Advertisement

ಆಸ್ಟ್ರೇಲಿಯ 202 ಆಲೌಟ್‌: ಸುಸ್ಥಿತಿಯಲ್ಲಿ ಪಾಕ್‌

06:00 AM Oct 10, 2018 | |

ದುಬಾೖ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಪಾಕಿಸ್ಥಾನ ತಂಡವು ಆಸ್ಟ್ರೇಲಿಯ ತಂಡದೆದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಹ್ಯಾರಿಸ್‌ ಸೊಹೈಲ್‌ ಅವರ ಚೊಚ್ಚಲ ಶತಕ ಸಂಭ್ರಮದಿಂದಾಗಿ ಪಾಕಿಸ್ಥಾನ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 482 ರನ್‌ ಗಳಿಸಿ ಆಲೌಟಾಯಿತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ ಆಸ್ಟ್ರೇಲಿಯ ತಂಡವು ಮೊಹಮ್ಮದ್‌ ಅಬ್ಟಾಸ್‌ ಮತ್ತು ಬಿಲಾಲ್‌ ಆಸಿಫ್ ಅವರ ಬಿಗು ದಾಳಿಗೆ ತತ್ತರಿಸಿ ಕೇವಲ 202 ರನ್ನಿಗೆ ಸರ್ವಪತನ ಕಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 280 ರನ್‌ ಮುನ್ನಡೆ ಪಡೆದರೂ ಫಾಲೋ ಆನ್‌ ನೀಡದ ಪಾಕಿಸ್ಥಾನವು ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಪಾಕಿಸ್ಥಾನ ಮೂರು ವಿಕೆಟ್‌ ಕಳೆದುಕೊಂಡಿದ್ದು 45 ರನ್‌ ಗಳಿಸಿದೆ. 

Advertisement

ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು ಪಾಕಿಸ್ಥಾನ ಈಗಾಗಲೇ 325 ರನ್‌ ಮುನ್ನಡೆ ಪಡೆದಿದೆ. ಇನ್ನೂ 7 ವಿಕೆಟ್‌ ಉಳಿಸಿಕೊಂಡಿರುವ ಪಾಕಿಸ್ಥಾನ ಭಾರೀ ಮೊತ್ತ ಪೇರಿಸಿ ಆಸ್ಟ್ರೇಲಿಯ ಗೆಲುವಿಗೆ ಕಠಿನ ಗುರಿ ನಿಗದಿಪಡಿಸಲಿದೆ. 

ಸಂಕ್ಷಿಪ್ತ ಸ್ಕೋರು: ಪಾಕಿಸ್ಥಾನ 482  ಮತ್ತು 3 ವಿಕೆಟಿಗೆ 45 (ಇಮಾಮ್‌ ಉಲ್‌ ಹಕ್‌ 23 ಬ್ಯಾಟಿಂಗ್‌, ಹೋಲಂಡ್‌ 9ಕ್ಕೆ 2); ಆಸ್ಟ್ರೇಲಿಯ 202

Advertisement

Udayavani is now on Telegram. Click here to join our channel and stay updated with the latest news.

Next