Advertisement
ಪ್ರವಾಸಿ ಶ್ರೀಲಂಕಾ ವಿರುದ್ಧ ಕ್ಯಾನ್‌ಬೆರಾದಲ್ಲಿ ಪ್ರೈಮ್ ಮಿನಿಸ್ಟರ್ ಇಲೆವೆನ್ ತಂಡವನ್ನು ಮುನ್ನಡೆಸಲು ಆ್ಯಡಂ ವೋಗ್ಸ್ ಆಯ್ಕೆಯಾಗಿದ್ದು, ಈ ಪಂದ್ಯಕ್ಕೂ ಒಂದು ದಿನ ಮೊದಲು ನಿವೃತ್ತಿ ಪ್ರಕಟಿಸಿದರು. “ಇದೇ ನನ್ನ ಪಾಲಿನ ಸೂಕ್ತ ನಿರ್ಧಾರವೆನಿಸಿದೆ. ಕೊನೆಯ ಸಲ ಅಂತಾರಾಷ್ಟ್ರೀಯ ತಂಡವೊಂದರ ವಿರುದ್ಧ ಆಡುತ್ತಿದ್ದೇನೆ. ಹೀಗಾಗಿ ಈ ಪಂದ್ಯವನ್ನು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದ್ದೇನೆ’ ಎಂದು 37ರ ಹರೆ ಯದ ವೋಗ್ಸ್ ಹೇಳಿದರು.
ಬಲಗೈ ಆರಂಭಿಕನಾಗಿರುವ ಆ್ಯಡಂ ವೋಗ್ಸ್ ಆಸ್ಟ್ರೇಲಿಯ ಪರ ಕೇವಲ 2 ವರ್ಷಗಳ ಅವಧಿಯಲ್ಲಿ 20 ಟೆಸ್ಟ್, 31 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಟೆಸ್ಟ್‌ನಲ್ಲಿ 5, ಏಕದಿನದಲ್ಲಿ ಒಂದು ಶತಕ ಹೊಡೆದಿದ್ದಾರೆ. 2015ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಟೆಸ್ಟ್‌ಕ್ಯಾಪ್ ಧರಿಸುವ ವೇಳೆಯೇ ವೋಗ್ಸ್‌ಗೆ 35 ವರ್ಷವಾಗಿತ್ತು. ಮೊದಲ ಟೆಸ್ಟ್‌ನಲ್ಲೇ ಶತಕ ಬಾರಿಸಿ ಈ ಸಾಧನೆಗೈದ ವಿಶ್ವದ ಹಿರಿಯ ಕ್ರಿಕೆಟಿಗನೆಂಬ ದಾಖಲೆಗೂ ಪಾತ್ರರಾದರು. ಕಳೆದ ನವಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೋಬರ್ಟ್ ನಲ್ಲಿ ವೋಗ್ಸ್ ಕೊನೆಯ ಟೆಸ್ಟ್ ಆಡಿದ್ದರು. ಈ ಸರಣಿಯ ಮೊದ ಲೆರಡು ಟೆಸ್ಟ್‌ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕಾರಣ ಪೀಟರ್ ಹ್ಯಾಂಡ್ಸ್‌ಕಾಂಬ್‌ಗ ಜಾಗ ಬಿಡಬೇಕಾಯಿತು. ಪೀಟರ್ ಹ್ಯಾಂಡ್ಸ್‌ಕಾಂಬ್ ಮೊದಲ ಟೆಸ್ಟ್ ನಲ್ಲೇ ಶತಕ ಬಾರಿಸಿ ಆಯ್ಕೆಯನ್ನು ಸಮರ್ಥಿಸಿಕೊಂಡರು. ಮೂಲೆ ಗುಂಪಾದ ವೋಗ್ಸ್ ಭಾರತ ಪ್ರವಾಸಕ್ಕೂ ಆಯ್ಕೆಯಾಗಲಿಲ್ಲ. ಆಫ್ರಿಕಾ ವಿರುದ್ಧ ವೋಗ್ಸ್ ಮಧ್ಯಮ ಕ್ರಮಾಂಕಕ್ಕೆ ಹಿಂಬಡ್ತಿ ಪಡೆದಿದ್ದರು.
Related Articles
Advertisement
“ಕಳೆದೆರಡು ವರ್ಷ ಆಸ್ಟ್ರೇ ಲಿಯ ಪರ ಆಡಿದ ಪ್ರತಿ ಯೊಂದು ನಿಮಿಷವನ್ನೂ ನಾನು ಪ್ರೀತಿಸಿದೆ’ ಎಂದು ಭಾವುಕರಾಗಿ ಹೇಳಿದರು.