ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಸನ್ನದ್ಧರಾಗಿ ನಿಂತಿದ್ದ ಪೊಲೀಸರು. ಇದೇ ವೇಳೆ ಅನಗತ್ಯವಾಗಿ ರಸ್ತೆಗಿಳಿದ ಆಟೋ ಚಾಲಕ. ಆಟೋ ತಡೆದು ಎಲ್ಲಿಗಪ್ಪಾ ಹೊರಟಿದ್ದೀಯಾ ಎಂದ ಪೊಲೀಸರು. ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಆಟೋ ಹಿಂದೆ ಕೂತ ಕಾನ್ಸಟೇಬಲ್ ಸಮೇತ ಎಕ್ಸೇಪ್ ಆದ ಆಟೋ ಚಾಲಕ.
ಲಾಕ್‌ಡೌನ್ ಜಾರಿಯಾಗಿದ್ದರೂ ಅನಗತ್ಯವಾಗಿ ರಸ್ತೆಗಿಳಿದ ಆಟೋ ಚಾಲಕ, ಪೊಲೀಸರ ಲಾಠಿ ಏಟಿನಿಂದ ಪರಾರಿಯಾಗಲು ಯತ್ನಿಸಿದ ದೃಶ್ಯ.
ಲಾಕ್‌ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಪೊಲೀಸರು, ನಗರದ ಕೆ.ಆರ್ ಮಾರ್ಕೆಟ್ ಬಳಿ ಬೆಳ್ಳಂಬೆಳಗ್ಗೆ ಪೊಲೀಸರು ಫೀಲ್ಡ್‌ಗಿಳಿದಿದ್ದು, ಪ್ರತೀ ವಾಹನ ತಪಾಸಣೆ ಮಾಡುತ್ತಿದ್ದರು. ಅವಶ್ಯಕತೆ ಹೊರತು ಪಡಿಸಿ ಅನಗತ್ಯವಾಗಿ ರಸ್ತೆಗಳಿಯುತ್ತಿದ್ದ ವಾಹನಗಳನ್ನು ತಡೆದು ವಶಕ್ಕೆ ಪಡೆಯುತ್ತಿದ್ದರು. ಅಲ್ಲದೇ ಕೆಲವರಿಗೆ ಲಾಠಿ ರುಚಿ ತೋರಿಸುತ್ತಿದ್ದರು.
ಇದನ್ನೂ ಓದಿ :ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಗೆ ಕೋವಿಡ್ ಪಾಸಿಟಿವ್
ಇದೇ ವೇಳೆ ನಾನೂ ಖಾಕಿ ಧರಿಸಿರುವೆ, ಪೊಲೀಸರು ನನ್ನನ್ನು ಏನೂ ಮಾಡಲಾರರು ಎಂದೇ ಕೆ.ಆರ್.ಮಾರುಕಟ್ಟೆ ಕಡೆ ತೆರಳಿದ ಆಟೋ ಚಾಲಕನೋರ್ವ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆಟೋ ತಡೆದು ತಪಾಸಣೆ ಮಾಡಿ, ಚಾಲಕನ ಜೊತೆ ಮಾತನಾಡುತ್ತಾ ಕಾನ್ಸ್‌ಟೇಬಲ್ ಆಟೋದಲ್ಲಿ ಕುಳಿತಿದ್ದಾರೆ. ಈ ವೇಳೆ ಚಾಲಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಿಂದೆ ಕುಳಿತಿದ್ದ ಸಿಬ್ಬಂದಿ ಸಮೇತ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು, ಆಟೋವನ್ನು ಹಿಂಬಾಲಿಸಿ ಚಾಲಕನನ್ನು ಹಿಡಿದಿದ್ದಾರೆ. ಬಳಿಕ, ಆಟೋವನ್ನು ವಶಕ್ಕೆ ಪಡೆದಿದ್ದಾರೆ.