Advertisement

ರಸ್ತೆ ವಿಭಜಕ್ಕೆ ಆಟೋ ಡಿಕ್ಕಿ; ಮೂವರಿಗೆ ಗಾಯ

12:20 PM Aug 08, 2018 | Team Udayavani |

ಬೆಂಗಳೂರು: ಆಟೋ ರಿಕ್ಷಾ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಲಹಂಕದಲ್ಲಿ ಮಂಗಳವಾರ ನಡೆದಿದೆ. ಯಲಹಂಕ ನಿವಾಸಿ ಮದ್ಮುರ್‌ ಪಾಷಾ(56) ಗಾಯಗೊಂಡವರು.

Advertisement

ಆಟೋ ಚಾಲಕರಾಗಿರುವ ಮದ್ಮುರ್‌ ಪಾಷಾ, ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ದೇವನಹಳ್ಳಿಯಿಂದ ಪತ್ನಿ ಬೇಗಂ ಮತ್ತು ಮಗನನ್ನು ಯಲಹಂಕದಲ್ಲಿರುವ ಮನೆಗೆ ಆಟೋದಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಯಲಹಂಕ ಮೇಲ್ಸೇತುವೆ ಬಳಿ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ಪರಿಣಾಮ ಮದ್ಮುರ್‌ ಪಾಷಾ ಗಂಭೀರ ಗಾಯಗೊಂಡಿದ್ದು, ಇವರ ಪತ್ನಿ ಮತ್ತು ಮಗನಿಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದರು. ಪ್ರಕರಣ ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next