ಆಟ ಆಡುವುದರಿಂದ ದೈಹಿಕ ಕ್ಷಮತೆ ಹೆಚ್ಚುತ್ತದೆ ಅನ್ನೋದು ಗೊತ್ತೇ ಇದೆ. ಆದರೆ, ಕೆಲವು ಆಟಗಳು ನಮ್ಮ ಮನೋವಿಕಾಸ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ. ಅವುಗಳಿಗೆ “ಅಥೆಂಟಿಕ್ ರಿಲೇಟಿಂಗ್ ಗೇಮ್ಸ್’ ಎನ್ನುತ್ತಾರೆ. ಈ ಆಟ ಆಡುತ್ತಾ ಆಡುತ್ತಾ ನಿಮಗೆ ನೀವು ಮತ್ತಷ್ಟು ಹತ್ತಿರವಾಗಬಹುದು. ನಿಮ್ಮ ಬಗ್ಗೆ ನಿಮಗೇ ಗೊತ್ತಿರದ ಅಂಶಗಳನ್ನು ತಿಳಿದುಕೊಳ್ಳಬಹುದು. ನಿಮ್ಮ ಶಕ್ತಿ, ದೌರ್ಬಲ್ಯ, ಭಾವನೆಗಳು ಏನೇನು, ಅವುಗಳನ್ನು ಮತ್ತೂಬ್ಬರಿಗೆ ವಿವರಿಸುವುದು ಹೇಗೆ ಎಂಬುದು ಕೂಡ ತಿಳಿಯುತ್ತದೆ. ಈ ಆಟ ಆಡೋದ್ರಿಂದ ಇಷ್ಟೆಲ್ಲಾ ಉಪಯೋಗಗಳಿವೆ ಅಂತಾದ ಮೇಲೆ, ಈ ಭಾನುವಾರ ಸಂಜೆ ಬಿಡುವು ಮಾಡಿಕೊಂಡು ಅಟ್ಟ ಗಲಾಟಕ್ಕೆ ಬನ್ನಿ. ಹೊಸ ಹೊಸ ಗೆಳೆಯರನ್ನು ಭೇಟಿ ಮಾಡಿ, ಅವರನ್ನು ಅರ್ಥೈಸಿಕೊಳ್ಳಿ, ನಿಮ್ಮನ್ನು ಅರಿತುಕೊಳ್ಳಿ. ನಿಮಗೆ ಆಟ ಹೇಳಿ ಕೊಡಲು, ಆರ್ಟ್ ಥೆರಪಿಸ್ಟ್‌ಗಳಾದ ರೋಯ್ ಜಾಕೊಬ್ ಹಾಗೂ ಮನಾಲಿ ಮನೋಹರನ್ ಅಲ್ಲಿರುತ್ತಾರೆ. 18 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದಾಗಿದ್ದು, ಟಿಕೆಟ್‌ಗಳು //go.eventshigh.com/hqiew ನಲ್ಲಿ ಲಭ್ಯ.
ಎಲ್ಲಿ?: ಅಟ್ಟ ಗಲಾಟ, #134, ಕೆಎಚ್‌ಬಿ ಕಾಲೊನಿ, 5ನೇ ಬ್ಲಾಕ್, ಕೋರಮಂಗಲ
ಯಾವಾಗ?: ನ.11, ಭಾನುವಾರ ಸಂಜೆ 5-8