Advertisement
ಪರಪ್ಪನ ಅಗ್ರಹಾರ ಸಮೀಪದ ಚನ್ನ ಕೇಶವ ನಗರ ನಿವಾಸಿ ಮೋನಿಷ್ ಅಲಿ ಯಾಸ್ ಮನು(24), ಹೊಂಗಸಂದ್ರ ನಿವಾಸಿ ಲೋಕೇಶ್(2), ಬೊಮ್ಮನಹಳ್ಳಿ ನಿವಾಸಿ ಕಿಶೋರ ಶಿವ (19), ಎಂ.ಆದಿ ಅಲಿಯಾಸ್ ಆಥಿ(21), ಜಯನಗರ ನಿವಾಸಿ ದಿಲೀಪ್ ಕುಮಾರ್ (26) ಮತ್ತು ತಿಲಕ ನಗರ ನಿವಾಸಿ ಸತೀಶ್(25) ಬಂಧಿತರು. ಆರೋಪಿಗಳು ಫೆ.5ರಂದು ಆಸ್ಟ್ರೇಲಿಯಾ ಪ್ರಜೆ ಅಲೋಕ್ ರಾಣಾ ಎಂಬುವರನ್ನು ಅಪಹರಿಸಿದ್ದರು.
Related Articles
Advertisement
ಆ ನಂತರ ಅರವಿಂದ್ ಎಂಬ ಹೆಸರಿಗೆ 78 ಸಾವಿರ ರೂ., ಆದಿ ಅಲಿಯಾಸ್ ಆಥಿ ಖಾತೆಗೆ 20 ಸಾವಿರ ರೂ. ಹಣ ವರ್ಗಾಹಿಸಿಕೊಂಡಿದ್ದಾರೆ. ಅಲ್ಲದೆ, ಮತ್ತೂಮ್ಮೆ ಹಲ್ಲೆ ನಡೆಸಿ, ಸಹೋದರ ಅಮೀತ್ ರಾಣಾನಿಂದ ತುರ್ತು ಸಮಸ್ಯೆ ಎಂದು 40 ಸಾವಿರ ರೂ. ವರ್ಗಾಯಿಸಿಕೊಳ್ಳುವಂತೆ ಹೇಳಿ, ಆ ಹಣವನ್ನೂ ಆರೋಪಿಗಳು ಸುಲಿಗೆ ಮಾಡಿ ದ್ದಾರೆ. ಅಷ್ಟಾದರೂ ಮತ್ತೂಮ್ಮೆ ಅಮೀತ್ ರಾಣಾಗೆ ಕರೆ ಮಾಡಿಸಿ, ಹಣಕ್ಕೆ ಬೇಡಿಕೆ ಇಡಿಸಿ ದ್ದಾರೆ. ಅದರಿಂದ ಅನುಮಾನಗೊಂಡ ಅಮೀತ್ ರಾಣಾ, ಅಲೋಕ್ ರಾಣಾನ ಕಾರಿನ ಜಿಪಿಎಸ್ ಆಧರಿಸಿ ಸ್ಥಳಕ್ಕೆ ತೆರಳಿದ್ದಾರೆ. ಆಗ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ಮೊಬೈಲ್ ನೆಟ್‌ವರ್ಕ್ ಆಧರಿಸಿ ಬಂಧನ: ಪರಾರಿ ಆಗುವಾಗ ಅಲೋಕ್ ರಾಣಾನ ಕಾರಿನಲ್ಲಿ ಮೋನಿಷ್ ಮೊಬೈಲ್ ಬಿಟ್ಟು ಹೋಗಿದ್ದ. ಈ ಮೊಬೈಲ್ ನೆಟ್‌ವರ್ಕ್ ಆಧರಿಸಿ, ಮೊದಲಿಗೆ ಆತನನ್ನು ಬಂಧಿಸಲಾಗಿತ್ತು. ಬಳಿಕ ತಮಿಳುನಾಡು ಇತರೆಡೆ ಹೋಗಿದ್ದ ಇತರೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮೈಕೋ ಲೇಔಟ್ ಉಪವಿಭಾಗದ ಎಸಿಪಿ ಎಂ.ಇ.ಮನೋಜ್, ಬೊಮ್ಮನಹಳ್ಳಿ ಠಾಣಾಧಿಕಾರಿ ಎಂ.ಚಂದ್ರಶೇಖರ್, ಪಿಎಸ್‌ಐ ಹರೀಶ್,ದರ್ಶನ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.
ಬಿಹಾರದ ಡ್ರಗ್ಸ್ ಪೆಡ್ಲರ್ ಬಂಧನ :
ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೋನಿಷ್ ಹೇಳಿಕೆ ಆಧರಿಸಿ ಬಿಹಾರ ಮೂಲದ ಗಾಂಜಾ ಪೆಡ್ಲರ್‌ನನ್ನು ಬಂಧಿಸಲಾಗಿದೆ. ಸುದ್ದಗುಂಟೆಪಾಳ್ಯ ನಿವಾಸಿ ಸತ್ಯನಾರಾಯಣ ಮಹತೋ(25) ಬಂಧಿತ. ಈತನಿಂದ 24 ಸಾವಿರ ರೂ. ಮೌಲ್ಯದ 410 ಗ್ರಾಂ ಗಾಂಜಾ, ಒಂದು ಮೊಬೈಲ್ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ. ಬಿಹಾರ ಮೂಲದ ಸತ್ಯನಾರಾಯಣ ಮಹತೋ ಉದ್ಯೋಗ ಅರಸಿ ನಗರಕ್ಕೆ ಬಂದು ಸುದ್ದಗುಂಟೆಪಾಳ್ಯದಲ್ಲಿ ನೆಲೆಸಿದ್ದ.