Advertisement
ಹಾಲಿ ಚಾಂಪಿಯನ್ ಜೊಕೋವಿಕ್ 6-3, 6-7 (3-7), 7-6 (7-2), 6-3 ಅಂತರದಿಂದ ಅಮೆರಿಕದ ಫ್ರಾನ್ಸೆಸ್ ಥಿಯಾಫೊ ವಿರುದ್ಧ ಮೇಲುಗೈ ಸಾಧಿಸಿದರು. ಕಳೆದ ವರ್ಷದ ಫೈನಲ್‌ನಲ್ಲಿ ಎಡವಿದ್ದ ಥೀಮ್ ಜರ್ಮನಿಯ ಡೊಮಿನಿಕ್ ಕೋಫರ್ ವಿರುದ್ಧ 6-4, 6-0, 6-2 ಅಂತರದ ಗೆಲುವು ಒಲಿಸಿಕೊಂಡರು.
Related Articles
24ನೇ ಗ್ರ್ಯಾನ್‌ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್ ಮತ್ತೂಂದು ಸುಲಭ ಜಯದೊಂದಿಗೆ ದ್ವಿತೀಯ ಸುತ್ತು ದಾಟಿದರು. ಅವರು ಸರ್ಬಿಯಾದ ನಿನಾ ಸೊಜಾನೋವಿಕ್ ವಿರುದ್ಧ 6-3, 6-0 ಅಂತರದ ಗೆಲುವು ಕಂಡರು. ಆದರೆ ಅಕ್ಕ ವೀನಸ್ ವಿಲಿಯಮ್ಸ್ ಆಟ ದ್ವಿತೀಯ ಸುತ್ತಿಗೆ ಮುಗಿಯಿತು. ಇಟಲಿಯ ಸಾರಾ ಎರಾನಿ ವಿರುದ್ಧ ಮೊದಲ ಸೆಟ್ ವೇಳೆ ಪಾದದ ನೋವಿಗೆ ಸಿಲುಕಿದರು. ಆಗ ವೀನಸ್ 1-5ರ ಹಿನ್ನಡೆಯಲ್ಲಿದ್ದರು. ಬಳಿಕ ಆಟ ಮುಂದುವರಿಸಿದರೂ ಅದೃಷ್ಟ ಕೈ ಹಿಡಿಯಲಿಲ್ಲ. 6-1, 6-0 ಅಂತರದ ಜಯ ಎರಾನಿ ಪಾಲಾಯಿತು.
Advertisement
ಕೆನಡಾದ ಬಿಯಾಂಕಾ ಆ್ಯಂಡ್ರಿಸ್ಕೂ ತೈವಾನ್‌ನ ಶೀ ಸು-ವೀ ವಿರುದ್ಧ 3-6, 2-6 ಅಂತರದಿಂದ ಎಡವಿದರು. ನವೋಮಿ ಒಸಾಕಾ ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ ಅವರನ್ನು 6-2, 6-3ರಿಂದ; ಹಾಲೆಪ್ ಆತಿಥೇಯ ನಾಡಿನ ಅಜ್ಲಾ ಟಾಮ್‌ಜಾನೋವಿಕ್ ಅವರನ್ನು 4-6, 6-4, 7-5ರಿಂದ ಮಣಿಸಿದರು.
ಬೋಪಣ್ಣ ಜೋಡಿಗೆ ಮೊದಲ ಸುತ್ತಲ್ಲೇ ಸೋಲುರೋಹನ್ ಬೋಪಣ್ಣ-ಬೆನ್ ಮೆಕ್‌ಲಾಕನ್ ಜೋಡಿ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಸೋಲನುಭವಿಸಿದೆ. ಇವರನ್ನು ಕೊರಿಯಾದ ವೈಲ್ಡ್ ಕಾರ್ಡ್ ಪ್ರವೇಶಿಗರಾದ ಜಿ ಸುಂಗ್ ನಾಮ್-ಮಿನ್ ಕ್ಯು ಸಾಂಗ್ 6-4, 7-6 (7-0) ಅಂತರದಿಂದ ಕೆಡವಿದರು. ಇನ್ನು ಈ ಕೂಟದಲ್ಲಿ ಉಳಿದಿರುವ ಭಾರತದ ಸ್ಪರ್ಧಿಗಳೆಂದರೆ ದಿವಿಜ್ ಶರಣ್ (ಪುರುಷರ ಡಬಲ್ಸ್) ಮತ್ತು ಅಂಕಿತಾ ರೈನಾ ಮಾತ್ರ (ವನಿತಾ ಡಬಲ್ಸ್). ದ್ವಿತೀಯ ದಿನದಾಟದಲ್ಲಿ ಸುಮಿತ್ ನಾಗಲ್ ಕೂಡ ಮೊದಲ ಸುತ್ತಿನಲ್ಲೇ ಪರಾಭವಗೊಂಡು ನಿರ್ಗಮಿಸಿದ್ದರು.