ಫೋಟೋಗ್ರಫಿ ಕೆಲಸ ಎಷ್ಟು ಸೃಜನಾತ್ಮಕತೆಯಿಂದ ಕೂಡಿರುತ್ತದೆ ಎಂಬುದಕ್ಕೆ ಆಷ್ಟ್ರೇಲಿಯಾದ ಫೋಟೋಗ್ರಾಫರ್ ತೆಗೆದಿರುವ ಈ ಫೋಟೋಗಳೇ ಸಾಕ್ಷಿ. ಮೊಸಳೆಯೊಂದು ಶಾರ್ಕ್ ಫಿಶ್ ಅನ್ನು ತಿನ್ನುವ ಕ್ಷಣವನ್ನು ಕ್ಯಾಮೆರಾದಲ್ಲಿ ಸದ್ಭುತವಾಗಿ ಸೆರೆ ಹಿಡಿದಿದ್ದಾರೆ. ಈ ಫೋಟೋಗಳನ್ನು ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದು, ಭಾರೀ ಮೆಚ್ಚುಗೆಗೆ ಕಾರಣವಗುತ್ತಿದೆ.
ಮಾರ್ಕ್ ಜಿಂಬಿಕಿ(46) ಎಂಬುವವರು ಈ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ. ಇತ್ತೀಚೆಗೆ ಇವರು ದಕ್ಷಿಣ ಆಫ್ರಿಕಾದ ಪೂರ್ವ ಕರಾವಳಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಫೋಟೋಗಳನ್ನು ತೆಗೆದಿದ್ದಾರೆ. ಮಾರ್ಕ್ ಕೇವಲ ಫೋಟೋಗ್ರಾಫರ್ ಮಾತ್ರವಲ್ಲದೆ ಸಂಶೋಧನಾ ವಿಜ್ಞಾನಿ ಕೂಡ ಹೌದು. ಹಾಗಾಗ ಹೊಸ ಹೊಸ ಜಾಗಗಳಿಗೆ ಹೋಗಿ ಸಂಶೋಧನೆ ನಡೆಸುತ್ತಾರೆ.
ಮೂರು ಫೋಟೋಗಳನ್ನು ತೆಗೆದಿರುವ ಇವರು, ಮೊದಲನೆ ಫೋಟೋದಲ್ಲಿ ಮೊಸಳೆಯು ಶಾರ್ಕ್ ಮೀನನ್ನು ಹಿಡಿಯುತ್ತದೆ, ಎರಡನೇಯದರಲ್ಲಿ ಶಾರ್ಕ್ ಮೊಸಳೆಯಿಂದ ತಪ್ಪಿಸಿಕೊಳ್ಳಲು ಪ್ರತ್ನಿಸುತ್ತಿದೆ, ಮೂರನೇ ಫೋಟೋದಲ್ಲಿ ಶಾರ್ಕ್ ಅನ್ನು ಮೊಸಳ ಕಡಿಯುತ್ತಿದೆ.
ಈ ಫೋಟೋ ಬಗ್ಗೆ ಬರೆದಿರುವ ಮಾರ್ಕ್, ಇತ್ತೀಚೆಗೆ ಸುರಿದ ಅತಿಯಾದ ಮಳೆಯಿಂದ ಸೇಂಟ್ ಲೂಸಿಯಾ ನದಿಯಲ್ಲಿ ಎರಡು ಪರಭಕ್ಷಕಗಳ ಭೇಟಿಯಾಗಿದೆ. ಈ ಫೋಟೋಗಳನ್ನು 60 ಅಡಿ ಸಮೀಪದಿಂದ ತೆಗೆಯಲಾಗಿದೆ. ಅಲ್ಲದೆ ಈ ಫೋಟೋಗಳನ್ನು ಸೆರೆ ಹಿಡಿಯಲು ಕೆನಾನ್ 5ಡಿ ಎಸ್ ಎಲ್ ಆರ್ ಕ್ಯಾಮೆರಾ ಬಳಸಿರುವುದಾಗಿಯೂ ತಿಳಿಸಿದ್ದಾರೆ.