Advertisement

ಪಾರ್ಶ್ವವಾಯು ಭೀತಿ: ಆಸ್ಟ್ರೇಲಿಯನ್‌ ಡೈವರ್‌ ಟನೆಕಾ ಭಾವುಕ ವಿದಾಯ

06:55 AM Apr 05, 2018 | Team Udayavani |

ಗೋಲ್ಡ್‌ಕೋಸ್ಟ್‌: ಕಾಮನ್ವೆಲ್ತ್‌ ಗೇಮ್ಸ್‌ ಸ್ಪರ್ಧೆಗೂ ಮುನ್ನವೇ ಆಸ್ಟ್ರೇಲಿಯನ್‌ ಡೈವರ್‌ ಟನೆಕಾ ಕೊಚೆಂಕೊ ಪಾರ್ಶ್ವವಾಯುವಿಗೆ ತುತ್ತಾಗುವ ಭೀತಿಯಿಂದ ಡೈವಿಂಗ್‌ ಬದುಕಿಗೆ ವಿದಾಯ ಹೇಳಿದ್ದಾರೆ. ಡೈವ್‌ ವೇಳೆ ಇನ್ನೊಂದೇ ಬಾರಿ ಎಡವಿದರೂ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಸಿರುವುದರಿಂದ ಟನೆಕಾ ಭಾವುಕ ವಿದಾಯ ಹೇಳಿದ್ದಾರೆ.

Advertisement

23ರ ಹರೆಯದ ಟನೆಕಾ ಗೋಲ್ಡ್‌ಕೋಸ್ಟ್‌ ಗೇಮ್ಸ್‌ ವನಿತಾ ಸಿಂಕ್ರೊನೈಸ್ಡ್ 10ಮೀ. ಡೈವಿಂಗ್‌ನಲ್ಲಿ ಪದಕ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದರು. ಆದರೆ ಕಳೆದ ವರ್ಷಾಂತ್ಯದಿಂದಲೂ ಒಂದು ವಿಧದ ತಲೆನೋವಿನಿಂದ ನರಳುತ್ತಿದ್ದುದು ಅವರ ಪದಕದಾಸೆಗೆ ತಣ್ಣೀರೆರಚಿದೆ.

“14 ವರ್ಷಗಳ ಕಾಲ ಡೈವಿಂಗ್‌ನಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಿದ್ದ ಅಪೂರ್ವ ಅವಕಾಶ ನನ್ನದು. ಈ ಸಂದರ್ಭ ನನ್ನ ಕನಸನ್ನೂ ನಾನು ಬೆನ್ನು ಹತ್ತಿದ್ದೇನೆ. ಎಲ ಅವಕಾಶ, ಅನುಭವಗಳಿಗೂ ನಾನು ಕೃತಜ್ಞನಾಗಿದ್ದೇನೆ’ ಎಂದು ವಿದಾಯ ಘೋಷಿಸುತ್ತ ಟನೆಕಾ ಭಾವುಕ‌ರಾದರು.

Advertisement

Udayavani is now on Telegram. Click here to join our channel and stay updated with the latest news.

Next