Advertisement

ಆಟೋ ಕಾಂಪ್ಲೆಕ್ಸ್‌ ಹಸ್ತಾಂತರಕ್ಕೆ ಸೂಚನೆ

12:41 PM Jul 21, 2017 | |

ಶಿವಮೊಗ್ಗ: ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಗರದ ಆಟೋ ಕಾಂಪ್ಲೆಕ್ಸ್‌ನ್ನು ನಗರಪಾಲಿಕೆ ತಕ್ಷಣ ಹಸ್ತಾಂತರಿಸಿಕೊಂಡು ಕ್ರಮ ಕೈಗೊಳ್ಳುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ರಾಕೇಶ್‌ ಕುಮಾರ್‌ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೈಗಾರಿಕೆಗಳಿಗೆ ಸಂಬಂಧಪಟ್ಟಂತೆ ಗುರುವಾರ ನಡೆದ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಟೋಕಾಂಪ್ಲೆಕ್ಸ್‌ ಇನ್ನೂ ಕೆಐಡಿಬಿಯಲ್ಲಿಯೇ ಇರುವುದನ್ನು ನೋಡಿದರೆ ಇದರ
ಅಭಿವೃದ್ಧಿಗೆ ನಗರ ಪಾಲಿಕೆ ಕಾಳಜಿ ವಹಿಸಿದಂತಿಲ್ಲ. ಕೂಡಲೇ ರಸ್ತೆ, ಚರಂಡಿ, ಸ್ವತ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಇಂಜಿನಿಯರ್‌ಗೆ ಸೂಚಿಸಿದರು. 

ಸಾಗರ ರಸ್ತೆಯಲ್ಲಿರುವ ಕೈಗಾರಿಕಾ ವಸಾಹತಿನ ಉದ್ಯಮಿಗಳು 2006ರಿಂದ ಪ್ರತಿವರ್ಷ 23ಲಕ್ಷ ರೂ. ಕಂದಾಯ ಕಟ್ಟುತ್ತಿದ್ದರೂ ಈವರೆಗೆ ಪಾಲಿಕೆ ಯಾವುದೇ ಸೌಕರ್ಯವನ್ನು ಒದಗಿಸದ ಬಗ್ಗೆ ಅಲ್ಲಿನ ಉದ್ಯಮಿಗಳು ಪ್ರಸ್ತಾಪಿಸಿದರು. 136 ಉದ್ದಿಮೆಗಳು
ಈ ಪ್ರದೇಶದಲ್ಲಿದ್ದು, ಬೀದಿ ದೀಪ, ಶೌಚಾಲಯ, ಕುಡಿಯುವ ನೀರು ಮೊದಲಾದವು ಇಲ್ಲದೇ ತೊಂದರೆಗೀಡಾಗಿದ್ದಾರೆ ಎಂದು ವಿವರಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ರಾಕೇಶ್‌ ಕುಮಾರ್‌ ಪಾಲಿಕೆಯು ಕೂಡಲೇ ಇಲ್ಲಿ ಮೂಲಸೌಕರ್ಯ ಒದಗಿಸಬೇಕೆಂದು ಸೂಚಿಸಿದರು. ದೇವಕಾತಿಕೊಪ್ಪದಲ್ಲಿ ಕೈಗಾರಿಕಾ ಅಭಿವೃದ್ಧಿ ಮಂಡಳಿ  ನಿರ್ಮಿಸಿರುವ ವಸಾಹತಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಬಗ್ಗೆ ಮೆಸ್ಕಾಂ ಮತ್ತು ಕೆಪಿಟಿಸಿಎಲ್‌ ಮಧ್ಯೆ ಉಂಟಾಗಿರುವ ಸಾಮರಸ್ಯದ ಕೊರತೆಯಿಂದ ಕೆಲಸವಾಗದ ಬಗ್ಗೆ ಗಂಭೀರವಾಗಿ ಚರ್ಚಿಸಲಾಯಿತು. ಎರಡೂ ನಿಗಮದ ಅಧಿಕಾರಿಗಳು ಸಭೆಯಲ್ಲಿ ಇದ್ದರು. ಆನಂತರ ವಿದ್ಯುತ್‌ ಸ್ಟೇಷನ್‌ನನ್ನು ಅಲ್ಲಿಗೆ ಮಂಜೂರು ಮಾಡಲು ಕೆಪಿಟಿಸಿಎಲ್‌ ಒಪ್ಪಿಗೆ ನೀಡಿತು. 

ಇಎಸ್‌ಐ ಆಸ್ಪತ್ರೆಯನ್ನು ಎಲ್ಲಿ ಸ್ಥಾಪಿಸಬೇಕೆಂಬ ಬಗ್ಗೆ ತೀವ್ರ ಚರ್ಚೆ ನಡೆಯಿತು. ಆಸ್ಪತ್ರೆ ಮಂಜೂರಾಗಿದ್ದರೂ ಸಹ ಅದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಜಿಲ್ಲಾಡಳಿತಕ್ಕೆ ಬಾರದ ಹಿನ್ನೆಲೆಯಲ್ಲಿ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಸೂಕ್ತ ಜಾಗವನ್ನು ನೀಡುವುದಾಗಿ ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಭರವಸೆ ನೀಡಿದರು. ದೇವಕಾತಿಕೊಪ್ಪದಲ್ಲಿ ಸಾಕಷ್ಟು 
ಜಾಗವಿರುವುದರಿಂದ ಅಲ್ಲಿ ಆಸ್ಪತ್ರೆ ಸ್ಥಾಪಿಸುವುದು ಸೂಕ್ತ ಎಂಬ ಅಭಿಪ್ರಾಯ ಕೆಐಎಡಿಬಿಯಿಂದ ವ್ಯಕ್ತವಾಯಿತಾದರೂ ಶಿವಮೊಗ್ಗ ಮತ್ತು ಭದ್ರಾವತಿ ಮಧ್ಯೆ ಆಸ್ಪತ್ರೆ ಸ್ಥಾಪಿಸಿದರೆ ಅನುಕೂಲವಾಗಬಹುದು ಎಂದು ಬಹುತೇಕ ಉದ್ಯಮಿಗಳು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಬಸವರಾಜ್‌, ಉಪಅಭಿವೃದ್ಧಿ ಅಧಿಕಾರಿ ನಾರಾಯಣ, ಸೂºಡಾ ಆಯುಕ್ತಾ ಮೂಕಪ್ಪ ಕರಭೀಮಣ್ಣನವರ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ರಾಜಪ್ಪ, ಚೇಂಬರ್‌ ಕಾಮರ್ಸ್‌ ಅಧ್ಯಕ್ಷ ಡಿ.ಬಿ. ಶಂಕರಪ್ಪ,
ನಿರ್ದೇಶಕ ಸುರೇಶ್‌, ಸಾಗರ ರಸ್ತೆ ಕೈಗಾರಿಕಾ ವಸಾಹತು ಸಂಘದ ಅಧ್ಯಕ್ಷ ಕೆ.ಜಿ. ನಾಗೇಶ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next