Advertisement
ವೋಜ್ನಿಯಾಕಿ ಒಂದು ತಾಸಿಗಿಂತ ಮೊದಲೆ ಸ್ಲೊವಾಕಿಯಾದ ಮಗ್ಡಲೆನಾ ರಿಬರಿಕೋವಾ ಅವರನ್ನು 6-3, 6-0 ಸೆಟ್‌ಗಳಿಂದ ಸೋಲಿಸಿ ಅಂತಿಮ ಎಂಟರ ಸುತ್ತಿಗೇರಿದರು. 2012ರ ಬಳಿಕ ಅವರು ಕ್ವಾರ್ಟರ್‌ಫೈನಲಿಗೇರಿರುವುದು ಇದೇ ಮೊದಲ ಸಲವಾಗಿದೆ. ವೋಜ್ನಿಯಾಕಿ ಕ್ವಾರ್ಟರ್‌ಫೈನಲ್‌ನಲ್ಲಿ ಕಾರ್ಲಾ ಸೂರೆಜ್ ನವಾರೊ ಅವರ ಸವಾಲನ್ನು ಎದುರಿಸಲಿದ್ದಾರೆ.
ಬೆಲ್ಜಿಯಂನ ಎಲಿಸೆ ಮಾರ್ಟೆನ್ಸ್ ಅವರು ಪೆಟ್ರಾ ಮಾರ್ಟಿಕ್ ಅವರನ್ನು ನೇರ ಸೆಟ್‌ಗಳಿಂದ ಕೆಡಹಿ ಕ್ವಾರ್ಟರ್‌ಫೈನಲ್ ತಲುಪಿದರು. 2012ರಲ್ಲಿ ಕಿಮ್ ಕ್ಲಿಸ್ಟರ್ ಬಳಿಕ ಇಲ್ಲಿ ಕ್ವಾರ್ಟರ್‌ಫೈನಲಿಗೇರಿದ ಬೆಲ್ಜಿಯಂನ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಾರ್ಟೆನ್ಸ್ ಪಾತ್ರರಾಗಿದ್ದಾರೆ. ಶ್ರೇಯಾಂಕರಹಿತ ಆಟಗಾರ್ತಿಯಾಗಿರುವ ಮಾರ್ಟೆನ್ಸ್ ಅವರು 7-6 (7-4), 7-5 ಸೆಟ್‌ಗಳಿಂದ ಜಯ ಸಾಧಿಸಿ ಅಂತಿಮ ಎಂಟರ ಸುತ್ತಿಗೆ ಮುನ್ನಡೆದರು.
Related Articles
ಮೆಲ್ಬರ್ನ್: ಭಾರತದ ಲಿಯಾಂಡರ್ ಪೇಸ್ ಮತ್ತು ಪುರವ್ ರಾಜ ಅವರು ಆಸ್ಟ್ರೇಲಿ ಯನ್ ಓಪನ್‌ನ ಪುರುಷರ ಡಬಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್ ಹೋರಾಟದಲ್ಲಿ ನೇರ ಸೆಟ್‌ಗಳ ಸೋಲು ಕಂಡಿದ್ದಾರೆ.
Advertisement
ಈ ಹೋರಾಟ ದಲ್ಲಿ ಪೇಸ್-ರಾಜ ಅವರು ಕೊಲಂಬಿಯಾದ ಜುವಾನ್ ಸೆಬಾಸ್ಟಿಯನ್ ಕಬಾಲ್ ಮತ್ತು ರಾಬರ್ಟ್ ಫರಾಹ್ ಅವರೆದುರು 1-6, 2-6 ಸೆಟ್‌ಗಳಿಂದ ಪರಾಭವಗೊಂಡರು. ಶ್ರೇಯಾಂಕರಹಿತ ಆಟಗಾರರಾದ ಪೇಸ್-ರಾಜ ಒಂದು ತಾಸು ಮತ್ತು 9 ನಿಮಿಷಗಳವರೆಗೆ ಹೋರಾಡಿ ಕೊನೆಗೆ ಶರಣಾದರು.
ಪಂದ್ಯದಲ್ಲಿ ಐದು ಬಾರಿ ಬ್ರೇಕ್ ಪಾಯಿಂಟ್ ಸಿಕ್ಕಿದರೂ ಪೇಸ್ ಮತ್ತು ರಾಜ ಅದರ ಸುದಪಯೋಗ ಮಾಡಿಕೊಳ್ಳಲು ವಿಫಲರಾದರು. ಪೇಸ್-ರಾಜ ಅವರನ್ನು ಕೆಡಹಿದ ಕಬಾಲ್-ಫರಾಹ್ ಕ್ವಾರ್ಟರ್‌ಫೈನಲಿಗೇರಿದರು.