Advertisement

ಆಟೋ ಚಾಲಕನ ಕೊಲೆ

12:03 PM Jul 25, 2018 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ಆಟೋ ಚಾಲಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿರುವ ಘಟನೆ ಸುದ್ದಗುಂಟೆಪಾಳ್ಯ ಠಾಣಾ ವ್ಯಾಪ್ತಿಯ ಡೈರಿ ವೃತ್ತದ ಬಳಿ ಮಂಗಳವಾರ ನಡೆದಿದೆ.

Advertisement

ಬಿಸ್ಮಿಲ್ಲಾನಗರ ನಿವಾಸಿ ಆಟೋ ಚಾಲಕ ಶೇಕ್‌ ವಲಿ (45) ಮೃತ ಚಾಲಕ. ಈ ಸಂಬಂಧ ಮೂವರು ಆಟೋ ಚಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಶೇಕ್‌ವಲಿ ಸೋಮವಾರ ರಾತ್ರಿ ಆಟೋ ಚಾಲನೆ ಮಾಡುತ್ತಿದ್ದು, ತಡರಾತ್ರಿ 1 ಗಂಟೆ ಸುಮಾರಿಗೆ ಡೈರಿ ವೃತ್ತದ ಡೈರಿ ಕಾಂಪೌಂಡ್‌ ಬಳಿ ನಿಂತಿದ್ದರು. ಇದೇ ವೇಳೆ ಮೂರು ಆಟೋಗಳಲ್ಲಿ ಬಂದ ದುಷ್ಕರ್ಮಿಗಳು ಮದ್ಯದ ಅಮಲಿನಲ್ಲಿ ಮೃತರ ಜತೆ ಜಗಳ ತೆಗೆದಿದ್ದಾರೆ.

ಜಗಳ ವಿಕೋಪ ತಲುಪಿ ದುಷ್ಕರ್ಮಿಗಳು ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಶೇಕ್‌ವಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು. ಮಂಗಳವಾರ ಬೆಳಗ್ಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶೇಕ್‌ವಲಿಯನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next