Advertisement

ಸಾರಿಗೆ‌ ಕ್ಷೇತ್ರದ ದಿಕ್ಕನ್ನೇ ಬದಲಿಸುತ್ತಿರುವ ಸ್ವಯಂ ಚಾಲಿತ ಕಾರುಗಳು

12:30 AM Jan 18, 2019 | Team Udayavani |

ಸಮಾಜದಲ್ಲಿ ಮಾನವ ತನ್ನ ಇಚ್ಛೆಯಂತೆ ಬದಲಾವಣೆಗೆ ಹೊಂದಿಕೊಳ್ಳುತ್ತಿದ್ದಾನೆ. ಇಂದಿನ ಯುಗವನ್ನು ಅರಿತ ಮಾನವ ಹೆಚ್ಚಾಗಿಯೇ ತನ್ನ ಪರಿಜ್ಞಾನಕ್ಕೆ ತಕ್ಕಂತೆ ಬದಲಾವಣೆಗೂ ಹೊಂದುತ್ತಿದ್ದಾನೆ. ಅದೇ ರೀತಿಯಲ್ಲಿ  ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಾಗಲು ಚಲಿಸುವ ವಾಹನವನ್ನು ಮನುಷ್ಯ ರೂಪಿಸಿದ್ದಾನೆ. ಇದರೊಂದಿಗೆ ಇತ್ತೀಚೆಗಿನ ಬದುಕಿಗೆ ಬದಲಾವಣೆಯ ಗರಿಯನ್ನೂ ಸೃಷ್ಟಿಸಿದ್ದಾನೆ ಎನ್ನಬಹುದು. ಇದು ಸಾಧ್ಯವಾಗಿರುವುದು ಮಾನವನ  ಆಲೋಚನಾ ಶಕ್ತಿಯಿಂದಲೇ.

Advertisement

ಮನುಷ್ಯನು ತನ್ನ ಬಯಕೆಗೆ ತಕ್ಕಂತೆ ಸ್ವಯಂಚಾಲಿತ ಕಾರುಗಳನ್ನು ರೂಪಿಸಿದ್ದಾನೆ. ಇಂದಿನ ದಿನಮಾನಗಳಲ್ಲಿ ವಿದ್ಯುತ್‌ ಮತ್ತು ಬ್ಯಾಟರಿ ಮುಖಾಂತರವಾಗಿ ಚಲಿಸುವ ವಾಹನಗಳು ಮಾರುಕಟ್ಟೆಗೆ ಶರವೇಗದಲ್ಲಿ ಲಗ್ಗೆಯಿಡುತ್ತಿವೆ. ಈ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಸಂಶೋಧನೆಗಳಲ್ಲಿ ಆಟೋಮೊಬೈಲ್‌ ಕ್ಷೇತ್ರವನ್ನೇ ಬದಲಾಯಿಸಿದೆ ಎಂದರೆ ತಪ್ಪಲ್ಲ. ಹತ್ತುಹಲವು ಕಾರುಗಳು ಮಾಸ್‌-ಕ್ಯಾಸ್‌ ಲುಕ್‌ನಲ್ಲಿ  ಆಗಮಿಸುತ್ತಿವೆ. ಅವುಗಳ ರಚನೆಯು ನೋಡುಗರನ್ನು ತನ್ನತ್ತ ಹಿಡಿದಿಟ್ಟುಕೊಳ್ಳುವ ರೀತಿಯಲ್ಲಿವೆ.

ಕಾರುಗಳ ವಿನ್ಯಾಸ ನೋಡುವಾಗ ಅದರಲ್ಲಿ ಕಂಪೆನಿಗಳ ಕೈಚಳಕ ಎದ್ದು ಕಾಣುತ್ತದೆ. ಅದರಲ್ಲೂ ಬಿಎಂಡಬ್ಲ್ಯು, ಟೊಯೊಟಾ ಮತ್ತು ಟೆಸ್ಲಾ, ಟಾಟಾ, ಮಹೀಂದ್ರಾದಂಥ‌ ವಾಹನದ ಕಂಪೆ‌ನಿಗಳು ಸ್ಟಿಯರಿಂಗ್‌ ಅನ್ನೂ ಮನುಷ್ಯನ ಕೈಯಿಂದ ಕಿತ್ತು ಕಂಪ್ಯೂಟರ್‌ ಕೈಗೆ ಹಸ್ತಾಂತರಿಸಿವೆ. ಇದರಿಂದಾಗಿ ಚಾಲಕ ಮಾಡುವ ಕೆಲಸವು ಅಪ್ಲಿಕೇಷನ್ಸ್‌ ಗಳ ಸಹಾಯದಿಂದ ಉತ್ತಮ ರೀತಿಯಲ್ಲಿ ಸಾಥಿ ನೀಡ ತೊಡಗುತ್ತಿವೆ. ಇದು ಮನುಷ್ಯನಿಗೆ ಮನಂಜಿ ಸಲು ಅಪ್ಲಿಕೇಷನ್ಸ್‌ ಗಳ ಅಳವಡಿಸಿಕೊಂಡು ರಿಚ್‌ ಚೇಂಜ್‌ ಆಗಲು ಮಾನವನನ್ನು ಹುರಿದುಂಬಿಸುತ್ತಿವೆ.

ವಿದ್ಯುತ್‌ಚಾಲಿತ  ಕಾರುಗಳು ಸಾಂಪ್ರದಾಯಿಕ ಕಾರುಗಳಿಗಿಂತ ಅಗ್ಗವಾದರೆ ಹೊಸ ಕಾರಗಳ ಹವಾವೇ ಬೇರೆಯಾಗುತ್ತದೆ. ಕೇವಲ 10-15 ನಿಮಿಷ ಅಥವಾ ಅದಕ್ಕಿಂತಲೂ ಕಡಿಮೆ ಅವಧಿಯಲ್ಲಿ ರೀಜಾರ್ಜ್‌ ಇಂಧನ ತುಂಬಿಸಿಕೊಳ್ಳುವ ತಂತ್ರಜ್ಞಾನ ಅಭಿವೃದ್ಧಿಯಾದರೆ ಇಡೀ ಮಾರುಕಟ್ಟೆಯ ಚಿತ್ರಣವೇ ಬದಲಾಗಲಿದೆ. ಇಷ್ಟೊಂದು ಮುಂದುವರಿದ ತಂತ್ರಜ್ಞಾನ ಗಮನಿಸಿದರೆ ಮುಂದಿನ 5 ವರ್ಷದಲ್ಲಿ ಈ ಕಾರ್ಯವು ಆರಂಭವಾಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ ಎಂದು ತಂತ್ರಜ್ಞಾನಿಗಳ ಅಭಿಮತವಾಗಿದೆ.

ಇದಕ್ಕೆ ಪ್ರಮುಖವಾದ ಕಾರಣವೆಂದರೆ, ಕಳೆದ ಒಂದು ದಶಕದಿಂದ ಆದ ಸುಧಾರಿತ ತಂತ್ರಜ್ಞಾನದ ಆವಿಷ್ಕಾರ. ಕಂಪ್ಯೂಟರಿಂಗ್‌, ಹಾರ್ಡ್‌ವೇರ್‌ ಮತ್ತು ಸಾಫ್ಟ್ವೇರ್‌ ಬಳಕೆಯಲ್ಲಿ ಜನರಿಗೆ ಕುತೂಹಲವನ್ನು ತಂದುಕೊಟ್ಟದ್ದು ಈ ತಂತ್ರಜ್ಞಾನಗಳೇ. ಹೀಗೆ ದಶಕಗಳ ಯೋಚನಾಲಹರಿಯೊಂದಿಗೆ ಇಂದು ಸ್ವಯಂ ಚಾಲಿತ ವಾಹನಗಳ ಅಭಿವೃದ್ಧಿ ಪರದೆಯಲ್ಲಿ ಛಾಪು ಮೂಡಿಸುತ್ತಿವೆ. 

Advertisement

ಅಷ್ಟೇ ಅಲ್ಲದೆ ಈ ಸ್ವಯಂಚಾಲಿತ ಕಾರುಗಳು ಮಾವನಿಗಿಂತ ಉತ್ತಮ ಎಂಬ ಬಿರುದು ಹೊಂದಿ, ಒಳ್ಳೆಯ ರೈಡರ್‌ಗಳಾಗಿ ಮಾರುಕಟ್ಟೆಗೆ ಆಗಮಿಸುತ್ತಿವೆ. ಆಲ್ಲದೆ ಈ ಕಾರುಗಳು ಅಪಘಾತ ರಹಿತ ಚಾಲನೆ ಎಂಬುವುದನ್ನೂ ಈಗಾಗಲೇ ಸಾಧಿಸಿಯೂ ತೋರಿಸಿವೆೆ. ಇನ್ನೊಂದು ವಿಚಾರವೆಂದರೆ, ಮಾನವನಂತೆ ಕಂಪ್ಯೂಟರ್‌ ಯಾವ ಸಮಯದಲ್ಲಿಯೂ ನಿದ್ರೆಗೆ ಜಾರುವುದಿಲ್ಲ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಕಡಿಮೆ.

1990ರ ದಶಕದಲ್ಲಿ ಕಾರಿನಲ್ಲಿ ಕಂಪ್ಯೂಟರಿಂಗ್‌ ತಂತ್ರಜ್ಞಾನ ಹೇಗೆ ಬಳಕೆಯಲ್ಲಿತ್ತು ಅಂದರೆ, ಎಂಜಿನ್‌ನ ಒಳಭಾಗದ ನೆರವಿನಿಂದ ಇಂಧನ ಮತ್ತು ಗಾಳಿಯನ್ನು ಬೆರಕೆ ಮಾಡಲು ಮತ್ತು ಇಂಗಾಲ ಉಗುಳುವಿಕೆಯ ವ್ಯವಸ್ಥೆ ನಿಯಂತ್ರಿಸಲು ಬಳಸುತ್ತಿ ದ್ದರು. ಆದರೆ, ಇಂದಿನ ವೇಗದ ಕ್ರಿಯೆಯು ಇಡೀ ಪ್ರಪಂಚವನ್ನೇ ತನ್ನ ಕೈ ಮುಷ್ಠಿಯಲ್ಲಿ ಆವರಿಸಿ ಹಿಡಿದಿಟ್ಟುಕೊಂಡಿದೆ.  ವಾಹನದಲ್ಲೂ ಮ್ಯೂಜಿಕ್‌, ಧ್ವನಿ, ಬೆಳಕು ಮತ್ತು ವಾತಾವರಣಕ್ಕೆ ಸರಿಯಾಗಿ ಚಾಲನೆ ಮಾಡುವ ಸುಗಮದ ಕೃತಕ ಬುದ್ಧಿಮತ್ತೆಯು ತಂತ್ರಜ್ಞಾನ ನಿರ್ವಹಿಸುವಂತೆ ಮಾಡುತ್ತದೆ. 

ಪ್ರಮೋದ ಎಚ್‌. ಕುಂದಗೋಳ 
ಸ್ನಾತಕೋತರ ಪದವಿ ಮಂಗಳೂರು ವಿಶ್ವವಿದ್ಯಾನಿಲಯ

Advertisement

Udayavani is now on Telegram. Click here to join our channel and stay updated with the latest news.

Next