ದೇಶದ ಪ್ರತಿಷ್ಟಿತ “ದೆಹಲಿ ಆಟೋ ಎಕ್ಸ್‌ಪೋ’ ಶುರುವಾಗಿದೆ. ಮೇಳದಲ್ಲಿ ಕಾನ್ಸೆಪ್ಟ್ ಕಾರುಗಳ ಭರಾಟೆ ಒಂದು ಕಡೆಯಾದರೆ, ಮತ್ತೂಂದು ಕಡೆ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬರುತ್ತಿರುವ ಕಾರುಗಳೂ ಇವೆ.
ಚೀನಾ ಕಾರುಬಾರು : ಈ ಬಾರಿಯ ದೆಹಲಿ ಆಟೋ ಎಕ್ಸ್ ಪೋದ ಮತ್ತೂಂದು ಆಕರ್ಷಣೆ ಚೀನಾದ ಗ್ರೇಟ್ ವಾಲ್ ಮೋಟಾರ್ (ಜಿಡಬ್ಲ್ಯೂಎಂ) ಕಾರುಗಳ ಅನಾವರಣ. ಇದೇ ಮೊದಲ ಬಾರಿಗೆ ಭಾರತವನ್ನು ಪ್ರವೇಶಿಸುತ್ತಿರುವ ಈ ಕಂಪನಿ, “ಹಾವೆಲ್ ಎಚ್’, “ಆರ್ 1′ ಮತ್ತು “ವಿಷನ್ 2025′ ಬ್ರಾಂಡ್‌ಗಳನ್ನು ಬಿಡುಗಡೆ ಮಾಡಿದೆ. “ಹಾವೆಲ್ ಎಚ್’ ಸಂಪೂರ್ಣವಾಗಿಎಲೆಕ್ಟ್ರಿಕ್ ಮಾದರಿ ಕಾರುಗಳಾಗಿವೆ. 2021ರಲ್ಲಿ ಭಾರತಕ್ಕೆ ಈ ಕಾರುಗಳು ಬರಬಹುದು ಎಂದು ಹೇಳಲಾಗಿದೆಯಾದರೂ, ಕಂಪನಿ ಅಧಿಕೃತವಾಗಿ ತಿಳಿಸಿಲ್ಲ.
ಮಾರುತಿ ಸುಜುಕಿ ಫ್ಯೂಚರೋ- ಇ : ಎಕ್ಸ್ ಪೋ ಶುರುವಾಗುವ ಮುನ್ನವೇ ಹೆಚ್ಚು ಸದ್ದು ಮಾಡಿದ್ದ ಕಾರಿದು. “ಜಾಗತಿಕ ಸಂವೇದನೆಗಳನ್ನು ಒಳಗೊಂಡು ರೂಪಿಸಲಾಗಿರುವ ಭಾರತೀಯ ಕಾರು’ ಎಂಬ ಘೋಷವಾಕ್ಯದ ಜತೆಗೆ ಅನಾವರಣಗೊಂಡಿದೆ. ಪೂರ್ಣ ಎಲೆಕ್ಟ್ರಿಕ್‌ನ ಎಸ್‌ಯುವಿಯಾಗಿರುವ ಇದು, ಮಾರುತಿ ಸುಜುಕಿ ಕಂಪನಿಯ ಭವಿಷ್ಯದ ಕಾರುಗಳ ಕುರಿತಾಗಿ ಒಂದು ಮುನ್ಸೂಚನೆ ನೀಡಿದೆ ಎಂದೇ ಹೇಳಬಹುದು. ಸಾಂಪ್ರದಾಯಿಕ ಎಸ್‌ಯುವಿಗಳ ವಿನ್ಯಾಸವನ್ನು ಮೀರಿ, ಹೊಸದೊಂದು ರೀತಿಯ ವಿನ್ಯಾಸದಲ್ಲಿ ಈ ಕಾರು ಮೂಡಿದೆ. ಮಾರುತಿ ಸಂಸ್ಥೆಯ ಪ್ರಕಾರ, ಇದು ಕೇವಲ ಎಲೆಕ್ಟ್ರಿಕ್ ಮಾತ್ರವಲ್ಲದೇ, ಪೆಟ್ರೋಲ್‌ಮತ್ತು ಡೀಸೆಲ್ ಮಾದರಿಯಲ್ಲಿಯೂಬರಬಹುದು. ಅಂದ ಹಾಗೆ ಈ ಕಾರನ್ನು ಯಾವಾಗ ಮಾರುಕಟ್ಟೆಗೆ ಬಿಡಲಾಗುತ್ತದೆ ಎಂಬ ಬಗ್ಗೆ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ.
ಟಾಟಾ ಗ್ರಾವಿಟಾಸ್ : ಟಾಟಾ ಕಂಪನಿಯ ಮತ್ತೂಂದು ಎಸ್‌ಯುವಿ ಟಾಟಾ ಗ್ರಾವಿಟಾಸ್ ಮಾರುಕಟ್ಟೆಗೆ ಬರಲು ಸಿದ್ಧತೆ ಮಾಡಿಕೊಂಡಿದೆ. ಈ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಬಹುದು ಎಂಬಮಾತುಗಳಿವೆ. ಈ ಕಾರನ್ನು ಎಕ್ಸ್ ಪೋದಲ್ಲಿ ಬಿಡುಗಡೆ ಮಾಡಲಾಗಿದೆ. 7 ಸೀಟರ್‌ನ ಇದು ಟಾಟಾ ಹ್ಯಾರಿಯರ್‌ಗಿಂತ ಕೊಂಚ ಭಿನ್ನವಾಗಿರಲಿದೆ. ಇದು ಬಿಎಸ್6 ಮಾದರಿಯಲಾಗಿದ್ದು, 2 ಲೀ. ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಒಳಗೊಂಡಿದೆ. ಜತೆಗೆ 140 ಎಚ್‌ಪಿಯಿಂದ 170 ಎಚ್‌ಪಿಗೆ ತನ್ನ ಶಕ್ತಿ ವೃದ್ಧಿಸಿಕೊಂಡಿದೆ.
ರಿನಾಲ್ಟ್ ಝೋ ಇವಿ : ರಿನಾಲ್ಡ್ ಕಂಪನಿ ಕೂಡ ಭಾರತದಲ್ಲಿ ಎಲೆಕ್ಟ್ರಿಕ್ ಯುಗ ಆರಂಭಿಸಲು ಉತ್ಸುಕವಾಗಿದೆ. ಆ ಪ್ರಯುಕ್ತ ಎಕ್ಸ್ ಪೋದಲ್ಲಿ ” ಝೋ ಇವಿ’ ಕಾರನ್ನು ಅನಾವರಣ ಮಾಡಿದೆ. ಒಮ್ಮೆ ಚಾರ್ಜ್ ಮಾಡಿದರೆ 200 ಕಿ.ಮೀ. ವರೆಗೂ ಓಡಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. 134 ಹಾರ್ಸ್ ಪವರ್‌ನ ಎಲೆಕ್ಟ್ರಿಕ್ ಮೋಟಾರ್ ಇರುವ ಈ ಕಾರಿನಲ್ಲಿ 52ಕೆಡಬ್ಲ್ಯೂಎಚ್ ಬ್ಯಾಟರಿ ಇದೆಯಂತೆ.16 ಲಕ್ಷ ರೂ.ಗಳ ದರಪಟ್ಟಿಯೊಂದಿಗೆ ಮಾರುಕಟ್ಟೆಗೆ Åವೇಶಿಸುವ ಸಾಧ್ಯತೆ ಇದೆ.
ಹೀರೋ ಎಲೆಕ್ಟ್ರಿಕ್ ಸ್ಕೂಟರ್ : ಈಗಾಗಲೇ ಕಾರು ಮಾರುಕಟ್ಟೆಯಲ್ಲಿ ಹಲವಾರು ದೊಡ್ಡ ಸಂಸ್ಥೆಗಳು ಎಲೆಕ್ಟ್ರಿಕ್ ಪ್ರಯೋಗಗಳನ್ನು ಮಾಡುತ್ತಿರುವುದನ್ನು ನೋಡಬಹುದಾಗಿದೆ. ಆದರೆ, ಸ್ಕೂಟರ್ ಮಾರುಕಟ್ಟೆಯಲ್ಲಿ ದೈತ್ಯ ಕಂಪನಿಗಳು ಇನ್ನೂ ಎಲೆಕ್ಟ್ರಿಕ್ ಯುಗಕ್ಕೆ ಕೈ ಹಾಕಲು ಹಿಂದೆ ಮುಂದೆ ನೋಡುತ್ತಿವೆ. ಇದಕ್ಕೆ ಅಪವಾದವೆಂಬಂತೆ, ಹೀರೋ ಕಂಪನಿ “ಹೀರೋ ಎಲೆಕ್ಟ್ರಿಕ್ ಎಇ-29′ ಎಂಬ ಇ ಸ್ಕೂಟರ್ ಬಿಡುಗಡೆ ಮಾಡಿದೆ. ಒಮ್ಮೆ ಚಾರ್ಜ್ ಮಾಡಿದರೆ ಗಂಟೆಗೆ 56 ಕಿ.ಮೀ ವೇಗದಲ್ಲಿ 80 ಕಿ.ಮೀ. ದೂರ ಓಡಿಸಬಹುದು.
ಈ ಗಾಡಿ ಫುಲ್ ಚಾರ್ಜ್ ಆಗಲು ಕೇವಲ 4 ಗಂಟೆಗಳು ಸಾಕಂತೆ. ಕಂಪನಿ, ಇನ್ನೊಂದು ಇ ಸ್ಕೂರ್ಟ ಎಇ-8 ಸ್ಕೂಟರ್ ಅನ್ನು ಅನಾವರಣ ಮಾಡಿದ್ದು 25 ಕಿ.ಮೀ. ವೇಗದಲ್ಲಿ 80 ಕಿ.ಮೀ ವರೆಗೆ ಓಡಿಸಬಹುದು ಎಂದಿದೆ.
–ಸೋಮಶೇಖರ ಸಿ. ಜೆ.