Advertisement

ಮೆಲ್ಬರ್ನ್ ಗೆ ಆಗಮಿಸಿದ ಶೇನ್‌ ವಾರ್ನ್ ಪಾರ್ಥಿವ ಶರೀರ

11:39 PM Mar 10, 2022 | Team Udayavani |

ಮೆಲ್ಬರ್ನ್: ಕಳೆದ ಶುಕ್ರವಾರ ಥಾಯ್ಲೆಂಡ್‌ನ‌ಲ್ಲಿ ನಿಧನ ಹೊಂದಿದ ಆಸ್ಟ್ರೇಲಿಯದ ಲೆಜೆಂಡ್ರಿ ಸ್ಪಿನ್ನರ್‌ ಶೇನ್‌ ವಾರ್ನ್ ಅವರ ಪಾರ್ಥಿವ ಶರೀರ ವಿಶೇಷ ವಿಮಾನದಲ್ಲಿ ಗುರುವಾರ ಸಂಜೆ ಮೆಲ್ಬರ್ನ್ ಗೆ ಆಗಮಿಸಿತು. ಬೆಳಗ್ಗೆ 7 ಗಂಟೆಗೆ ಬ್ಯಾಂಕಾಕ್‌ನಿಂದ ಹೊರಟ ಈ ವಿಮಾನ 8 ಗಂಟೆಗಳ ಪ್ರಯಾಣದ ಬಳಿಕ ಮೆಲ್ಬರ್ನ್ಗೆ ಬಂದಿಳಿಯಿತು. ವಾರ್ನ್ ಅವರ ಶವಪೆಟ್ಟಿಗೆಗೆ ಆಸ್ಟ್ರೇಲಿಯದ ರಾಷ್ಟ್ರಧ್ವಜವನ್ನು ಹೊದಿಸಲಾಗಿತ್ತು.

Advertisement

ಕೊನೆಯ ದೃಶ್ಯಾವಳಿ
ಶೇನ್‌ ವಾರ್ನ್ ಅವರ ಕೊನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿದೆ. ಶುಕ್ರವಾರ ಸಾವನ್ನಪ್ಪುವ ಮುನ್ನ ಅವರು ಬಿಳಿ ಬಣ್ಣದ ಮಾಮೂಲು ಟೀ ಶರ್ಟ್‌, ಕಪ್ಪು ಶಾರ್ಟ್ಸ್ ಹಾಗೂ ಕ್ಯಾಪ್‌ ಧರಿಸಿ “ಲಾಬಿ’ಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಜತೆಗೆ ಹೆಗಲ ಮೇಲೆ ಒಂದಿಷ್ಟು ಶರ್ಟ್‌ ಕೂಡ ಇದ್ದಿತ್ತು. ಅವರು ಹೊಸ ಡ್ರೆಸ್‌ ಹೊಲಿಯುವ ಸಲುವಾಗಿ ಬ್ರಿಯಾನಿ ಟೇಲರ್‌ ಬಳಿ ಸುಮಾರು ಒಂದು ಗಂಟೆ ಕಾಲ ಕಳೆದಿದ್ದರು ಎಂದು “ಫಾಕ್ಸ್‌ ಸ್ಪೋರ್ಟ್ಸ್’ ವರದಿ ಮಾಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next