Advertisement

Olympics ಕುಸ್ತಿ ಆಯ್ಕೆ ಟ್ರಯಲ್ಸ್‌ ಮಧ್ಯಾಂತರ ಸಮಿತಿಗೆ ಅಧಿಕಾರ

12:31 AM Mar 09, 2024 | Team Udayavani |

ಹೊಸದಿಲ್ಲಿ: ಈ ಬಾರಿಯ ಹಿರಿಯರ ಏಷ್ಯಾ ಕುಸ್ತಿ ಕೂಟ ಮತ್ತು ಒಲಿಂಪಿಕ್ಸ್‌ ಏಷ್ಯಾ ಅರ್ಹತಾ ಸುತ್ತಿಗೆ ಆಯ್ಕೆ ಟ್ರಯಲ್ಸ್‌ ನಿಂದ ಡಬ್ಲ್ಯುಎಫ್ಐ (ಭಾರತ ಕುಸ್ತಿ ಒಕ್ಕೂಟ) ಹಿಂದೆ ಸರಿದಿದೆ. ದಿಲ್ಲಿ ಉಚ್ಚ ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಅದು ಹಿಂದೆ ಸರಿದಿರುವುದರಿಂದ, ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ) ನೇಮಿಸಿದ ಮಧ್ಯಾಂತರ ಸಮಿತಿ ಆಯ್ಕೆ ಟ್ರಯಲ್ಸ್‌ ನಡೆಸಲಿದೆ.

Advertisement

ಇದೇ ವೇಳೆ ಮಧ್ಯಂತರ ಸಮಿತಿಗೆ ಪರ್ಯಾಯವಾಗಿ ಬೇರೆ ಯಾರೂ ಆಯ್ಕೆ ಟ್ರಯಲ್ಸ್‌ ನಡೆಸುವಂತಿಲ್ಲ. ಮಧ್ಯಂತರ ಸಮಿತಿಯ ಟ್ರಯಲ್ಸ್‌ನಲ್ಲಿ ಎಲ್ಲ ಅರ್ಹ ಕುಸ್ತಿಪಟುಗಳಿಗೂ ಅವಕಾಶ ನೀಡಬೇಕೆಂದು ನ್ಯಾಯಾಲಯ ಹೇಳಿದೆ.

ಬೆಳವಣಿಗೆಯ ಹಿನ್ನೆಲೆ
ಫೆ. 26ರಂದು ಡಬ್ಲ್ಯುಎಫ್ಐ ಹೊರಡಿಸಿದ್ದ ಒಂದು ಸುತ್ತೋಲೆಯಲ್ಲಿ ತಾನೇ ಆಯ್ಕೆ ಟ್ರಯಲ್ಸ್‌ ನಡೆಸುವುದಾಗಿ ಹೇಳಿತ್ತು. ಇದನ್ನು ವಿರೋಧಿಸಿ, ಬಜರಂಗ್‌ ಪುನಿಯ, ವಿನೇಶ್‌ ಫೊಗಾಟ್‌, ಸಾಕ್ಷಿ ಮಲಿಕ್‌ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೇಂದ್ರ ಕ್ರೀಡಾ ಸಚಿವಾಲಯದಿಂದ ಅಮಾನತುಗೊಂಡಿರುವ ಡಬ್ಲ್ಯುಎಫ್ಐಗೆ ಆಯ್ಕೆ ಟ್ರಯಲ್ಸ್‌ ನಡೆಸುವ ಅಧಿಕಾರವಿಲ್ಲ, ಅದು ರಾಷ್ಟ್ರೀಯ ಕ್ರೀಡಾ ನೀತಿಯನ್ನು ಉಲ್ಲಂ ಸಿದೆ ಎಂದು ಅರ್ಜಿ ಹಾಕಿದ್ದರು. ಇದನ್ನು ದಿಲ್ಲಿ ಉಚ್ಚ ನ್ಯಾಯಾಲಯ ಪುರಸ್ಕರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next