Advertisement

ಶ್ರೀ ಕೃಷ್ಣ ಮಠ: ಸ್ವಯಂಚಾಲಿತ ಚಪಾತಿ ಯಂತ್ರ ಚಾಲನೆ

09:22 PM Mar 26, 2019 | Team Udayavani |

ಉಡುಪಿ: ಶ್ರೀ ಕೃಷ್ಣಮಠದ ಭಕ್ತರ ಅನುಕೂಲಕ್ಕಾಗಿ ಕರ್ಣಾಟಕ ಬ್ಯಾಂಕ್‌ನಿಂದ ಕೊಡುಗೆಯಾಗಿ ನೀಡಿದ ಸ್ವಯಂಚಾಲಿತ ಚಪಾತಿ ಯಂತ್ರವನ್ನು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹಾಗೂ ಅದಮಾರು ಮಠದ ಕಿರಿಯ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಸೋಮವಾರ ಉದ್ಘಾಟಿಸಿದರು.

Advertisement

ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ‌ ದ್ವಿತೀಯ ಪರ್ಯಾಯದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅಹೋರಾತ್ರಿ ಭಜನೆಯಲ್ಲಿ ಭಾಗವಹಿಸಲು ವಿವಿಧ ಜಿಲ್ಲೆಯಿಂದ ಶ್ರೀ ಕೃಷ್ಣ ಮಠಕ್ಕೆ ಆಗಮಿಸುತ್ತಿದ್ದಾರೆ. ಅವರಲ್ಲಿ
ಹೆಚ್ಚಿನವರು ರಾತ್ರಿ ಊಟಕ್ಕೆ ಚಪಾತಿ ನೆಚ್ಚಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕ್‌ ಭಕ್ತರಿಗೆ ಅನುಕೂಲವಾಗುವಂತೆ ಸುಮಾರು 7 ಲಕ್ಷ ರೂ. ವೆಚ್ಚದ ಚಪಾತಿ ತಯಾರಿಸುವ ಸ್ವಯಂ ಚಾಲಿತ ಚಪಾತಿ ಯಂತ್ರ ಕೊಡುಗೆಯಾಗಿ ನೀಡಿದೆ. ಸುಮಾರು 15 ಬಾಣಸಿಗರು ಅರ್ಧ ದಿನದಲ್ಲಿ ಮಾಡುವ ಚಪಾತಿ ಈ ಯಂತ್ರ ಕೇವಲ ಒಂದು ಗಂಟೆಯಲ್ಲಿ ತಯಾರಿಸಲಿದೆ.

ಕರ್ಣಾಟಕ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಬಿ.ಗೋಪಾಲಕೃಷ್ಣ ಸಾಮಗ, ಮುಖ್ಯಪ್ರಬಂಧಕ ವಾದಿರಾಜ ಭಟ…, ರಥಬೀದಿ ಶಾಖೆಯ ಪ್ರಬಂಧಕ ಮುರಳೀಧರ ಐತಾಳ್‌ ಹಾಗೂ ಮಠದ ಅಧಿಕಾರಿಗಳಾದ ಕಡೆಕಾರ್‌ ಶ್ರೀಶ ಭಟ…, ಗಿರೀಶ್‌ ಉಪಾಧ್ಯಾಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next