Advertisement
ಅಷ್ಟೇನೂ ಫಿಟ್‌ನೆಸ್ ಹೊಂದಿಲ್ಲದ ನಡಾಲ್ ಅವರನ್ನು ಅಮೆರಿಕದ ಮೆಕೆಂಝಿ ಮೆಕ್‌ಡೊನಾಲ್ಡ್ 6-4, 6-4, 7-5 ಅಂತರದ ನೇರ ಸೆಟ್‌ಗಳಲ್ಲಿ ಮಣಿಸಿದರು.
Related Articles
Advertisement
ಪುರುಷರ ವಿಭಾಗದ ಇನ್ನೊಂದು ಪಂದ್ಯದಲ್ಲಿ ಕೆನಡಾದ ಫೆಲಿಕ್ಸ್ ಔಗರ್ ಅಲಿಯಾಸಿಮ್ ಸ್ವಲ್ಪದರಲ್ಲೇ ಬಚಾವಾದರು. ಸ್ಲೊವಾಕಿಯಾದ ಅಲೆಕ್ಸ್ ಮೋಲ್‌ಕ್ಯಾನ್ ವಿರುದ್ಧದ 5 ಸೆಟ್‌ಗಳ ಜಿದ್ದಾಜಿದ್ದಿ ಕಾಳಗದಲ್ಲಿ ಅಲಿಯಾಸಿಮ್ 3-6, 3-6, 6-3, 6-2, 6-2ರಿಂದ ಗೆದ್ದು ಬಂದರು.
ಡಾರ್ಕ್ ಹಾರ್ಸ್ ಆಗಿರುವ ಇಟಲಿಯ ಜಾನಿಕ್ ಸಿನ್ನರ್ ಆರ್ಜೆಂ ಟೀನಾದ ಥಾಮಸ್ ಈಶೆವೆರಿ ವಿರುದ್ಧ 6 -3, 6-2, 6-2 ಅಂತರದ ನೇರ ಸೆಟ್‌ಗಳ ಜಯ ಸಾಧಿಸಿದರು.
ಸ್ವಿಯಾಟೆಕ್, ಸಕ್ಕರಿ ವಿಜಯವನಿತಾ ವಿಭಾಗದ ನೆಚ್ಚಿನ ಆಟಗಾರ್ತಿ, ನಂ.1 ಖ್ಯಾತಿಯ ಐಗಾ ಸ್ವಿಯಾಟೆಕ್ ಕೊಲಂಬಿಯಾದ ಕ್ಯಾಮಿಲಾ ಒಸೋರಿಯೊ ಅವರನ್ನು 6-2, 6-3ರಿಂದ ಹಿಮ್ಮೆಟ್ಟಿಸಿ 3ನೇ ಸುತ್ತಿಗೆ ಏರಿದರು. ಗ್ರೀಕ್‌ನ 6ನೇ ಶ್ರೇಯಾಂಕದ ಮರಿಯಾ ಸಕ್ಕರಿ 18 ವರ್ಷದ ಎದುರಾಳಿ, ರಷ್ಯಾದ ದಿಯಾನಾ ಶ್ನೆàಡರ್ ವಿರುದ್ಧ ಸೋಲಿನ ದವಡೆ ಯಿಂದ ಪಾರಾದರು. ಸಕ್ಕರಿ ಗೆಲುವಿನ ಅಂತರ 3-6, 7-5, 6-3. ಅಮೆರಿಕದ 18ರ ಹರೆಯದ ಕೊಕೊ ಗಾಫ್ ಬ್ರಿಟನ್‌ನ ಮತ್ತೋರ್ವ ಯುವ ಆಟಗಾರ್ತಿ ಎಮ್ಮಾ ರಾಡುಕಾನು ವಿರುದ್ಧ 6-3, 7-6 (4)ರಿಂದ ಗೆದ್ದು ದ್ವಿತೀಯ ಸುತ್ತು ದಾಟಿದರು. ಇವರಿಬ್ಬರ ಮೊದಲ ಮುಖಾಮುಖಿ ಇದಾಗಿತ್ತು. ಕೊಕೊಗಾಫ್ ಕಳೆದ ಫ್ರೆಂಚ್ ಓಪನ್ ಫೈನಲಿಸ್ಟ್ ಆಗಿದ್ದು, ಅಲ್ಲಿ ಐಗಾ ಸ್ವಿಯಾಟೆಕ್‌ಗೆ ಶರಣಾಗಿದ್ದರು.