Advertisement

ಕೋಚ್‌ ಹುದ್ದೆಯಿಂದ ಕೆಳಗಿಳಿದ ಲೇಹ್ಮನ್‌

06:45 AM Mar 30, 2018 | |

ಬಾಲ್‌ ಟ್ಯಾಂಪರಿಂಗ್‌ ಪ್ರಕರಣದಲ್ಲಿ ಶಿಕ್ಷೆಯಿಂದ ಪಾರಾದ ಆಸ್ಟ್ರೇಲಿಯದ ಕ್ರಿಕೆಟ್‌ ಕೋಚ್‌ ಡ್ಯಾರನ್‌ ಲೇಹ್ಮನ್‌ ಗುರುವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಜೊಹಾನ್ಸ್‌ಬರ್ಗ್‌ ಟೆಸ್ಟ್‌ ಪಂದ್ಯವೇ ನನ್ನ ಕೊನೆಯ ಟೆಸ್ಟ್‌ ಆಗಲಿದೆ ಎಂದು ಹೇಳಿದ್ದಾರೆ. ಆಸೀಸ್‌ ತಂಡ ಮಾಡಿಕೊಂಡ “ಚೆಂಡು ವಿರೂಪ’ ಹಗರಣದಿಂದ ಮನನೊಂದಿರುವ ಅವರು ಸ್ವ-ಪ್ರೇರಿತರಾಗಿ ತಂಡದ ಮುಖ್ಯ ತರಬೇತುದಾರ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡರು.

Advertisement

“ಈ ಜಾಗದಲ್ಲಿ ನೆರೆದಿರುವ ಅನೇಕರಿಗೆ ಗೊತ್ತಿದೆ. ನಾನು ಪ್ರೀತಿಪಾತ್ರರೊಂದಿಗೆ ಬದುಕಿನಲ್ಲಿ ಬಹಳಷ್ಟು ದೂರ ಹೆಜ್ಜೆ ಹಾಕಿದ್ದೇನೆ. ಕುಟುಂಬದವರೊಂದಿಗೆ ಚರ್ಚಿಸಿ ನನ್ನ ಜವಾಬ್ದಾರಿಯುತ ಸ್ಥಾನದಿಂದ ಕೆಳಗಿಳಿಯಲು ಇದು ಸಕಾಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ಲೇಹ್ಮನ್‌ ಹೇಳಿದರು.

“ಇದೊಂದು ದುರ್ಘ‌ಟನೆ. ಆಸ್ಟ್ರೇಲಿಯದ ಕ್ರಿಕೆಟ್‌ ಅಭಿಮಾನಿಗಳು ಮುಂದೊಂದು ದಿನ ಇದನ್ನೆಲ್ಲ ಮರೆತು, ಅವರನ್ನು ಕ್ಷಮಿಸಿ ಯುವ ತಂಡದ ಬೆಂಬಲಕ್ಕೆ ನಿಲ್ಲುತ್ತದೆ ಎಂಬು ಭಾವಿಸಿದ್ದೇನೆ’ ಎಂದು ಲೇಹ್ಮನ್‌ ಈ ಸಂದರ್ಭದಲ್ಲಿ ಹೇಳಕಿದರು.

Advertisement

Udayavani is now on Telegram. Click here to join our channel and stay updated with the latest news.

Next