಗೂ ಕೆಟ್ಟ ಸುದ್ದಿಯೇನೂ ಆಗಿರುವುದಿಲ್ಲ. ಏಕೆಂದರೆ ಅದೇ ಅವಧಿಯಲ್ಲಿ ಮಧ್ಯಮ ಮತ್ತು ಅತ್ಯುನ್ನತ ಕುಶಲ ಉದ್ಯೋಗಾವಕಾಶಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಏರಲಿದೆ ಎಂದು ವರದಿ ತಿಳಿಸಿದೆ. 

ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್‌ ಮತ್ತು ಯಾಂತ್ರೀಕರಣದ ಫ‌ಲವಾಗಿ ಭಾರತೀಯ ಐಟಿ ಮತ್ತು ಬಿಪಿಓ ಕ್ಷೇತ್ರದಲ್ಲಿನ ಸುಮಾರು 2.4 ಮಿಲಿಯ ಉದ್ಯೋಗಗಳು ನಷ್ಟವಾಗಲಿವೆ ಎಂದು ವರದಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next