Advertisement
ಈ ಪಂದ್ಯಾವಳಿಯನ್ನು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ನಡೆಸುವುದು ಆಸ್ಟ್ರೇಲಿಯನ್ ಓಪನ್ ಸಂಘಟಕರ ಸದ್ಯದ ಯೋಜನೆಯಾಗಿದೆ. ಇದರಲ್ಲಿ ಭಾಗವಹಿಸಲಿರುವ ಟೆನಿಸಿಗರು ಎರಡು ವಾರಗಳ ಕಟ್ಟುನಿಟ್ಟಿನ ಕ್ವಾರಂಟೈನ್‌ಗೆ ಒಳಗಾಗಬೇಕಾದ ಕಾರಣ ಡಿಸೆಂಬರ್ ಮಧ್ಯ ಭಾಗದಲ್ಲೇ ವಿಕ್ಟೋರಿಯಾಕ್ಕೆ ಆಗಮಿಸಬೇಕಿದೆ. ಆದರೆ ಇದು ಎಲ್ಲರಿಗೂ ಸಾಧ್ಯವಾಗದು ಎಂಬುದಾಗಿ “ಹೆರಾಲ್ಡ್ ಸನ್’ ವರದಿ ತಿಳಿಸಿದೆ.
Related Articles
“ಈ ವಾರದ ಆರಂಭದಲ್ಲಿ ನಾವು ವಿಕ್ಟೋರಿಯಾ ಸರಕಾರದೊಂದಿಗೆ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದೇವೆ. ಅತೀ ಶೀಘ್ರದಲ್ಲಿ ಸ್ಪಷ್ಟ ಚಿತ್ರಣ ನೀಡಲಾಗುವುದು’ ಎಂದು ಟೆನಿಸ್ ಆಸ್ಟ್ರೇಲಿಯ ಪ್ರತಿಕ್ರಿಯಿಸಿದೆ.
ಇದೇ ವೇಳೆ ವಿಕ್ಟೋರಿಯಾದ ಪ್ರೀಮಿಯರ್ ಡೇನಿಯಲ್ ಆ್ಯಂಡ್ರೂಸ್, ಈ ಟೂರ್ನಿ ಎಂದಿನಂತೆ ವರ್ಷಾರಂಭದಲ್ಲೇ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement