Advertisement
ಶುಕ್ರವಾರ ನಡೆದ ತೃತೀಯ ಸುತ್ತಿನ ಮುಖಾಮುಖಿಯಲ್ಲಿ ಅವರನ್ನು ಅಮೆರಿಕದ ಅಮಂಡಾ ಅನಿಸಿಮೋವಾ ದಿಟ್ಟ ಹೋರಾಟದ ಬಳಿಕ 4-6, 6-3, 7-6 (10-5) ಅಂತರದಿಂದ ಮಣಿಸಿದರು.
4ನೇ ಸುತ್ತು ತಲುಪಿದ ಮತ್ತೋರ್ವ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ. ಅವರು 15ನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾಗೆ 6-0, 6-2 ಅಂತರದ ಸೋಲುಣಿಸಿದರು.
Related Articles
Advertisement
ಇದನ್ನೂ ಓದಿ:ಪ್ರೊ ಕಬಡ್ಡಿ: ದಬಾಂಗ್ ಡೆಲ್ಲಿ ವಿರುದ್ಧ ಹರ್ಯಾಣಗೆ ಗೆಲುವು
ಜ್ವೆರೇವ್ ಗೆಲುವಿನ ಓಟಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.3 ಆಟಗಾರ ಹಾಗೂ ಒಲಿಂಪಿಕ್ಸ್ ಚಾಂಪಿಯನ್ ಕೂಡ ಆಗಿರುವ ಅಲೆಕ್ಸಾಂಡರ್ ಜ್ವೆರೇವ್ ಅವರ ಗೆಲುವಿನ ಓಟ 4ನೇ ಸುತ್ತಿಗೆ ಮುಂದುವರಿದಿದೆ. ಅವರು ರಾಡು ಅಲ್ಬೋಟ್ ವಿರುದ್ಧ 6-3, 6-4, 6-4 ಅಂತರದ ಜಯ ಸಾಧಿಸಿದರು. ಜ್ವೆರೇವ್ ಈವರೆಗೆ ಒಂದೂ ಸೆಟ್ ಕಳೆದುಕೊಳ್ಳಲಿಲ್ಲ ಎಂಬುದು ವಿಶೇಷ. ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಿ ಬೇಗನೇ ನಿರ್ಗಮಿಸಬೇಕಿದ್ದ ಅವರದೇ ನಾಡಿನ ಮಿಯೋಮಿರ್ ಕೆಕಾ¾ನೋವಿಕ್ ಕನಸಿನ ಓಟ ಮುಂದುವರಿಸಿದ್ದಾರೆ. 25ನೇ ಶ್ರೇಯಾಂಕದ ಲೊರೆಂಜೊ ಸೊನೆಗೊ ವಿರುದ್ಧದ 3ನೇ ಸುತ್ತಿನ ಮುಖಾಮುಖಿಯನ್ನು ಅವರು 6-4, 6-7 (8), 6-2, 7-5 ಅಂತರದಿಂದ ತಮ್ಮದಾಗಿಸಿಕೊಂಡರು. ಈ 77ನೇ ರ್‍ಯಾಂಕಿಂಗ್ ಆಟಗಾರನ ಮುಂದಿನ ಎದುರಾಳಿ ಫ್ರಾನ್ಸ್‌ನ ಗೇಲ್ ಮಾನ್‌ಫಿಲ್ಸ್.