Advertisement

ಕರಾಚಿ ಟೆಸ್ಟ್‌ ಪಂದ್ಯ: ಪಾಕ್‌ಗೆ ಫಾಲೋಆನ್‌ ರಿಯಾಯಿತಿ

11:21 PM Mar 14, 2022 | Team Udayavani |

ಕರಾಚಿ: ಕರಾಚಿ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯ ಆತಿಥೇಯ ಪಾಕಿಸ್ಥಾನಕ್ಕೆ ಫಾಲೋಆನ್‌ ರಿಯಾಯಿತಿ ನೀಡಿದೆ. 3ನೇ ದಿನದಾಟದ ಅಂತ್ಯಕ್ಕೆ 489 ರನ್ನುಗಳ ಬೃಹತ್‌ ಮುನ್ನಡೆಯೊಂದಿಗೆ ತನ್ನ ಹಿಡಿತವನ್ನು ಬಿಗಿಗೊಳಿಸಿದೆ.

Advertisement

ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟಿಗೆ 556 ರನ್‌ ರಾಶಿ ಹಾಕಿ ಡಿಕ್ಲೇರ್‌ ಮಾಡಿತು. ಜವಾಬಿತ್ತ ಪಾಕಿಸ್ಥಾನ 148 ರನ್ನಿಗೆ ಕುಸಿಯಿತು. 408 ರನ್‌ ಮುನ್ನಡೆಯ ಹೊರತಾಗಿಯೂ ಆಸೀಸ್‌ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ್ದು, ಒಂದು ವಿಕೆಟಿಗೆ 81 ರನ್‌ ಮಾಡಿದೆ. ಖ್ವಾಜಾ 35 ಮತ್ತು ಲಬುಶೇನ್‌ 37 ರನ್‌ ಮಾಡಿ ಆಡುತ್ತಿದ್ದಾರೆ.

ಇದನ್ನೂ ಓದಿ:ಗುಂಡಿನ ದಾಳಿಗೆ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್‌ ನಂಗಲ್‌ ಬಲಿ

ಸ್ಟಾರ್ಕ್‌ (29ಕ್ಕೆ 3), ಸ್ವೆಪ್ಸನ್‌ (32ಕ್ಕೆ 2) ಸೇರಿದಂತೆ ಕಾಂಗರೂ ಬೌಲಿಂಗ್‌ ಪಡೆ ಪಾಕ್‌ ಸರದಿಯ ಮೇಲೆ ಘಾತಕವಾಗಿ ಎರಗಿತು. ಖ್ವಾಜಾ ಒಬ್ಬರೇ ಬಾರಿಸಿದ ರನ್ನನ್ನೂ (160) ಪಾಕಿಸ್ಥಾನದಿಂದ ಗಳಿ ಸಲಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next